ಮೇಘನಾ-ಚಿರು ಮಗು ನೋಡಲು ಕೇರಳದಿಂದ ಬಂದ ಸ್ಟಾರ್ ದಂಪತಿ
ನಟಿ ಮೇಘನಾ ರಾಜ್ ಗೆ ಮಗು ಜನಿಸಿರುವುದು ಸರ್ಜಾ ಹಾಗೂ ಮೇಘನಾ ಕುಟುಂಬಕ್ಕೆ ಅತೀವ ಸಂತಸ ತಂದಿದೆ.
Recommended Video

ಮೇಘನಾ ರಾಜ್, ಅಕ್ಟೋಬರ್ 22 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚಿರಂಜೀವಿ ಸರ್ಜಾ ಅನ್ನು ಕಳೆದುಕೊಂಡು ನೋವಿನಲ್ಲಿದ್ದ ಸರ್ಜಾ ಕುಟುಂಬ, ಚಿರಂಜೀವಿ ಸರ್ಜಾ ಅವರೇ ಮಗುವಿನ ರೂಪದಲ್ಲಿ ಮರಳಿ ಬಂದಿದ್ದಾರೆ ಎಂದು ಸಂತಸದಿಂದಿದ್ದಾರೆ.
ಮೇಘನಾ ಪುತ್ರನನ್ನು ಕಾಣಲು ಚೆನ್ನೈನಿಂದ ಅರ್ಜುನ್ ಸರ್ಜಾ ದಂಪತಿ ಹಾಗೂ ಪುತ್ರಿ ಐಶ್ವರ್ಯಾ ನಿನ್ನೆ ಆಗಮಿಸಿದ್ದರು. ಇಂದು ಕೇರಳದಿಂದ ಸ್ಟಾರ್ ದಂಪತಿ ಮೇಘನಾ ಮಗುವನ್ನು ಎತ್ತಿ ಮುದ್ದಾಡಲು ಬಂದಿದ್ದಾರೆ.

ಹಲವು ಮಲಯಾಳಂ ಸಿನಿಮಾಗಳಲ್ಲಿ ಮೇಘನಾ ನಟನೆ
ಹೌದು, ಮೇಘನಾ ರಾಜ್ ಗೆ ಮಲಯಾಳಂ ಸಿನಿಮಾ ಉದ್ಯಮದಲ್ಲಿ ಸಾಕಷ್ಟು ಗೆಳೆಯರಿದ್ದಾರೆ. ಮಲಯಾಳಂ ನ ಹಲವು ಸಿನಿಮಾಗಳಲ್ಲಿ ಮೇಘನಾ ರಾಜ್ ನಟಿಸಿದ್ದಾರೆ. ಹಾಗಾಗಿ ಸಹಜವಾಗಿಯೇ ಅಲ್ಲಿ ಸಾಕಷ್ಟು ಗೆಳೆಯರಿದ್ದಾರೆ, ಆದರೆ ಮೇಘನಾ ರ ಆಪ್ತ ಗೆಳತಿ ಸ್ಟಾರ್ ನಟಿ ನಾಜರಿಯಾ.

ಕೇರಳದಿಂದ ಆಗಮಿಸಿದ ನಾಜರಿಯಾ-ಫಹಾದ್ ದಂಪತಿ
ಆಪ್ತ ಗೆಳತಿಯ ಮಗನನ್ನು ನೋಡಲು ಕೇರಳದಿಂದ ಇಂದು ನಾಜರಿಯಾ ಹಾಗೂ ಪತಿ ಫವಾದ್ ಬೆಂಗಳೂರಿಗೆ ಆಗಮಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ನಾಜರಿಯಾ ಹಾಗೂ ಫವಾದ್ ಮೇಘನಾ ಮಗುವನ್ನು ಕಂಡು ಸಂತಸ ಪಟ್ಟಿದ್ದಾರೆ, ಮೇಘನಾ ಗೆ ಶುಭಾಶಯ ಸಹ ಕೋರಿದ್ದಾರೆ.

ಮೇಘನಾ-ನಾಜರಿಯಾ ಅತ್ಯಾಪ್ತ ಗೆಳತಿಯರು
ಮೇಘನಾ-ನಾಜರಿಯಾ ಅತ್ಯಾಪ್ತ ಗೆಳತಿಯರು. ನಾಜರಿಯಾ, ಚಿರಂಜೀವಿ ಸರ್ಜಾ ಗೆ ಸಹ ಆಪ್ತ ಗೆಳೆಯರಾಗಿದ್ದರು. ನಾಜರಿಯಾ ಹಲವು ಬಾರಿ ಬೆಂಗಳೂರಿಗೆ ಬಂದು ಚಿರಂಜೀವಿ ಸರ್ಜಾ ಹಾಗೂ ಮೇಘನಾ ಜೊತೆಗೆ ಸಮಯ ಕಳೆದಿದ್ದರು.

ಸಂತಸ-ದುಖಃದ ಸಂದರ್ಭದಲ್ಲಿ ಜೊತೆಯಾಗಿದ್ದರು ನಾಜರಿಯಾ ದಂಪತಿ
ಮೇಘನಾ-ಚಿರು ಅವರ ಎಲ್ಲ ಸಂತಸದ ಸಂದರ್ಭದಲ್ಲಿಯೂ ನಾಜರಿಯಾ-ಫಹಾದ್ ಪಾಲ್ಗೊಂಡಿದ್ದರು. ಮೇಘನಾ-ಚಿರು ಅವರ ನಿಶ್ಚಿತಾರ್ಥ, ಮದುವೆಗಳಲ್ಲಿ ಈ ದಂಪತಿ ಭಾಗವಹಿಸಿದ್ದರು. ಚಿರು ಅಗಲಿದ ಬಳಿಕವೂ ಒಮ್ಮೆ ನಾಜರಿಯಾ-ಫಹಾದ್ ದಂಪತಿ ಮೇಘನಾ ರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದರು.


Click it and Unblock the Notifications











