ಈ ಕಾರಣಕ್ಕಾಗಿ ಪುನೀತ್ ಗೆ ಸಾಥ್ ನೀಡಿದ ರಕ್ಷಿತ್ ಶೆಟ್ಟಿ ಮತ್ತು ವಿಜಯ್ ದೇವರಕೊಂಡ

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಇಬ್ಬರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗಾಗಿ ಒಂದಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ವಿಚಾರವಾಗಿ ಈ ಇಬ್ಬರು ನಟರು ದೊಡ್ಡ ಮಟ್ಟಕ್ಕೆ ಸುದ್ದಿಯಾಗಿದ್ದರು. ಇದೀಗ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರಕ್ಕಾಗಿ ಈ ಇಬ್ಬರು ಸ್ಟಾರ್ ನಟರು ಕೈಜೋಡಿಸಿರುವುದು ಅಚ್ಚರಿ ಮೂಡಿಸಿದೆ.

ಅಂದಹಾಗೆ ಪವರ್ ಸ್ಟಾರ್ ಅಭಿನಯದ ಯುವರತ್ನ ಸಿನಿಮಾತಂಡ ಕ್ರಿಸ್ಮಸ್ ಗೆ ಭರ್ಜರಿ ಉಡುಗೊರೆ ನೀಡಲು ತಯಾರಾಗಿದೆ. ಚಿತ್ರದಿಂದ ಎರಡನೇ ಹಾಡನ್ನು ರಿಲೀಸ್ ಮಾಡುವುದಾಗಿ ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಯುವರತ್ನ ಸಿನಿಮಾದ ಮೋಸ್ಟ್ ಮೆಲೋಡಿ ರೊಮ್ಯಾಂಟಿಕ್ ಹಾಡು ಇದಾಗಿದೆ. ಇದೀಗ ಬಂದ ಅಪ್ ಡೇಟ್ ಎಂದರೆ ಈ ಹಾಡನ್ನು ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಮತ್ತು ತೆಲುಗಿನಲ್ಲಿ ವಿಜಯ್ ದೇವರಕೊಂಡ ರಿಲೀಸ್ ಮಾಡುತ್ತಿದ್ದಾರೆ.

ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ತೆಲುಗಿನಲ್ಲಿ ವಿಜಯ್ ದೇವರಕೊಂಡ

ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ತೆಲುಗಿನಲ್ಲಿ ವಿಜಯ್ ದೇವರಕೊಂಡ

ಯುವರತ್ನ ಸಿನಿಮಾದ ಬಹುನಿರೀಕ್ಷೆಯ ರೊಮ್ಯಾಂಟಿಕ್ ಹಾಡನ್ನು ರಿಲೀಸ್ ಮಾಡುವ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ. , ನೀನಾದೇನಾ ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಯುವರತ್ನದ ಮೆಲೋಡಿ ಹಾಡನ್ನು ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ರಿಲೀಸ್ ಮಾಡುತ್ತಿದ್ರೆ, ತೆಲುಗು ವರ್ಷನ್ ಹಾಡನ್ನು ವಿಜಯ್ ದೇವರಕೊಂಡ ಬಿಡುಗಡೆ ಮಾಡುತ್ತಿದ್ದಾರೆ.

ಕ್ರಿಸ್ಮಸ್ ಗೆ ರಿಲೀಸ್ ಆಗುತ್ತಿದೆ ಹಾಡು

ಕ್ರಿಸ್ಮಸ್ ಗೆ ರಿಲೀಸ್ ಆಗುತ್ತಿದೆ ಹಾಡು

ಅಂದಹಾಗೆ ಯುವರತ್ನ ಸಿನಿಮಾದ ಬಹುನಿರೀಕ್ಷೆಯ ಹಾಡು, ಇದೆ ತಿಂಗಳು 25ಕ್ಕೆ ಅಂದರೆ ಕ್ರಿಸ್ಮಸ್ ಗೆ ರಿಲೀಸ್ ಆಗುತ್ತಿದೆ. ಮಧ್ಯಾಹ್ನ 12.05ಕ್ಕೆ ಹಾಡು ತೆರೆಗೆ ಬರುತ್ತಿದೆ. ಅಂದಹಾಗೆ ಈ ಸುಂದರ ಮೆಲೋಡಿ ಹಾಡನ್ನು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಮತ್ತು ಶ್ರೇಯಾ ಘೋಷಲ್ ಹಾಡಿದ್ದಾರೆ. ಈ ಹಾಡಿಗೆ ಗೌಸ್ ಪೀರ್ ಸಾಹಿತ್ಯ ರಚಿಸಿದ್ದಾರೆ. ತೆಲುಗಿನಲ್ಲಿ ಈ ಹಾಡಿಗೆ ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ರಚಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಕಾಲೆಳೆದ ನೆಟ್ಟಿಗರು

ಹೊಂಬಾಳೆ ಫಿಲ್ಮ್ಸ್ ಕಾಲೆಳೆದ ನೆಟ್ಟಿಗರು

ಹೊಂಬಾಳೆ ಫಿಲ್ಮ್ಸ್ ರಕ್ಷಿತ್ ಶೆಟ್ಟಿ ಮತ್ತು ವಿಜಯ್ ದೇವರಕೊಂಡ, ಯುವರತ್ನ ಚಿತ್ರದ ಹಾಡನ್ನು ರಿಲೀಸ್ ಮಾಡುತ್ತಿದ್ದಾರೆ ಎಂದು ಅನೌನ್ಸ್ ಮಾಡುತ್ತಿದ್ದಂತೆ ನೆಟ್ಟಿಗರು ತರಹೇವಾರಿ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 'ಕಾಂಬಿನೇಷನ್ ಚೆನ್ನಾಗಿದೆ' ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನು ಕೆಲವರು 'ರಶ್ಮಿಕಾ ನಾಯಕಿ ಆಗಿರಬೇಕಿತ್ತು' ಎಂದು ಹೇಳುತ್ತಿದ್ದಾರೆ. 'ರಶ್ಮಿಕಾ ಬೇರೆ ಮಾಡಿದ್ರೆ, ಹೊಂಬಾಳೆ ಫಿಲ್ಮ್ಸ್ ಇಬ್ಬರನ್ನು ಒಂದು ಮಾಡಿದೆ' ಎನ್ನುವ ಕಾಮೆಂಟ್ಸ್ ಹರಿದುಬರುತ್ತಿದೆ.

Recommended Video

ಒಟ್ಟಿಗೆ ಕಾಣಿಸಿಕೊಂಡ ಶಿವಣ್ಣ, ಸುದೀಪ್, ಸಿಂಪಲ್ ಸುನಿ | Filmibeat Kannada
ಮೊದಲ ಹಾಡು ರಿಲೀಸ್ ಆಗಿದೆ

ಮೊದಲ ಹಾಡು ರಿಲೀಸ್ ಆಗಿದೆ

ಈಗಾಗಲೇ ಯುವರತ್ನ ಸಿನಿಮಾದಿಂದ ಮೊದಲ ಹಾಡಿ ರಿಲೀಸ್ ಆಗಿದ್ದು, ಅಭಿಮಾನಿಗಳ ಹೃದಯ ಗೆದ್ದಿದೆ. ಪವರ್ ಆಫ್ ಯೂತ್ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು, ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲೂ ತೆರೆಗೆ ಬಂದಿದೆ. ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಸಿನಿಮಾದ ಹಾಡು ತೆಲುಗಿನಲ್ಲೂ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಂದಹಾಗೆ ಈ ಸಿನಿಮಾದ ಹಾಡುಗಳಿಗೆೆ ತೆಲುಗು ಸಂಗೀತ ನಿರ್ದೇಶಕ ಎಸ್ ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

More from Filmibeat

English summary
Puneeth Rajkumar's Yuvarathnaa movie Nee naade Naa & Aarambame songs to be released by Rakshit shetty & Vijay Deverakonda on Dec 25 at.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X