twitter
    For Quick Alerts
    ALLOW NOTIFICATIONS  
    For Daily Alerts

    ಗಾಂಜಾ ಮಾದಕ ವಸ್ತುವಲ್ಲ, ಕಾನೂನುಬದ್ಧಗೊಳಿಸಿ: ನಟ ರಾಕೇಶ್

    |

    ಚಿತ್ರರಂಗದ ಕೆಲವರಿಗೆ ಮಾದಕ ವಸ್ತು ನಂಟಿದೆ ಎಂಬ ಕುರಿತು ತನಿಖೆ ಸಾಗುತ್ತಿರುವಾಗಲೇ, ಗಾಂಜಾವನ್ನು ಕಾನೂನುಬದ್ಧಗೊಳಿಸಬೇಕು ಎಂಬ ಆಗ್ರಹ ಸಹ ಸಿನಿಮಾ ರಂಗದ ಕೆಲವರಿಂದ ಆಗುತ್ತಿದೆ.

    Recommended Video

    Sandalwood Narcotics Mafia ಬಗ್ಗೆ ಹಿರಿಯ ನಟ ದೊಡ್ಡಣ್ಣ ಬೇಸರ ವ್ಯಕ್ತಪಡಿಸಿದರು | Filmibeat Kannada

    ನಿನ್ನೆಯಷ್ಟೆ ನಟಿ ನಿವೇದಿತಾ, 'ಗಾಂಜಾ ಸಿಂಥೆಟಿಕ್ ಡ್ರಗ್ ಅಲ್ಲ, ಅದೊಂದು ಔಷಧೀಯ ಗುಣವುಳ್ಳ ಸಸ್ಯ, ತುಳಸಿಯಂತೆ ಗಾಂಜಾ ಸಹ ಪವಿತ್ರ' ಎಂದಿದ್ದರು. ಇವರ ಒಂಟಿ ದ್ವನಿಗೆ ಇಂದು ಯುವನಟರೊಬ್ಬರು ದನಿಗೂಡಿಸಿದ್ದು, ಗಾಂಜಾವನ್ನು ಕಾನೂನುಬದ್ಧಗೊಳಿಸುವ ಬಗ್ಗೆ ಚರ್ಚೆ ಆಗಬೇಕು ಎಂದಿದ್ದಾರೆ.

    ಕೊಕೇನ್, ಹೆರಾಯಿನ್ ಬಿಡಿ, ಗಾಂಜಾ ಕಾನೂನುಬದ್ಧಗೊಳಿಸಿ: ನಟಿ ನಿವೇದಿತಾ ಆಗ್ರಹಕೊಕೇನ್, ಹೆರಾಯಿನ್ ಬಿಡಿ, ಗಾಂಜಾ ಕಾನೂನುಬದ್ಧಗೊಳಿಸಿ: ನಟಿ ನಿವೇದಿತಾ ಆಗ್ರಹ

    ಗಾಂಜಾವನ್ನು ಕಾನೂನುಬದ್ಧಗೊಳಿಸುವ ಬಗ್ಗೆ ಚರ್ಚೆ ಆಗಲು ಇದು ಸಕಾಲ ಎಂದಿದ್ದಾರೆ ಯುವ ನಟ, ನಿರ್ದೇಶಕ ರಾಕೇಶ್ ಅಡಿಗ. 'ಗಾಂಜಾವನ್ನು ಸಿಂಥೆಟಿಕ್ ಡ್ರಗ್‌ ಎಂದು ಕರೆಯುವುದು ತಪ್ಪು. ಗಾಂಜಾ ಪುರಾತನಕಾಲದಿಂದಲೂ ಬಳಕೆಯಲ್ಲಿದೆ. ವೈದ್ಯಕೀಯ ಉಪಯೋಗಗಳಿಗಾಗಿ ಗಾಂಜಾವನ್ನು ಬಳಸಲಾಗುತ್ತಿತ್ತು, ಹಿಂದೆ, ಗಾಂಜಾ ಆಹಾರ ಪದ್ಧತಿಯ ಭಾಗವಾಗಿಯೂ ಇತ್ತು' ಎಂದಿದ್ದಾರೆ ಅವರು.

    'ಗಾಂಜಾದ ವೈದ್ಯಕೀಯ ಗುಣ ಪರಿಗಣೆನೆಗೆ ತೆಗೆದುಕೊಂಡಿಲ್ಲ'

    'ಗಾಂಜಾದ ವೈದ್ಯಕೀಯ ಗುಣ ಪರಿಗಣೆನೆಗೆ ತೆಗೆದುಕೊಂಡಿಲ್ಲ'

    '1985 ರಲ್ಲಿ ಗಾಂಜಾ ನಿಷೇಧವಾಯಿತು. ಗಾಂಜಾ ನಿಷೇಧಕ್ಕೂ ಅಮೆರಿಕದಲ್ಲೂ ಡ್ರಗ್ ವಾರ್‌ಗೆ ಸಂಬಂಧವಿದೆ. ಗಾಂಜಾ ದ ವೈದ್ಯಕೀಯ ಗುಣವನ್ನು ಪರಿಗಣನೆಗೆ ತೆಗೆದುಕೊಳ್ಳದೇ, ಲಾಭಿಗೆ ಬಗ್ಗಿ ನಿಷೇಧ ಹೇರಲಾಯಿತು' ಎಂದಿದ್ದಾರೆ ರಾಕೇಶ್.

    'ಈ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯೊಂದು ವಿಚಾರಣೆ ಹಂತದಲ್ಲಿದೆ'

    'ಈ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯೊಂದು ವಿಚಾರಣೆ ಹಂತದಲ್ಲಿದೆ'

    ಗಾಂಜಾವನ್ನು ಕಾನೂಬದ್ಧಗೊಳಿಸಬೇಕು ಎಂಬ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯೊಂದು ವಿಚಾರಣೆಯ ಹಂತದಲ್ಲಿದೆ. ಹಲವರು ಗಾಂಜಾ ಬಗ್ಗೆ ಸಂಶೋಧನೆಗಳನ್ನು ನಡೆಸಿ, ಪುಸ್ತಕಗಳನ್ನು ಹೊರತಂದಿದ್ದಾರೆ. ಶಶಿ ತರೂರ್ ಸಹ ಗಾಂಜಾ ಕಾನೂನುಬದ್ಧಗೊಳಿಸುವ ಬಗ್ಗೆ ಚರ್ಚೆ ಮಾಡಿದ್ದಾರೆ' ಎಂದು ತಮ್ಮ ವಾದಕ್ಕೆ ಪೂರಕ ಮಾಹಿತಿ ಒದಗಿಸಿದ್ದಾರೆ ನಟ ರಾಕೇಶ್.

    ತುಳಸಿಯಂತೆ ಗಾಂಜಾ ಸಹ ಶ್ರೇಷ್ಠ: ನಟಿ ನಿವೇದಿತಾತುಳಸಿಯಂತೆ ಗಾಂಜಾ ಸಹ ಶ್ರೇಷ್ಠ: ನಟಿ ನಿವೇದಿತಾ

    ಅತಿಯಾದರೆ ಎಲ್ಲವೂ ಅಪಾಯವೇ: ರಾಕೇಶ್

    ಅತಿಯಾದರೆ ಎಲ್ಲವೂ ಅಪಾಯವೇ: ರಾಕೇಶ್

    'ನಾನು ವೈಯಕ್ತಿಕವಾಗಿ ಗಾಂಜಾ ದಿಂದ ಮಾಡಿದ ಕೇಕ್ ತಿಂದಿದ್ದೀನಿ, ಚಟ್ನಿ, ಪಕೋಡ ತಿಂದಿದ್ದೀನಿ. ಸೇದಿದ್ದೀನಿ ಸಹ. ಹೇಗೆ ಮದ್ಯವನ್ನು ನಿಯಂತ್ರಣದಲ್ಲಿ ತೆಗೆದುಕೊಳ್ಳುತ್ತಾರೆಯೋ ಹಾಗೆಯೇ ಗಾಂಜಾವನ್ನು ನಿಯಮಿತವಾಗಿ ತೆಗೆದುಕೊಳ್ಳುವುದು ತಪ್ಪಲ್ಲವೆಂಬುದು ನನ್ನ ಅಭಿಪ್ರಾಯ. ಯಾವುದೂ ಸಹ ಅತಿಯಾದರೆ ಅಪಾಯವೇ ಎಂಬುದನ್ನೂ ಸಹ ಗಮನದಲ್ಲಿಟ್ಟುಕೊಳ್ಳಬೇಕು' ಎಂದು ಸ್ವ-ಅಭಿಪ್ರಾಯ ತಿಳಿಸಿದ್ದಾರೆ ರಾಕೇಶ್.

    ಗಾಂಜಾದ ಗುಣಾವಗುಣ ಕುರಿತು ಚರ್ಚೆ ಆಗಬೇಕು: ರಾಕೇಶ್

    ಗಾಂಜಾದ ಗುಣಾವಗುಣ ಕುರಿತು ಚರ್ಚೆ ಆಗಬೇಕು: ರಾಕೇಶ್

    'ಗಾಂಜಾದ ಕುರಿತು ಚರ್ಚೆ ಆಗಬೇಕು, ವೈದ್ಯರು, ಮನೋವೈದ್ಯರು, ವಿಜ್ಞಾನಿಗಳು ಎಲ್ಲರ ಅಭಿಪ್ರಾಯ ಪಡೆದುಕೊಳ್ಳೋಣ. ಗಾಂಜಾದ ಗುಣಾವಗುಣಗಳ ಚರ್ಚೆ ಆಗಲಿ. ಈಗಿರುವ ಸಿಗರೇಟ್‌ಗಳಿಗೆ ಹೋಲಿಸಿದರೆ ಗಾಂಜಾ ಆರೋಗ್ಯಕ್ಕೆ ಹಾನಿಕಾರವಲ್ಲವೆಂದೇ ಹೇಳಬೇಕು' ಎಂದಿದ್ದಾರೆ.

    'ಗಾಂಜಾದ ಉಪ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ'

    'ಗಾಂಜಾದ ಉಪ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ'

    'ಗಾಂಜಾದ ಉಪ ಉತ್ಪನ್ನಗಳನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ. ಹಲವು ಮುಂದುವರೆದ ರಾಷ್ಟ್ರಗಳಲ್ಲಿ ಗಾಂಜಾ ಬಳಕೆ ಕಾನೂನುಬದ್ಧವಾಗಿದೆ. ಗಾಂಜಾದಿಂದ ಹಲವು ಔಷಧಿಗಳನ್ನು ಕಂಡುಹಿಡಿದಿದ್ದಾರೆ. ಆದರೆ ನಮ್ಮಲ್ಲಿ ಗಾಂಜಾ ಕುರಿತು ಪೂರ್ವಾಗ್ರಹವೊಂದು ಬೆಳೆದುಬಿಟ್ಟಿದೆ' ಎಂದು ಬೇಸರ ವ್ಯಕ್ತಪಡಿಸಿದರು ರಾಕೇಶ್.

    ಇವೆಲ್ಲವೂ ನನ್ನ ವೈಯಕ್ತಿಕ ಅಭಿಪ್ರಾಯ: ರಾಕೇಶ್

    ಇವೆಲ್ಲವೂ ನನ್ನ ವೈಯಕ್ತಿಕ ಅಭಿಪ್ರಾಯ: ರಾಕೇಶ್

    'ಗಾಂಜಾ ಕುರಿತಾದ ನನ್ನ ಅಭಿಪ್ರಾಯಗಳು ನನ್ನವಷ್ಟೆ. ನಾನು ಸಿನಿಮಾ ರಂಗದ ಪ್ರತಿನಿಧಿಯಾಗಿ ಈ ಮಾತುಗಳನ್ನು ಹೇಳುತ್ತಿಲ್ಲ. ಅಷ್ಟೇ ಅಲ್ಲದೆ, ಗಾಂಜಾ ಕಾನೂನುಬದ್ಧವಾಗಬೇಕು ಎಂದು ಹೋರಾಟ ಮಾಡುವವನೂ ಅಲ್ಲ. ಆದರೆ ಗಾಂಜಾ ಕಾನೂನುಬದ್ಧವಾಗಬೇಕು ಎಂಬ ಅಭಿಪ್ರಾಯ ಹೊಂದಿರುವವನು' ಎಂದು ಸ್ಪಷ್ಟಪಡಿಸಿದರು ರಾಕೇಶ್.

    English summary
    Actor, Director Rakesh Adiga said, Cannabis should be legalize in India. debate about this is need of hour.
    Wednesday, September 2, 2020, 22:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X