ಡ್ರಗ್ಸ್ ಪ್ರಕರಣ: ಬಿಗ್‌ಬಾಸ್ ಸ್ಪರ್ಧಿ ಆಡಂ ಪಾಷಾ ಬಂಧನ
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ಆಡಂ ಪಾಷಾ ಅನ್ನು ಎನ್‌ಸಿಬಿ ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಬೆಂಗಳೂರು ನಗರದಲ್ಲಿ ಬಂಧನಕ್ಕೆ ಒಳಗಾಗಿದ್ದ ಅನಿಕಾ ಳಿಂದ ಮಾದಕ ವಸ್ತುವನ್ನು ಆಡಂ ಪಾಷಾ ಖರೀದಿಸಿದ್ದಾರೆ ಎಂಬ ಆರೋಪದ ಮೇಲೆ ಎನ್‌ಸಿಬಿ ಅಧಿಕಾರಿಗಳು ಆಡಂ ಪಾಷಾ ಅನ್ನು ಬಂಧಿಸಿದ್ದಾರೆ.
ಅನಿಕಾಳನ್ನು ಬಂಧಿಸಿದ್ದಾಗ ಮಾತನಾಡಿದ್ದ ಆಡಂ ಪಾಷಾ, 'ಅನಿಕಾ ನನ್ನ ಗೆಳತಿ, ಆಕೆಯೊಂದಿಗೆ ಆಪ್ತತೆ ಇದೆ, ಆದರೆ ಆಕೆಯ ಡ್ರಗ್ಸ್ ವ್ಯವಹಾರದ ಬಗ್ಗೆ ನನಗೆ ಗೊತ್ತಿಲ್ಲ' ಎಂದಿದ್ದರು.

Recommended Video
ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾದ Meghana Raj | Filmibeat Kannada
ಆದರೆ ಈಗ ಅನಿಕಾಳಿಂದ ಸೇವನೆಗೆಂದು ಡ್ರಗ್ಸ್ ಕೊಂಡುಕೊಂಡಿದ್ದಾರೆ ಎಂಬ ಆರೋಪದ ಮೇಲೆ ಆಡಂ ಪಾಷಾ ಅನ್ನು ಬಂಧಿಸಲಾಗಿದೆ. ಈ ಹಿಂದೆ ಬಿಗ್‌ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಆಡಂ ಪಾಷಾ, ತೃತಿಯ ಲಿಂಗಿ ಆಗಿದ್ದಾರೆ.
More from Filmibeat
English summary
NCB officers arrested bigg boss former contestant Adam Pasha releated to drugs case.


Click it and Unblock the Notifications











