ಹಸೆಮಣೆ ಏರಿದ 'ಸಿದ್ಧಾರ್ಥ'ನ ಸ್ನೇಹಿತೆ ನಯನ
Recommended Video

ಹಸೆಮಣೆ ಏರಿದ ವಿನಯ್ ರಾಜ್‌ಕುಮಾರ್ ಸ್ನೇಹಿತೆ...! | Filmibeat Kannada
ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. 'ಪ್ಯಾಟೆ ಹುಡುಗೀರ ಹಳ್ಳಿ ಲೈಫು' ಖ್ಯಾತಿಯ ನಟಿ ನಯನ ಪುಟ್ಟಸ್ವಾಮಿ ವಿವಾಹ ಇಂದು ನೆರವೇರಿದೆ. ಚರಣ್ ತೇಜ್ ಎಂಬ ಯುವಕನ ಜೊತೆ ಸದ್ಯ ನಯನ ಹಸೆಮಣೆ ಏರಿದ್ದಾರೆ.

ಸುವರ್ಣ ವಾಹಿನಿಯ 'ಪ್ಯಾಟೆ ಹುಡುಗೀರ ಹಳ್ಳಿ ಲೈಫು' ಕಾರ್ಯಕ್ರಮದ ಮೂಲಕ ನಯನ ಕನ್ನಡಿಗರಿಗೆ ಪರಿಚಯ ಆದರು. ಆ ಕಾರ್ಯಕ್ರಮದ ಬಳಿಕ ಅವು ಸಿನಿಮಾರಂಗಕ್ಕೆ ಕೂಡ ಎಂಟ್ರಿ ಕೊಟ್ಟಿದರು. ವಿನಯ್ ರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ 'ಸಿದ್ಧಾರ್ಥ' ದಲ್ಲಿ ನಯನ ನಟಿಸಿದ್ದರು. ಚಿತ್ರದಲ್ಲಿ ವಿನಯ್ ಅವರ ಗೆಳತಿಯ ಪಾತ್ರದಲ್ಲಿ ನಯನ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಕೆಲವು ಸಿನಿಮಾಗಳಲ್ಲಿನ ಸಣ್ಣ ಪುಟ್ಟ ಪಾತ್ರಗಳಲ್ಲಿ ಸಹ ನಯನ ಅಭಿನಯಿಸಿದ್ದಾರೆ.

ಡಿಸೆಂಬರ್ ನಲ್ಲಿ ಚರಣ್ ತೇಜ್ ಹಾಗೂ ನಯನ ನಿಶ್ಚಿತಾರ್ಥ ನಡೆದಿತ್ತು. ಇನ್ನು ಇಂದು ನಡೆದ ವಿವಾಹ ಕಾರ್ಯಕ್ರಮಕ್ಕೆ ನಟ ವಿನಯ್ ರಾಜ್ ಕುಮಾರ್ ಭೇಟಿ ನೀಡಿ ನೂತನ ಜೋಡಿಗೆ ಶುಭ ಕೋರಿದ್ದಾರೆ. ಅಂದಹಾಗೆ, ನಯನ ಅವರ ಪತಿ ಚರಣ್ ತೇಜ್ ಮೂಲತಃ ಹೈದರಾಬಾದ್ ನವರಾಗಿದ್ದಾರೆ.
More from Filmibeat
English summary
kannada actress Nayana Puttaswamy got married with Charan Thej Today (June25th)


Click it and Unblock the Notifications











