ಅಯೋಗ್ಯನಾಗಲು ನೀನಾಸಂ ಸತೀಶ್ ಕಸರತ್ತು

By Pavithra

Recommended Video

ಅಯೋಗ್ಯನಾಗಲು ನೀನಾಸಂ ಸತೀಶ್ ಕಸರತ್ತು | FIlmibeat Kannada

ಟೈಗರ್ ಗಲ್ಲಿ ಸಿನಿಮಾದ ನಂತರ ನಿನಾಸಂ ಸತೀಶ್ ಸಾಕಷ್ಟು ಬ್ಯುಸಿ ಆಗಿದ್ದಾರೆ. ಮೂರ್ನಾಲ್ಕು ಸಿನಿಮಾಗಳನ್ನ ಒಪ್ಪಿಕೊಂಡಿರುವ ಸತೀಶ್ ಜಿಮ್ ನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಾರಂತೆ.

ಸದ್ಯ ನೀನಾಸಂ ಸತೀಶ್, ಮಹೇಶ್ ನಿರ್ದೇಶನದ ಅಯೋಗ್ಯ ಸಿನಿಮಾದಲ್ಲಿ ಅಭಿಯಿಸುತ್ತಾರೆ. ಮಂಡ್ಯದ ಸುತ್ತಾ ಮುತ್ತಾ ಚಿತ್ರೀಕರಣವನ್ನ ಮುಗಿಸಿ ಬಂದಿರುವ ಸತೀಶ್ ತಮ್ಮ ಬಾಡಿ ಬಿಲ್ಡಿಂಗ್ ಕಡೆ ಗಮನ ಹರಿಸಿದ್ದಾರೆ.

ಇತ್ತೀಚಿಗಷ್ಟೇ ವರ್ಕ್ ಔಟ್ ಮಾಡುತ್ತಿರುವ ಫೋಟೋ ಶೂಟ್ ಮಾಡಿಸಿದ್ದಾರೆ ಸತೀಶ್. ಸೆಲೆಬ್ರೆಟಿ ಕ್ಯಾಮೆರಾ ಮ್ಯಾನ್ ರಾಘವ್ ಕ್ಯಾಮೆರಾ ಕಣ್ಣಲ್ಲಿ ಸತೀಶ್ ಹೊಸ ಲುಕ್ ಕಾಣಿಸಿಕೊಂಡ ಬಗೆ ಇಲ್ಲಿದೆ. ಮುಂದೆ ಓದಿ

ಅಯೋಗ್ಯನ ಹೊಸ ಲುಕ್

ಅಯೋಗ್ಯನ ಹೊಸ ಲುಕ್

ಅಯೋಗ್ಯ ಸಿನಿಮಾದಲ್ಲಿ ಬ್ಯುಸಿ ಆಗಿರುವ ನೀನಾಸಂ ಸತೀಶ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಯೋಗ್ಯ ಚಿತ್ರದಲ್ಲಿನ ಪಾತ್ರಕ್ಕಾಗಿ ಸಖತ್ ವರ್ಕ್ ಔಟ್ ಶುರು ಮಾಡಿರುವ ಸತೀಶ್ ಹೊಸ ಪೋಟೋ ಶೂಟ್ ಮಾಡಿಸಿದ್ದಾರೆ.

ಸಾಹಸ ದೃಶ್ಯಕ್ಕಾಗಿ ವರ್ಕ್ ಔಟ್

ಸಾಹಸ ದೃಶ್ಯಕ್ಕಾಗಿ ವರ್ಕ್ ಔಟ್

ಮೊದಲ ಹಂತದ ಚಿತ್ರೀಕರಣ ಮಾಡಿ ಮುಗಿಸಿರುವ ನಿರ್ದೇಶಕ ಮಹೇಶ್ ಮತ್ತು ತಂಡ ಎರಡನೇ ಹಂತದ ಚಿತ್ರೀಕರಣದ ತಯಾರಿ ಮಾಡಿಕೊಂಡಿದೆ. ಸೆಕೆಂಡ್ ಶೆಡ್ಯೂಲ್ ನಲ್ಲಿ ರವಿಶಂಕರ್ ಮತ್ತು ಸತೀಶ್ ನಡುವೆ ಸಾಹಸ ದೃಶ್ಯಗಳು ನಡೆಯಲಿದೆಯಂತೆ. ಇದೇ ಕಾರಣಕ್ಕಾಗಿ ಜಿಮ್ ನಲ್ಲಿ ವರ್ಕ್ ಔಟ್ ಮಾಡಲು ಶುರು ಮಾಡಿದ್ದಾರೆ.

ಪಂಚಾಯಿತಿ ಸದಸ್ಯ ಸತೀಶ್

ಪಂಚಾಯಿತಿ ಸದಸ್ಯ ಸತೀಶ್

ಅಯೋಗ್ಯ ಸಿನಿಮಾದಲ್ಲಿ ನಿನಾಸಂ ಸತೀಶ್ ಗ್ರಾಮ ಪಂಚಾಯಿತಿ ಸದಸ್ಯನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಯೋಗ್ಯ ಚಿತ್ರದಲ್ಲಿ ಆರುಮುಗ ರವಿಶಂಕರ್ ಖಳನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಹಲವು ಸಿನಿಮಾ-ವಿಭಿನ್ನ ಪಾತ್ರಗಳು

ಹಲವು ಸಿನಿಮಾ-ವಿಭಿನ್ನ ಪಾತ್ರಗಳು

ಸತೀಶ್ ಅಯೋಗ್ಯ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಗೋದ್ರಾ ಚಿತ್ರದಲ್ಲಿಯೂ ವಿಭಿನ್ನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಇದರ ಜೊತೆಯಲ್ಲಿ ರಾಮನೂ ಕಾಡಿಗೆ ಹೋದನು ಹಾಗೂ ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಅವರ ಮುಂದಿನ ಮೂರು ಚಿತ್ರದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

More from Filmibeat

English summary
Kannada actor Neenasam Sathish has started workout in the gym for the Ayogya film, Satyash and Rachita Ram are the lead actors in the movie., Mahesh Kumar is directing the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X