For Quick Alerts
  ALLOW NOTIFICATIONS  
  For Daily Alerts

  'ನೀರ್ ದೋಸೆ' ವಿವಾದದ ಬಳಿಕ ರಮ್ಯಾ ಅಭಿಮಾನಿ ನಿರ್ದೇಶಕ ವಿಜಯ್‌ ಪ್ರಸಾದ್ ಶುಭ ಕೋರಿದ್ದೇಕೆ?

  |

  'ನೀರ್ ದೋಸೆ' ವಿವಾದ ಅದೆಷ್ಟು ಮಂದಿಗೆ ನೆನಪಿದೆಯೋ ಗೊತ್ತಿಲ್ಲ. ವಿಜಯ್ ಪ್ರಸಾದ್ ಈ ಸಿನಿಮಾ ನಿರ್ದೇಶಕರಾಗಿದ್ದರು. ಇದೊಂತರ ರೇರ್ ಕಾಂಬಿನೇಷನ್. ನವರಸ ನಾಯಕ ಜಗ್ಗೇಶ್ ಹಾಗೂ ರಮ್ಯಾ ಒಂದೇ ಸಿನಿಮಾದಲ್ಲಿ ನಟಿಸುತ್ತಿರೋದೇ ಕುತೂಹಲವನ್ನು ಸೃಷ್ಟಿಸಿತ್ತು. ಹಾಗಾಗಿ ವಿಜಯ್ ಪ್ರಸಾದ್ ಈ ಸಿನಿಮಾವನ್ನು ತುಂಬಾನೇ ಜೋಷ್‌ನಲ್ಲೇ ಆರಂಭಿಸಿದ್ದರು.

  ಮೋಹಕ ತಾರೆ ರಮ್ಯಾ ಕೆಲವು ದಿನಗಳ ಕಾಲ ಈ ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಕೆಲವು ದಿನಗಳು ನಟಿಸಿದ ಬಳಿಕ 'ನೀರ್ ದೋಸೆ'ಯಲ್ಲಿ ನಟಿಸುವುದಕ್ಕೆ ನಿರಾಕರಿಸಿದ್ದರು. ಆಗತಾನೇ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದರಿಂದ ಸಿನಿಮಾದಿಂದ ದೂರ ಉಳಿಯಲು ನಿರ್ಧರಿಸಿದ್ದರು. ಇದು ಚಿತ್ರತಂಡಕ್ಕೆ ದೊಡ್ಡ ತಲೆ ನೋವಾಗಿತ್ತು. ಈ ವಿಚಾರವಾಗಿ ವಿಜಯ್ ಪ್ರಸಾದ್, ಜಗ್ಗೇಶ್ ಹಾಗೂ ರಮ್ಯಾ ನಡುವೆ ಟೀಕೆ ಪ್ರತಿ ಟೀಕೆಗಳು ನಡೆದಿದ್ದವು. ಈ ವಿವಾದ ಫಿಲ್ಮ್ ಚೇಂಬರ್ ಮೆಟ್ಟಿಲೇರಿತ್ತು. ಕೊನೆಗೂ ರಮ್ಯಾ 'ನೀರ್‌ ದೋಸೆ' ಸಿನಿಮಾ ನಟಿಸಲೇ ಇಲ್ಲ.

  ಭರ್ಜರಿ ಸಿಹಿ ಸುದ್ದಿ ಕೊಟ್ಟ ನಟಿ ರಮ್ಯಾ, ಖಚಿತವಾಯ್ತು ಕಮ್‌ಬ್ಯಾಕ್!ಭರ್ಜರಿ ಸಿಹಿ ಸುದ್ದಿ ಕೊಟ್ಟ ನಟಿ ರಮ್ಯಾ, ಖಚಿತವಾಯ್ತು ಕಮ್‌ಬ್ಯಾಕ್!

  'ನೀರ್ ದೋಸೆ' ವಿವಾದವೆದ್ದಲ್ಲಿಂದ ವಿಜಯ್ ಪ್ರಸಾದ್ ನಟಿ ರಮ್ಯಾ ಬಗ್ಗೆ ಹಲವು ಬಾರಿ ಮಾತಾಡಿದ್ದಾರೆ. ಆದರೆ, ಅವರದ್ದೇ ಸ್ಟೈಲ್‌ನಲ್ಲಿ ರಮ್ಯಾ ಬಗ್ಗೆ ಹೇಳಿಕೆ ನೀಡಿದ್ದರು. ಈಗ ರಮ್ಯಾ ಕಮ್ ಬ್ಯಾಕ್ ಮಾಡಿದ್ದಕ್ಕೆ ನಿರ್ದೇಶಕ ವಿಜಯ್ ಪ್ರಸಾದ್ ಫೇಸ್‌ ಬುಕ್‌ನಲ್ಲಿ ಪತ್ರ ಬರೆದಿದ್ದಾರೆ. ಹಾಗಿದ್ದರೆ ವಿಜಯ್ ಪ್ರಸಾದ್ ನಟಿ ರಮ್ಯಾಗೆ ಹೇಳಿದ್ದೇನು? ಅಂತ ತಿಳಿಯಲು ಮುಂದೆ ಓದಿ.

  ರಮ್ಯಾಗೆ ವಿಜಯ್ ಪ್ರಸಾದ್ ಸ್ವಾಗತ!

  ರಮ್ಯಾಗೆ ವಿಜಯ್ ಪ್ರಸಾದ್ ಸ್ವಾಗತ!

  ರಮ್ಯಾ ಮತ್ತೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರೋದು ಗೊತ್ತೇ ಇದೆ. ಬಹಳ ದಿನಗಳಿಂದ ಮೋಹಕ ತಾರೆ ರೀ-ಎಂಟ್ರಿ ಟಾಕ್ ಇದ್ದರೂ, ಹೇಗೆ ಮರುಳುತ್ತಾರೆ ಅನ್ನೋ ಸುಳಿವು ಇರಲಿಲ್ಲ. ಕೊನೆಗೂ ರಮ್ಯಾ ನಿರ್ಮಾಣ ಸಂಸ್ಥೆ ಆರಂಭಿಸಿದ್ದು ತನ್ನ ಎಂಟ್ರಿ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ, ಸಿನಿಮಾದಲ್ಲಿ ನಟಿಸುತ್ತಾರಾ? ಇಲ್ವಾ? ಅನ್ನೋದು ಅಭಿಮಾನಿಗಳನ್ನು ಇನ್ನೂ ಕಾಡುತ್ತಲೇ ಇದೆ. ಅದೇನೇ ಇದ್ದರೂ, 'ನೀರ್ ದೋಸೆ' ನಿರ್ದೇಶಕ ವಿಜಯ್ ಪ್ರಸಾದ್ ಮೋಹಕತಾರೆ ರಮ್ಯಾಗೆ ಫೇಸ್‌ಬುಕ್ ಮೂಲಕ ಸ್ವಾಗತ ಕೋರಿದ್ದಾರೆ.

  ಸಿಹಿ ಸುದ್ದಿ ಕೊಡಲು ಸಜ್ಜಾದ ನಟಿ ರಮ್ಯಾ: ಸಮಾಚಾರ ಏನ್ ಗೊತ್ತಾ?ಸಿಹಿ ಸುದ್ದಿ ಕೊಡಲು ಸಜ್ಜಾದ ನಟಿ ರಮ್ಯಾ: ಸಮಾಚಾರ ಏನ್ ಗೊತ್ತಾ?

  ರಮ್ಯಾಗೆ ಭೇಷ್ ಎಂದ ನಿರ್ದೇಶಕ

  ರಮ್ಯಾಗೆ ಭೇಷ್ ಎಂದ ನಿರ್ದೇಶಕ

  ಮೋಹಕತಾರೆ ರಮ್ಯಾ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಕ್ಕೆ ವಿಜಯ್ ಪ್ರಸಾದ್ ಫೇಸ್‌ಬುಕ್‌ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ರಮ್ಯಾ ಜೊತೆಗೆ ಡಾಲಿ ಧನಂಜಯ್‌ ನಿರ್ಧಾರಕ್ಕೂ ಶುಭಕೋರಿದ್ದಾರೆ. "ಮೊನ್ನೆ ಮೊನ್ನೆಯಷ್ಟೇ ಧನಂಜಯ ಸರ್ ಅವರು ತಮ್ಮ ಸಂಸ್ಥೆಯಡಿಯಲ್ಲಿ ವರ್ಷಕ್ಕೆ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಈಗ ರಮ್ಯಾ ಮೇಡಂ ಕೂಡ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಿಸಿರುವುದು ಸ್ವಾಗತ ಮತ್ತು ಶ್ಲಾಘನೀಯ...! ಕನ್ನಡ ಚಿತ್ರರಂಗಕ್ಕೆ ಈಗ ಎರಡು ಹೊಸ ಚಿತ್ರ ನಿರ್ಮಾಣ ಸಂಸ್ಥೆಗಳ ಸೇರ್ಪಡೆ. ಈ ಎರಡೂ ಸಂಸ್ಥೆಗಳಿಂದ ಸಧಬಿರುಚಿಯ ಚಿತ್ರಗಳು ನಿರ್ಮಾಣಗೊಳ್ಳಲಿ. ಜೊತೆಗೆ ಮತ್ತಷ್ಟು ಹೊಸ ಸಂಸ್ಥೆಗಳು ಸೇರ್ಪಡೆಯಾಗಲಿ. ಹಾಗೇ ಹಳೆಯ ಸಂಸ್ಥೆಗಳೂ ಮತ್ತೆ ಸಕ್ರೀಯವಾಗಲಿ. ಕನ್ನಡ ಚಿತ್ರರಂಗ ಮಗದಷ್ಟು ಫಲವತ್ತಾಗಲಿ. ಇಬ್ಬರಿಗೂ ಅಭಿನಂದನೆಗಳು ಹಾಗೂ ಶುಭಹಾರೈಕೆಗಳು" ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

  ವಿಜಯ್ ಪ್ರಸಾದ್, ರಮ್ಯಾ ಅಭಿಮಾನಿ

  ವಿಜಯ್ ಪ್ರಸಾದ್, ರಮ್ಯಾ ಅಭಿಮಾನಿ

  ಕೆಲವೇ ವರ್ಷಗಳ ಹಿಂದಷ್ಟೇ ವಿಜಯ್ ಪ್ರಸಾದ್ ಹೊಸ ಸಿನಿಮಾ ಸೆಟ್ಟೇರಿತ್ತು. 'ಪರಿಮಳಾ ಲಾಡ್ಜ್' ಸಿನಿಮಾ ಪತ್ರಿಕಾಗೋಷ್ಠಿ ವೇಳೆ ವಿಜಯ್ ಪ್ರಸಾದ್ "ನಾನು ರಮ್ಯಾ ಅವರ ಅಭಿಮಾನಿ. ಅವರನ್ನು ಹತ್ತಿರದಿಂದ ಕಂಡಿರುವುದರಿಂದ ಅವರ ವ್ಯಕ್ತಿತ್ವ ನನಗೆ ಇಷ್ಟ." ಎಂದು ಹೇಳಿದ್ದರು. ಆ ವೇಳೆ ವಿಜಯ್ ಪ್ರಸಾದ್ ಮೋಹಕತಾರೆ ರಮ್ಯಾಗೆ ಟಾಂಗ್ ಕೊಟ್ಟಿದ್ದಾರೆ ಎಂದು ವರದಿಯಾಗಿದ್ದವು.

  ರಮ್ಯಾ ಬದಲು ಹರಿಪ್ರಿಯಾ

  ರಮ್ಯಾ ಬದಲು ಹರಿಪ್ರಿಯಾ

  'ನೀರ್‌ ದೋಸೆ' ಸಿನಿಮಾದಲ್ಲಿ ರಮ್ಯಾ ನಟಿಸೋದಿಲ್ಲ ಅಂತ ಹೇಳಿದ ಬಳಿಕ ಸಾಕಷ್ಟು ವಾದ-ವಿವಾದಗಳು ನಡೆದಿದ್ದವು. ಈ ಪ್ರಕರಣ ಫಿಲ್ಮ್ ಚೇಂಬರ್ ಮೆಟ್ಟಿಲೇರಿತ್ತು. ಅಲ್ಲೂ ಸಂಧಾನ ಮಾಡುವ ಯತ್ನ ನಡೆದಿತ್ತು. ಜಗ್ಗೇಶ್ ಅಖಾಡಕ್ಕೆ ಇಳಿದಿದ್ದರೂ, ಅದು ಸಾಧ್ಯವಾಗಿರಲಿಲ್ಲ. ಬಳಿಕ 'ನೀರ್ ದೋಸೆ' ಸಿನಿಮಾಗೆ ರಮ್ಯಾ ಬದಲು ಹರಿಪ್ರಿಯ ಆಯ್ಕೆಯಾಗಿದ್ದರು.

  English summary
  Neer Dose Director Vijay Prasad Wishes to Ramya For Her New Production House, Know More.
  Friday, September 2, 2022, 20:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X