'ಕೋಲಾರ'ದಲ್ಲಿ ಗಾಯಗೊಂಡ ನಟ ನೀನಾಸಂ ಅಶ್ವತ್ಥ್

By ಉದಯರವಿ

ರಂಗಭೂಮಿಯಿಂದ ಬಂದಂತಹ ಪ್ರತಿಭಾನ್ವಿತ ಕಲಾವಿದ ನೀನಾಸಂ ಅಶ್ವತ್ಥ್ ಅವರು ಗಾಯಗೊಂಡ ಘಟನೆ ಶುಕ್ರವಾರ (ಮಾ.6) ಮಧ್ಯಾಹ್ನ ನಡೆದಿದೆ. ಲೂಸ್ ಮಾದ ಯೋಗೇಶ್ ಮುಖ್ಯಭೂಮಿಕೆಯಲ್ಲಿರುವ 'ಕೋಲಾರ' ಚಿತ್ರದ ಶೂಟಿಂಗ್ ನಲ್ಲಿ ಅವರು ಗಾಯಗೊಂಡಿದ್ದಾರೆ.

ಮಹೇಶ್ ಆರ್ಯ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಗ್ಲಾಸ್ ಒಂದನ್ನು ಪೀಸ್ ಪೀಸ್ ಮಾಡುವಂತಹ ಸಾಹಸ ಪ್ರಧಾನ ಸನ್ನಿವೇಶದಲ್ಲಿ ಅಶ್ವತ್ಥ್ ಅವರು ಗಾಯಗೊಂಡಿದ್ದಾರೆ. ಅವರ ಭುಜ ಮತ್ತು ತೊಡೆಗೆ ಗಾಜಿನ ಚೂರುಗಳು ಸಿಡಿದು ಗಾಯವಾಗಿದೆ. [ತಮಿಳು ಚಿತ್ರರಂಗದ ಕದತಟ್ಟಿದ ನೀನಾಸಂ ಅಶ್ವತ್ಥ್]

Actor Neenasam Ashwath
ಕೋಲಾರ ಚಿತ್ರದ ಶೂಟಿಂಗ್ ಬೆಂಗಳೂರಿನ ಗಾಂಧಿನಗರದಲ್ಲಿ ನಡೆಯುತ್ತಿತ್ತು. ಗಾಯಗೊಂಡ ಕೂಡಲೆ ಅಶ್ವತ್ಥ್ ಅವರನ್ನು ಕೂಡಲೆ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಗಳಿಗೆ ಬ್ಯಾಂಡೇಜ್ ಮಾಡಿ ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ. ಒಟ್ಟಾರೆ ಅಶ್ವತ್ಥ್ ಅವರು ಔಟ್ ಆಫ್ ಡೇಂಜರ್.

ರಂಗಭೂಮಿ ಹಿನ್ನೆಲೆಯಿಂದ ಬಂದಂತಹ ಪ್ರತಿಭೆ ನೀನಾಸಂ ಅಶ್ವತ್ಥ್. ಸ್ಯಾಂಡಲ್ ವುಡ್ ನಲ್ಲಿ ಅವರಿಗೆ ಬ್ರೇಕ್ ಕೊಡುವಂತಹ ಚಿತ್ರ ಇನ್ನೂ ಬಂದಿಲ್ಲದಿದ್ದರೂ ಸಿಕ್ಕಂತಹ ಪಾತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಫಿಲ್ಮ್ ಬೀಟ್ ಹಾರೈಕೆ. (ಏಜೆನ್ಸೀಸ್)

More from Filmibeat

English summary
Kannada actor Neenasam Ashwath injured while shooting in the movie Kolar on Friday (6th of March) noon, an action sequence for the film in Gandhinagar, Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X