ಅವಳಿ ಮಕ್ಕಳ ಜೊತೆಗೆ ಮೊದಲ ಓಣಂ ಆಚರಿಸಿದ ನಯನತಾರಾ, ವಿಘ್ನೇಶ್ ಶಿವನ್
ವಿಘ್ನೇಶ್ ಶಿವನ್ ಮತ್ತು ನಯನತಾರಾ ತಮಿಳು ಚಿತ್ರರಂಗದ ಮುದ್ದಾದ ಜೋಡಿಗಳಲ್ಲಿ ಒಂದು. ಈ ದಂಪತಿ ಜೂನ್ 9, 2022 ರಂದು ಮಹಾಬಲಿಪುರಂನಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇವರಿಬ್ಬರಿಗೆ ಉಯಿರ್ ಮತ್ತು ಉಲಗಂ ಎಂಬ ಅವಳಿ ಗಂಡು ಮಕ್ಕಳಿದ್ದಾರೆ. ಈ ಕುಟುಂಬ ಭಾನುವಾರ ಸರಳವಾಗಿ ಓಣಂ ಆಚರಿಸಿದೆ.
ಅಕ್ಟೋಬರ್ 2022 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಾದ ಉಯಿರ್ ಮತ್ತು ಉಲಗಂಗೆ ವಿಘ್ನೇಶ್ ಶಿವನ್ ಮತ್ತು ನಯನತಾರಾ ಪೋಷಕರಾಗಿದ್ದಾರೆ. ಮಕ್ಕಳ ಜೊತೆಗೆ ಮೊದಲ ಓಣಂ ಅನ್ನು ಆಚರಿಸಿರುವ ಈ ದಂಪತಿ, Instagramನಲ್ಲಿ ಅದರ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮಕ್ಕಳೊಂದಿಗೆ ಮೊದಲ ಓಣಂ ಆಚರಿಸಿದ ವಿಘ್ನೇಶ್, ನಯನತಾರಾ
ಪುತ್ರರಾದ ಉಯಿರ್ ಮತ್ತು ಉಲಗಂ ಅವರ ಚಿತ್ರಗಳನ್ನು ವಿಘ್ನೇಶ್ ಶಿವನ್ Instagram ನಲ್ಲಿ ಹಂಚಿಕೊಂಡಿದ್ದಾರೆ. ಅವಳಿ ಮಕ್ಕಳು ಸಾಂಪ್ರದಾಯಿಕ ಪಂಚೆ ಧರಿಸಿ ತಮ್ಮ ಮೊದಲ ಓಣಂ ಅನ್ನು ಆಚರಿಸುತ್ತಿದ್ದಾರೆ. ಮಕ್ಕಳು ಕೊರಳಲ್ಲಿ ಚಿನ್ನದ ಸರ ಮತ್ತು ಕೈಯಲ್ಲಿ ಬಳೆಗಳನ್ನು ಸಹ ಧರಿಸಿದ್ದಾರೆ.
ಓಣಂ ಹಬ್ಬಕ್ಕಾಗಿ ನಯನತಾರಾ ಬಿಳಿ ಸಲ್ವಾರ್ ಧರಿಸಿದ್ದರೆ, ವಿಘ್ನೇಶ್ ಶಿವನ್ ಬಿಳಿ ಶರ್ಟ್ ಮತ್ತು ಪಂಚೆ ಧರಿಸಿದ್ದಾರೆ. ಫೋಟೋಗಳಲ್ಲಿ, ಮಕ್ಕಳಿಬ್ಬರೂ ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಹಬ್ಬದ ಊಟ ಮಾಡುತ್ತಿದ್ದಾರೆ. ಯಾವುದೇ ಫೊಟೋಗಳಲ್ಲಿಯೂ ಮಕ್ಕಳ ಮುಖವನ್ನು ದಂಪತಿ ತೋರಿಸಿಲ್ಲ.
ವಿಘ್ನೇಶ್ ಶಿವನ್ ಮಕ್ಕಳ ಫೋಟೋಗಳನ್ನು ಶೇರ್ ಮಾಡಿ, "ನನ್ನ ಉಯಿರ್ ಮತ್ತು ಉಲಗಮ್‌ನೊಂದಿಗೆ ಮೊದಲ ಓಣಂ. ದೇವರ ಆಶೀರ್ವಾದ. ಹಬ್ಬವು ಇಲ್ಲಿ ಬೇಗ ಆರಂಭವಾಗುತ್ತದೆ. ಮುಂಚಿತವಾಗಿಯೇ ಎಲ್ಲರಿಗೂ ಓಣಂ ಹಬ್ಬದ ಶುಭ ಹಾರೈಸುತ್ತೇನೆ" ಎಂದು ಹೇಳಿದ್ದಾರೆ.

ಇದರ ಜೊತೆಗೆ ವಿಘ್ನೇಶ್ ಶಿವನ್ ಅವರು ನಯನತಾರಾ ಅವರೊಂದಿಗಿನ ಎರಡು ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ನಮ್ಮ ಅತ್ಯಂತ ಸರಳ, ಸುಂದರ ಜೀವನದಲ್ಲಿ! ಒಂದು ಸುಂದರ, ಸರಳ ಕ್ಷಣ ವಿಶೇಷವೆನಿಸುತ್ತದೆ. ಓಣಂ ಹಬ್ಬ ನನ್ನ ಉಯಿರ್ ಮತ್ತು ಉಲಗಮ್‌ನೊಂದಿಗೆ ಪ್ರಾರಂಭವಾಗುತ್ತವೆ. ಮುಂಚಿತವಾಗಿ ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು" ಎಂದು ಹೇಳಿದ್ದಾರೆ.
ವಿಘ್ನೇಶ್ ಶಿವನ್ ಮತ್ತು ನಯನತಾರಾ ಲವ್ ಸ್ಟೋರಿ
ವಿಘ್ನೇಶ್ ಶಿವನ್ ಮತ್ತು ನಯನತಾರಾ 2015 ರಲ್ಲಿ ನಾನುಮ್ ರೌಡಿ ಧಾನ್ ಸಿನಿಮಾ ಸೆಟ್‌ನಲ್ಲಿ ಮೊದಲ ಬಾರಿಗೆ ಪರಸ್ಪರ ಭೇಟಿಯಾದರು. ಚಿತ್ರದ ಸೆಟ್‌ನಲ್ಲಿ ಒಟ್ಟಿಗೆ ಸಮಯ ಕಳೆದು ಡೇಟಿಂಗ್ ಮಾಡಲು ಪ್ರಾರಂಭಿಸಿದರು. 2021 ರಲ್ಲಿ, ವಿಘ್ನೇಶ್ ಶಿವನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಚಿತ್ರದಲ್ಲಿ ನಯನತಾರಾ ತಮ್ಮ ನಿಶ್ಚಿತಾರ್ಥದ ಉಂಗುರವನ್ನು ತೋರಿಸಿ, ತಾವು ಎಂಗೇಜ್ ಎಂದು ಬಹಿರಂಗಪಡಿಸಿದ್ದರು.
ಒಂದು ವರ್ಷದ ನಂತರ, ಈ ಜೋಡಿ ಜೂನ್ 9, 2022 ರಂದು ವಿವಾಹವಾದರು. ಅಕ್ಟೋಬರ್ 9, 2022 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಅವರು ಅವಳಿ ಗಂಡು ಮಕ್ಕಳಾದ ಉಯಿರ್ ರುದ್ರೋನೀಲ್ ಎನ್ ಶಿವನ್ ಮತ್ತು ಉಲಗಂ ದೈವಿಕ್ ಎನ್ ಶಿವನ್ ಎಂಬ ಮಕ್ಕಳಿಗೆ ಫೋಷಕರಾಗಿದ್ದಾರೆ.
ಸದ್ಯ ನಟಿ ನಯನತಾರ ಬಾಲಿವುಡ್‌ಗೆ ಕಾಲಿಡುತ್ತಿದ್ದು, ಮೊದಲ ಸಿನಿಮಾದಲ್ಲಿಯೇ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರೊಂದಿಗೆ ಬಹುನಿರೀಕ್ಷಿತ ಜವಾನ್ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಜವಾನ್ ಸೆಪ್ಟಂಬರ್ ಏಳರಂದು ತೆರೆಗೆ ಬರಲಿದೆ. ಇದರಲ್ಲಿ ವಿಜಯ್ ಸೇತುಪತಿ, ಪ್ರಿಯಾಮಣಿ, ಸಾನ್ಯಾ ಮಲೋತ್ರಾ ಕೂಡ ಕಾಣಿಸಿಕೊಂಡಿದ್ದಾರೆ.


Click it and Unblock the Notifications











