For Quick Alerts
ALLOW NOTIFICATIONS  
For Daily Alerts

ಬಾಯ್ ಫ್ರೆಂಡ್ ಜೊತೆ ಹಸೆಮಣೆ ಏರಲು ಸಜ್ಜಾದ ನಟಿ ನಯನತಾರಾ

|

ಬಹುಭಾಷೆ ನಟಿ ನಯನತಾರ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತಮಿಳು, ತೆಲುಗು ಮತ್ತು ಲಮಯಾಳಂ ಚಿತ್ರರಂಗದಲ್ಲಿ ಮಿಂಚುತ್ತಿರುವ ನಯನತಾರಾ ಮದುವೆ ಆಗುವ ಪ್ಲಾನ್ ಮಾಡಿದ್ದಾರಂತೆ. ನಯನತಾರಾ ಸದ್ಯ ರಜನಿಕಾಂತ್ ಅಭಿನಯದ 'ದರ್ಬಾರ್' ಮತ್ತು ಜಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಸುಮಾರು ಹನ್ನೊಂದರಿಂದ ಹನ್ನೆರಡು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ನಯನತಾರಾ ಸೌತ್ ಸಿನಿ ಇಂಡಸ್ಟ್ರಿಯ ಟಾಪ್ ಮತ್ತು ಬ್ಯುಸಿಯಸ್ಟ್ ನಟಿಯಾಗಿದ್ದಾರೆ. ಅತೀ ಹೆಚ್ಚು ಸಂಭಾವನೆ ಪಡೆಯುವ ನಯತಾರಾ ಸದ್ಯ ವಿವಾಹ ಜೀವನಕ್ಕೆ ಕಾಲಿಡಲು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಕಾಲಿವುಡ್ ನಲ್ಲಿ ಸದ್ಯ ನಯನತಾರಾ ಮದುವೆ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಅಂದ್ಹಾಗೆ ನಯನಾ ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ ಜೊತೆ ಸದ್ಯದಲ್ಲೆ ಹಸೆಮಣೆ ಏರಲಿದ್ವದಾರೆ. ಕೆಲವು ವರ್ಷಗಳ ಹಿಂದೆಯೆ ನಯನಾ ಮದುವೆ ಆಗುತ್ತಿರುವುದಾಗಿ ಹೇಳಿ ಚಿತ್ರರಂಗವನ್ನೆ ಬಿಡುವ ನಿರ್ಧಾರ ಮಾಡಿದ್ದರು. ಅಲ್ಲದೆ ಚಿತ್ರತಂಡ ಅದ್ಧೂರಿ ಸೆಂಡ್ ಅಪ್ ಕೂಡ ನೀಡಿತ್ತು. ಈಗ ಮತ್ತೆ ನಯನತಾರಾ ಮದುವೆ ವಿಚಾರ ಸದ್ದು ಮಾಡುತ್ತಿದೆ. ಮುಂದೆ ಓದಿ..

ವಿಘ್ನೇಶ್ ಶಿವನ್ ಜೊತೆ ನಯನಾ ಮದುವೆ

ತಮಿಳು ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಯನತಾರಾ ಹಸೆ ಮಣೆ ಏರುತ್ತಿದ್ದಾರಂತೆ. ಈಗಾಗಲೆ ಮದುವೆ ಆಗಲು ಈ ಜೋಡಿ ನಿರ್ಧಾರ ಮಾಡಿದೆಯಂತೆ. ಸುಮಾರು ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿರುವ ಈ ಜೋಡಿ ಹಕ್ಕಿ ಇದೇ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷ ಆರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರಂತೆ. ಹೀಗಂತ ಕಾಲಿವುಡ್ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿದೆ.

ಈ ವರ್ಷದ ಕೊನೆಯಲ್ಲಿ ನಯನತಾರಾ ನಿಶ್ಚಿತಾರ್ಥ

ಸುಮಾರು ಐದು ವರ್ಷಗಳಿಂದ ಒಬ್ಬರೊನ್ನೊಬ್ಬರು ಪ್ರೀತಿಸುತ್ತಿರುವ ನಯನಾ ಮತ್ತು ವಿಘ್ನೇಶ್ ಮುಂದಿನ ವರ್ಷಾರಂಭದಲ್ಲಿ ಹಸೆಮಣೆ ಏರಲಿದ್ದಾರಂತೆ. ಈ ವರ್ಷದ ಕೊನೆಯಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳಲು ಪ್ಲಾನ್ ಮಾಡಿದೆಯಂತೆ. ಸುಮಾರು ಐದು ವರ್ಷಗಳಿಂದ ಒಟ್ಟಿಗೆ ಸುತ್ತಾಡುತ್ತಿದ್ದ ಈ ಜೋಡಿಹಕ್ಕಿ ಯಾವುದೆ ಖಾಸಗಿ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಪಾರ್ಟಿ, ಫಾರಿನ್ ಟ್ರಿಪ್ ಅಂತ ಓಡಾಡಿಕೊಂಡಿದ್ದ ಇವರು ಈಗ ಮದುವೆ ಆಗುವ ನಿರ್ಧಾರ ಮಾಡಿದ್ದಾರೆ. ಅಲ್ಲದೆ ಇವರ ಮದುವೆಗೆ ಇಬ್ಬರು ಕುಟುಂಬದವರ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆಯಂತೆ.

2015ರಲ್ಲಿ ಪರಿಚಯವಾಗಿದ್ದ ವಿಘ್ನೇಶ್

ನಯನತಾರಾ ಮತ್ತು ವಿಘ್ನೇಶ್ ಶಿವನ್ ಒಬ್ಬರಿಗೊಬ್ಬರು ಪರಿಚಯವಾಗಿದ್ದು 2015ರಲ್ಲಿ. ನಯನತಾರಾ ಅಭಿನಯದ 'ನಾನುಮ್ ರೌಡಿ ಧಾನ್' ಚಿತ್ರಕ್ಕೆ ವಿಘ್ನೇಶ್ ಶಿವನ್ ಆಕ್ಷನ್ ಕಟ್ ಹೇಳಿದ್ದರು. ಅಲ್ಲಿಂದ ಪ್ರಾರಂಭವಾದ ಇಬ್ಬರ ಸ್ನೇಹಾ ನಂತರ ಪ್ರೀತಿಗೆ ತಿರುಗಿ ಈಗ ಮದುವೆ ಹಂತಕ್ಕೆ ಬಂದಿದೆ. 'ನಾನುಮ್ ರೌಡಿ ಧಾನ್' ವಿಘ್ನೇಶ್ ಮತ್ತು ನಯನತಾರಾ ಕಾಂಬಿನೇಶನ್ ನ ಮೊದಲ ಸಿನಿಮಾ. ವಿಜಯ್ ಸೇತುಪತಿ ನಾಯಕನಾಗಿ ಕಾಣಿಸಿಕೊಂಡಿದ್ದರು.

ಪ್ರಭುದೇವ ಜೊತೆ ಬ್ರೇಕ್

ನಯನತಾರ ಹೆಸರು ಡಾನ್ಸರ್, ನಟ ಮತ್ತು ನಿರ್ದೇಶಕ ಪ್ರಭುದೇವ ಜೊತೆ ತಗಲುಹಾಕಿಕೊಂಡಿತ್ತು. 2009ರಲ್ಲಿ ಇಬ್ಬರ ಸಂಬಂದ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು. ಕಾರಣ ಪ್ರಭುದೇವ ಮೊದಲ ಪತ್ನಿಯಿಂದ ದೂರ ಆದ ನಂತರ ನಯನತಾರಾ ಜೊತೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದರು. ಇಬ್ಬರ ಈ ಸ್ನೇಹ ನೋಡಿ ಈ ಜೋಡಿ ಖಂಡಿತಾ ಮದುವೆ ಆಗುತ್ತಾರೆ ಅಂತಾನೆ ಹೇಳಲಾಗಿತ್ತು. ಅಲ್ಲದೆ ಪ್ರಭುದೇವ ಕೂಡ ನಯನತಾರ ಅವರನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಆದ್ರೆ ಇಬ್ಬರ ನಡುವೆ ಅದೇನಾಯ್ತೊ ಮೂರು ವರ್ಷದ ಇಬ್ಬರ ಸಂಬಂದ ದಿಢೀರನೆ ಮುರಿದುಬಿತ್ತು. ಆ ನಂತರ ನಯನಾ ವಿಘ್ನೇಶ್ ಪ್ರೀತಿಯ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ.

English summary
Actress Nayanthara and Vignesh Shiva are reportedly all set to get engaged in this year-end. Their wedding is apparently scheduled for 2020. They met on the sets of 2015 film Naanum Rowdydhaan.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more