For Quick Alerts
  ALLOW NOTIFICATIONS  
  For Daily Alerts

  ವಿವಾಹದ ನಂತರ ಮತ್ತೆ ಸಿನಿಮಾಗಳತ್ತ ನಯನತಾರಾ; ನೂತನ ಚಿತ್ರದ ಪೋಸ್ಟರ್ ರಿಲೀಸ್

  |

  ನಟಿ ನಯನತಾರಾ ತಮ್ಮ ಬಹುದಿನಗಳ ಗೆಳೆಯ ವಿಗ್ನೇಶ್ ಶಿವನ್ ಅವರ ಜತೆ ಇತ್ತೀಚೆಗಷ್ಟೇ ವಿವಾಹವಾಗಿದ್ದ ಕಾರಣ ಕಳೆದ ಕೆಲ ತಿಂಗಳುಗಳ ಕಾಲ ಸಿನಿಮಾ ಕೆಲಸಗಳಿಂದ ದೂರ ಉಳಿದು ಪ್ರವಾಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

  ಹೀಗೆ ವಿದೇಶಿ ಪ್ರವಾಸದಲ್ಲಿ ತೊಡಗಿಕೊಂಡಿದ್ದ ನಟಿ ನಯನತಾರಾ ಇದೀಗ ಸಿನಿಮಾ ಕೆಲಸಗಳತ್ತ ಮತ್ತೆ ಮುಖ ಮಾಡಿದ್ದು, ನಯನತಾರ ಅಭಿನಯಿಸುತ್ತಿರುವ ತೆಲುಗಿನ ಗಾಡ್ ಫಾದರ್ ಚಿತ್ರದ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ.

  ನಯನತಾರಾ ಬಗ್ಗೆ ಹೀಗೊಂದು ಸುದ್ದಿ: ಅಭಿಮಾನಿಗಳಲ್ಲಿ ಫುಲ್ ಟೆನ್ಶನ್! ನಯನತಾರಾ ಬಗ್ಗೆ ಹೀಗೊಂದು ಸುದ್ದಿ: ಅಭಿಮಾನಿಗಳಲ್ಲಿ ಫುಲ್ ಟೆನ್ಶನ್!

  ಗಾಡ್ ಫಾದರ್ ಮಲಯಾಳಂನ ಬ್ಲಾಕ್ ಬಸ್ಟರ್ ಲೂಸಿಫರ್ ಚಿತ್ರದ ರಿಮೇಕ್ ಆಗಿದ್ದು, ಅಲ್ಲಿ ಮೋಹನ್ ಲಾಲ್ ನಿರ್ವಹಿಸಿದ್ದ ಲೀಡ್ ಪಾತ್ರವನ್ನು ಇಲ್ಲಿ ಮೆಗಾಸ್ಟಾರ್ ಚಿರಂಜೀವಿ ಮಾಡುತ್ತಿದ್ದು, ಪೃಥ್ವಿರಾಜ್ ಸುಕುಮಾರನ್ ಮಾಡಿದ್ದ ಅತಿಥಿ ಪಾತ್ರವನ್ನು ಇಲ್ಲಿ ಸಲ್ಮಾನ್ ಖಾನ್ ಮಾಡಲಿದ್ದಾರೆ. ಈ ಚಿತ್ರದ ಟೀಸರ್ ಕೂಡ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿತ್ತು ಆದರೆ ಚಿತ್ರದಲ್ಲಿ ನಯನತಾರಾ ಪಾತ್ರದ ಹೆಸರೇನು ಎಂಬುದನ್ನು ಮಾತ್ರ ಇಲ್ಲಿಯವರೆಗೂ ರಿವೀಲ್ ಮಾಡಿರಲಿಲ್ಲ.

  ಆದರೆ ಇಂದು ( ಸೆಪ್ಟೆಂಬರ್ 8 ) ಓಣಂ ಹಬ್ಬದ ಪ್ರಯುಕ್ತವಾಗಿ ನಯನತಾರಾ ಫಸ್ಟ್ ಲುಕ್ ಪೋಸ್ಟರ್ ಅನ್ನು ಗಾಡ್ ಫಾದರ್ ತಂಡ ಬಿಡುಗಡೆಗೊಳಿಸಿದೆ. ಕೊನಿಡೆಲಾ ಪ್ರೊಡಕ್ಷನ್ ಕಂಪನಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಪೋಸ್ಟರ್ ಬಿಡುಗಡೆಗೊಂಡಿದ್ದು, ನಯನತಾರಾ ಪಾತ್ರದ ಹೆಸರನ್ನು ರಿವೀಲ್ ಮಾಡಲಾಗಿದೆ. ಈ ಚಿತ್ರದಲ್ಲಿ ನಯನತಾರಾ ಸತ್ಯಪ್ರಿಯ ಜಯದೇವ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇನ್ನು ನಯನತಾರಾ ಕಾಣಿಸಿಕೊಳ್ಳಲಿರುವ ಈ ಪಾತ್ರವನ್ನು ಮೂಲ ಚಿತ್ರವಾದ ಲೂಸಿಫರ್‌ನಲ್ಲಿ ಮಂಜು ವಾರಿಯರ್ ನಿರ್ವಹಿಸಿದ್ದರು.

  Nayantharas firstlook poster from GodFather has been revealed

  ಇನ್ನು ಈ ಪೋಸ್ಟರ್‌ನಲ್ಲಿ ಚಿತ್ರವು ಇದೇ ವರ್ಷದ ಅಕ್ಟೋಬರ್ ತಿಂಗಳ 5ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದ್ದು, ಈ ಮೂಲಕ ದಸರಾ ರೇಸ್‌ನಿಂದ ಗಾಡ್ ಫಾದರ್ ಹಿಂದೆ ಸರಿದಿದೆ ಎಂಬ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.

  English summary
  Nayanthara's firstlook poster from GodFather has been revealed
  Friday, September 9, 2022, 9:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X