»   » ಸೆಪ್ಟಂಬರ್‌ನ ಕೊನೆಯ ಶುಕ್ರವಾರ ತೆರೆ ಕಾಣುವ ನೀಲಾ,

ಸೆಪ್ಟಂಬರ್‌ನ ಕೊನೆಯ ಶುಕ್ರವಾರ ತೆರೆ ಕಾಣುವ ನೀಲಾ,

Posted By: Staff
Subscribe to Filmibeat Kannada

ಕ್ಲಾಸ್‌ಗೆ- ನೀಲಾ
ಮಾಸ್‌ಗೆ- ಪ್ರೇಮಕ್ಕೆ ಸೈ
ಮನೆ ಮಕ್ಕಳಿಗೆಲ್ಲ - ಅಮ್ಮ

ಸೋಲು ಗೆಲುವುಗಳ ಚಕ್ರದ ಉರುಳು ಪಥದಲ್ಲಿ - ಸ್ಯಾಂಡಲ್‌ವುಡ್‌ ಪಾಲಿಗೆ ಸೋಲು ಮೇಲ್ಮುಖವಾಗಿರುವ ಈ ಹೊತ್ತು , ಸೆಪ್ಟಂಬರ್‌ನ ಕೊನೆಯ ಶುಕ್ರವಾರ ಮೂರು ಚಿತ್ರಗಳು ಒಮ್ಮೆಗೇ ತೆರೆ ಕಾಣಲು ಸಿದ್ಧವಾಗಿವೆ. ಈ ಎರಡು ಮತ್ತೊಂದು ಸಿನಿಮಾಗಳಲ್ಲಿ ಯಾರು ಹಿತವರು ಎನ್ನುವುದನ್ನು ತೀರ್ಮಾನಿಸಲು ಪ್ರೇಕ್ಷಕರ ಪಾಲಿಗೆ ಸಾಕಷ್ಟು ಆಯ್ಕೆಯಿದೆ.

ತೆರೆ ಕಾಣುವ ಮುನ್ನವೇ ಪನೋರಮಾಕ್ಕೆ ಆಯ್ಕೆಯಾಗುವ ಮೂಲಕ 'ನೀಲಾ" ಕುತೂಹಲ ಕೆರಳಿಸಿದೆ. ಹೊಸಮುಖ ಗಾಯತ್ರಿ ಜಯರಾಂ ಹಾಗೂ ಅನಂತನಾಗ್‌ ತಾರಾಗಣದಲ್ಲಿರುವ ನೀಲಾ ನಾಗಾಭರಣ ನಿರ್ದೇಶನದ ಚಿತ್ರ. ಇತ್ತೀಚೆಗೆ ಉದಯ ಟೀವಿಯಲ್ಲಿ ಮುಳುಗಿ ಹೋಗಿದ್ದ ನಾಗಾಭರಣ ಯಥಾ ಪ್ರಕಾರ ರವಿಚಂದ್ರನ್‌ ಪ್ರೇಮಾಯಣದ ಹೊಸ ಅಧ್ಯಾಯ. ಭಾರೀ ಶ್ರೀಮಂತಿಕೆ- ಅಷ್ಟೇ ಶ್ರೀಮಂತ ಸೌಂದರ್ಯದ ನಾಯಕಿ ಷಹೀನಾ ಚಿತ್ರದ ಆಕರ್ಷಣೆಗಳು. ಕನಸುಗಾರನ ಯಶಸ್ಸು ಪ್ರೇಮಕ್ಕೆ ಸೈಗೆ ನೆರವಾಗುವ ನಿರೀಕ್ಷೆಯಿದೆ. ಇದು ರವಿಚಂದ್ರನ್‌ ಕಾಲವಾದ್ದರಿಂದ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಹತ್ತಿರವಾಗುತ್ತಿರುವುದರಿಂದ ಪ್ರೇಮಕ್ಕೆ ಪ್ರೇಕ್ಷಕರು ಸೈ ಅನ್ನುವ ಲೆಕ್ಕಾಚಾರಗಳಿವೆ.

ನೀಲಾ ಹಾಗೂ ಪ್ರೇಮಕ್ಕೆ ಸೈ ನಡುವೆ ಸೆಣಸುವ ಸಾಹಸವನ್ನು 'ಅಮ್ಮ" ಮಾಡುತ್ತಿದೆ. ಹೆಣ್ಣುಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ತಯಾರಾಗಿರುವ ಅಮ್ಮ ಚಿತ್ರದ ಮೂಲಕ ಅನಂತನಾಗ್‌- ಲಕ್ಷ್ಮಿ ಜನಪ್ರಿಯ ಜೋಡಿ ಮತ್ತೆ ಒಟ್ಟಾಗಿದೆ. ಅಮ್ಮಂದಿರೊಂದಿಗೆ ಮಕ್ಕಳೂ, ಜೊತೆಗೆ ಅಪ್ಪಂದಿರೂ ಸಿನಿಮಾ ಮಂದಿರಕ್ಕೆ ಆಗಮಿಸಬಹುದೆಂದು ನಿರ್ಮಾಪಕರು ನಿರೀಕ್ಷಿಸುತ್ತಿದ್ದಾರೆ. 

English summary
Neela, Premakke Saii and Amma will be in the competition track of the coming week

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada