'ನೀರ್ ದೋಸೆ' ಅಂದ್ರೆ ಹಲಸಿನ ಹಣ್ಣಿದ್ದಂತೆ, ಬಿಚ್ಚಿ ನೋಡಿದ್ರೆ ಗೊತ್ತಾಗೋದು

By Suneetha

ಸಿನಿಮಾ ಸೆಟ್ಟೇರಿದಾಗಿನಿಂದ ಸದಾ ಒಂದಲ್ಲಾ ಒಂದು ವಿಷಯದಿಂದ ಭಾರಿ ಸುದ್ದಿಯಲ್ಲಿದ್ದ 'ನೀರ್ ದೋಸೆ' ಅಂತೂ-ಇಂತೂ ಕೊನೆಗೂ ರಿಲೀಸ್ ಗೆ ತಯಾರಾಗಿ ನಿಂತಿದೆ. ಜೊತೆಗೆ 'ನೀರ್ ದೋಸೆ' ಸೆನ್ಸಾರ್ ಅಂಗಳಕ್ಕೆ ಕಾಲಿಟ್ಟು, 'ಎ' ಪ್ರಮಾಣಪತ್ರ ದೊರಕಿದೆ.

ಅಂದಹಾಗೆ ಚಿತ್ರಕ್ಕೆ ಯಾವುದೇ ಕತ್ತರಿ ಹಾಕದೇ 'ಎ' ಪ್ರಮಾಣ ಪತ್ರ ನೀಡಿದೆ ಅಂದಾಗ ಆಶ್ಚರ್ಯ ಆಗೋ ಸಂಗತಿನೇ ಆಗಿದೆ. ಯಾಕೆಂದರೆ ಚಿತ್ರದ ಟ್ರೈಲರ್ ಮತ್ತು ಮೇಕಿಂಗ್ ವಿಡಿಯೋ ನೋಡಿದ್ರೆ, ಖಂಡಿತ ಕತ್ತರಿ ಹಾಕಲೇಬೇಕು ಎಂಬತ್ತಿತ್ತು, ಒಂದೊಂದು ಡೈಲಾಗ್ ಮತ್ತು ದೃಶ್ಯಗಳು.['ನೀರ್ ದೋಸೆ'ಯಲ್ಲಿ ಎಂತೆಂಥಾ ಡೈಲಾಗುಗಳಿವೆ ಗೊತ್ತಾ?]

ನಿರ್ದೇಶಕ ವಿಜಯ್ ಪ್ರಸಾದ್ ಅವರು ಆಕ್ಷನ್-ಕಟ್ ಹೇಳಿರುವ 'ನೀರ್ ದೋಸೆ' ಚಿತ್ರ ಗೌರಿ-ಗಣೇಶ್ ಹಬ್ಬದ ಎರಡು ದಿನಕ್ಕೆ ಮುನ್ನ (ಸೆಪ್ಟೆಂಬರ್ 2) ಇಡೀ ಕರ್ನಾಟಕದಾದ್ಯಂತ ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸುತ್ತಿದೆ.

ಸ್ಕಂದ ಎಂಟರ್ ಪ್ರೈಸಸ್ ಚಿತ್ರ ನಿರ್ಮಾಣ ಮಾಡಿದ್ದು, ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್ ಮತ್ತು ಹಾಡುಗಳು ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಂಡಿವೆ. ಚಿತ್ರದಲ್ಲಿ ನಟ ಜಗ್ಗೇಶ್, ನಟಿ ಸುಮನ್ ರಂಗನಾಥ್, ನಟಿ ಹರಿಪ್ರಿಯ, ದತ್ತಣ್ಣ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಮುಂದೆ ಓದಿ...

ಸಖತ್ ಹಾಟ್ ಹರಿಪ್ರಿಯ

ಸಖತ್ ಹಾಟ್ ಹರಿಪ್ರಿಯ

ಹೆಚ್ಚಿನ ಸಿನಿಮಾಗಳಲ್ಲಿ ನಟಿ ಹರಿಪ್ರಿಯ ಅವರು ತುಂಬಾ ಸಂಪ್ರದಾಯಬದ್ಧ ಉಡುಪುಗಳನ್ನು ಧರಿಸಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈ ಸಿನಿಮಾದಲ್ಲಿ ಮಾತ್ರ ಸಖತ್ ಹಾಟ್ ಆಗಿ, ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬೆಲ್ಲಿ ಡ್ಯಾನ್ಸ್ ಮಾಡುವ ಮೂಲಕ ಸೊಂಟ ಬಳುಕಿಸಿದ್ದಾರೆ.[ಹರಿಪ್ರಿಯಾಗೆ ನಾಚಿಕೆ ಆಗಲ್ವಾ? 'ನೀರ್ ದೋಸೆ' ರುಬ್ಬಿದ್ದು ದುಡ್ಡಿಗಾಗಿ?]

ಕಾಲ್ ಗರ್ಲ್ ಕುಮುದಾ

ಕಾಲ್ ಗರ್ಲ್ ಕುಮುದಾ

'ನೀರ್ ದೋಸೆ' ಚಿತ್ರದಲ್ಲಿ ನಟಿ ಹರಿಪ್ರಿಯಾ ಅವರು ಕಾಲ್ ಗರ್ಲ್ ಕುಮುದಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಸಿಗರೇಟು ಸೇದುತ್ತಾ, ತುಂಡುಡುಗೆ ತೊಟ್ಟು ಪಡ್ಡೆ ಹೈಕಳ ಮೈ ಬೆಚ್ಚಗಾಗಿಸಿದ್ದಾರೆ.['ನೀರ್ ದೋಸೆ' ಅಂದ್ರೇನು, ಅವರಿವರು ಕಂಡಂತೆ 'ನೀರ್ ದೋಸೆ']

ನವರಸ ನಾಯಕ ಜಗ್ಗೇಶ್

ನವರಸ ನಾಯಕ ಜಗ್ಗೇಶ್

ನಟ ಜಗ್ಗೇಶ್ ಅವರು ಈ ಚಿತ್ರದಲ್ಲಿ ಫುಲ್ ತರ್ಲೆ ಮಾಡಿದ್ದು, ಸಖತ್ ಡೌ ಹೊಡಿತಾರೆ. ಇವರಿಗೆ ನಾಯಕಿಯಾಗಿ ನಟಿ ಸುಮನ್ ರಂಗನಾಥ್ ಅವರು ಮಿಂಚಿದ್ದಾರೆ.['ನೀರ್ ದೋಸೆ' ಸಿನಿಮಾ ಬಿಡುಗಡೆ ತಡ ಆಗ್ತಿರೋದಕ್ಕೆ ನಿಜ ಕಾರಣವೇನು?]

ಜಗ್ಗೇಶ್ ಗೂ ಕಾತರ

ಜಗ್ಗೇಶ್ ಗೂ ಕಾತರ

ಸೆಪ್ಟೆಂಬರ್ 2 ಬಹಳ ಹತ್ತಿರವಿದೆ. 'ನೀರ್ ದೋಸೆ' ರುಚಿಸುತ್ತೆ, ನಂಬಿಕೆ, ತಾಳ್ಮೆ, ವೀಕ್ಷಣೆ, ಅನಿಸಿಕೆ, ಅಭಿಪ್ರಾಯ ಚಂದ ಅಲ್ಲವೇ'.-ಜಗ್ಗೇಶ್

ಜಗ್ಗೇಶ್ ಅವರ ಅಭಿಪ್ರಾಯ

ಜಗ್ಗೇಶ್ ಅವರ ಅಭಿಪ್ರಾಯ

"ನೀರ್ ದೋಸೆ' ಸಾಮಾನ್ಯ ವರ್ಗದ ಪ್ರತಿಬಿಂಬ. ಕಟ್ಟೆಮೇಲೆ ಕೂತು ಮಾತಾಡೋ ಇಂದಿನ ಪೀಳಿಗೆಯ ಇನ್ನೊಂದು ಮುಖ. ಪಬ್ಬು ಬಾರು, ಜಗಲಿಕಟ್ಟೆ, ಇಸ್ಪೀಟ್ ಅಡ್ಡೆ, ಪಬ್ಲಿಕ್ ನಲ್ಲಿ ಬರುವ ಮಾತು"-ಜಗ್ಗೇಶ್

'ನೀರ್ ದೋಸೆ' ಹಲಸಿನ ಹಣ್ಣಿದ್ದಂತೆ

'ನೀರ್ ದೋಸೆ' ಹಲಸಿನ ಹಣ್ಣಿದ್ದಂತೆ

'ನೀರ್ ದೋಸೆ' ನೋಡಿದ ಮೇಲೆ ಸರ್ಟಿಫಿಕೆಟ್ ಬಗ್ಗೆ ಮಾತಾಡುವವರು ಮತ್ತೆ-ಮತ್ತೆ ನೋಡುತ್ತಾರೆ. ಆ ಚಿತ್ರ ಹಲಸಿನ ಹಣ್ಣಿನಂತೆ ಹೊರಗೆ-ಒಳಗೆ ವ್ಯತ್ಯಾಸ ಇದೆ. ಸೆಪ್ಟೆಂಬರ್ 2ಕ್ಕೆ ಮುಖವಾಡ ಕಳಚುತ್ತೆ'.-ಜಗ್ಗೇಶ್

'ನವರಸಕ್ಕೆ ಚಾಲೆಂಜ್'

'ನವರಸಕ್ಕೆ ಚಾಲೆಂಜ್'

'ನೀರ್ ದೋಸೆ' ಅಳೆದು ತೂಗಿ ಪಾತ್ರಕ್ಕೆ ಒಂದು ಟೈಮಿಂಗ್ ನೀಡಿದ್ದೇನೆ. ಪಾತ್ರಕ್ಕೆ ಪರಕಾಯ, ಮರುಧ್ವನಿ ಜೋಡಣೆ, ಎಷ್ಟು ಬೇಕೋ ಅಷ್ಟು ಮುಖಭಾವ ನವರಸಕ್ಕೆ ಚಾಲೆಂಜ್ ಇದೆ ಗಮನಿಸಿ'- ಜಗ್ಗೇಶ್

ನಿರಾಯುಧ ಸೈನಿಕನ ಕೈಯಲ್ಲಿ ಶಸ್ತ್ರ ಕೊಟ್ಟಂತೆ

ನಿರಾಯುಧ ಸೈನಿಕನ ಕೈಯಲ್ಲಿ ಶಸ್ತ್ರ ಕೊಟ್ಟಂತೆ

'ನೀರ್ ದೋಸೆ' ಚಿತ್ರ ನಿರಾಯುಧ ಸೈನಿಕನ ಕೈಯಲ್ಲಿ ಹೋರಾಡಲು ಶಸ್ತ್ರಕೊಟ್ಟಂತೆ. ನನ್ನ ಕಲಾ ಬದುಕಿನ ಸಾಮರ್ಥ್ಯ ತೋರಲು ನಿರ್ದೇಶಕ ಈ ಕಥೆ ಕೊಟ್ಟಿದ್ದಾರೆ. ಆ ಹೋರಾಟ ಸೆಪ್ಟೆಂಬರ್ 2ಕ್ಕೆ ನೋಡಿ'.-ಜಗ್ಗೇಶ್

More from Filmibeat

English summary
The Censor Board has approved the Kannada Movie 'Neer Dose' for public exhibition but has given it an 'A' certificate. However there is not a single cut that has been given. The film directed by Vijaya Prasad of 'Sidlingu' fame. Actor Jaggesh, Haripriya and Dattanna in the main roles. The film all set to released this Friday (September 2).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X