For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಫ್ಯಾಂಟಮ್ ಲೋಕಕ್ಕೆ ಎಂಟ್ರಿ ಕೊಟ್ಟ ಅಪರ್ಣ ಬಲ್ಲಾಳ್ ಯಾರು?

  |

  ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾ ತಂಡ ಒಂದೊಂದೆ ಪಾತ್ರಗಳ ಪರಿಚಯ ಮಾಡಿಕೊಡುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಫ್ಯಾಂಟಮ್ ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಸಿನಿಮಾಭಿಮಾನಿಗಳ ಗಮನ ಸಳೆಯುತ್ತಿದೆ.

  Upendra ಬ್ರಹ್ಮ ಚಿತ್ರದಲ್ಲಿನ ಡುಯೆಟ್ ಹಾಡು ತಯಾರಾದ ಕ್ಷಣಗಳು | Filmibeat Kannada

  ಸದ್ಯ, ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡುತ್ತಿರುವ ಚಿತ್ರತಂಡ 40ರಷ್ಟು ಚಿತ್ರೀಕರಣ ಮಾಡಿ ಮುಗಿಸಿದೆ. ಈ ನಡುವೆ ಕಿಚ್ಚ ಸುದೀಪ್ ಮತ್ತು ನಿರೂಪ್ ಭಂಡಾರಿ ಲುಕ್ ರಿಲೀಸ್ ಆಗಿದ್ದು, ನಿರೀಕ್ಷೆ ಹೆಚ್ಚಿದೆ. ಇದೀಗ ಚಿತ್ರದ ಪ್ರಮುಖ ಪಾತ್ರಧಾರಿ ಅಪರ್ಣ ಬಲ್ಲಾಳ್ ಅಂದರೆ ಪನ್ನಾ ಪಾತ್ರ ಅನಾವರಣಗೊಂಡಿದೆ. ಯಾರು ಈ ಅಪರ್ಣ ಬಲ್ಲಾಳ್? ಮುಂದೆ ಓದಿ..

  ಸುದೀಪ್ ಜೊತೆ ಹೆಜ್ಜೆ ಹಾಕಲು ಮತ್ತೆ ಕನ್ನಡಕ್ಕೆ ಬರ್ತಿದ್ದಾರಂತೆ ಸನ್ನಿ ಲಿಯೋನ್

  ಸಂಜೀವ್ ಗಂಭೀರಾಗೆ ಜೋಡಿಯಾದ ನೀತಾ

  ಸಂಜೀವ್ ಗಂಭೀರಾಗೆ ಜೋಡಿಯಾದ ನೀತಾ

  ಫ್ಯಾಂಟಮ್ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಪರ್ಣ ಬಲ್ಲಾಳ್ ಪಾತ್ರ ಒಂದು. ಈ ಪಾತ್ರದಲ್ಲಿ ಕಿರುತೆರೆ ನಟಿ ನೀತಾ ಅಶೋಕ್ ಕಾಣಿಸಿಕೊಳ್ಳುತ್ತಿದ್ದಾರೆ. ಫ್ಯಾಂಟಮ್ ಸಿನಿಮಾ ಮೂಲಕ ನೀತಾ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದಾರೆ. ಬಾಂಬೆಯಿಂದ ಬಂದಿರುವ ನೀತಾ, ಅಪರ್ಣ ಬಲ್ಲಾಳ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅಪರ್ಣ, ಪನ್ನಾ ಎಂದೇ ಖ್ಯಾತಿಯಾಗಿರುತ್ತಾರೆ. ವಿಶೇಷ ಅಂದರೆ ಚಿತ್ರದಲ್ಲಿ ಅಪರ್ಣ, ಸಂಜೀವ್ ಗಂಭೀರ ಅಂದರೆ ನೀರೂಪ್ ಭಂಡಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

  ಯಾರು ಈ ನೀತಾ ಅಶೋಕ್

  ಯಾರು ಈ ನೀತಾ ಅಶೋಕ್

  ನೀತಾ ಅಶೋಕ್ ಕಿರುತೆರೆಯ ನಟಿ. ಫ್ಯಾಂಟಮ್ ಮೂಲಕ ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಕಿರುತೆರೆಯಲ್ಲಿ ಯಶೋಧೆ, ನಾ ನಿನ್ನ ಬಿಡಲಾರೆ ಮತ್ತು ನೀಲಾಂಬರಿ ಧಾರಾವಾಹಿ ಮೂಲಕ ಕನ್ನಡ ಪ್ರೇಕ್ಷಕರ ಮನೆ ಮಾತಾಗಿರುವ ನೀತಾ ಅಶೋಕ್ ಫ್ಯಾಂಟಮ್ ಮೂಲಕ ಮತ್ತೆ ರಂಜಿಸಲು ಬರ್ತಿದ್ದಾರೆ.

  ಕಿಚ್ಚ ಸುದೀಪ್-ರಚಿತಾ ಅಭಿಮಾನಿಗಳಿಗೆ ಥ್ರಿಲ್ ಹೆಚ್ಚಿಸುವ ಸುದ್ದಿ, ನಿಜವೇ?

  ಅಪರ್ಣ ಬಲ್ಲಾಳ್ ಪಾತ್ರದ ಬಗ್ಗೆ ಅನೂಫ್ ಭಂಡಾರಿ ವಿವರಣೆ

  ಅಪರ್ಣ ಬಲ್ಲಾಳ್ ಪಾತ್ರದ ಬಗ್ಗೆ ಅನೂಫ್ ಭಂಡಾರಿ ವಿವರಣೆ

  "ಫ್ಯಾಂಟಮ್ ಸಿನಿಮಾದ ಸುಂದರವಾದ ಪಾತ್ರ ಅಪರ್ಣ ಬಲ್ಲಾಳ್. ಪನ್ನಾ ಬಾಂಬೆಯಲ್ಲಿ ಹುಟ್ಟಿಬೆಳೆದಿದ್ದರಿಂದ ಹಿಂದಿ ಮಿಶ್ರಿತ ಕನ್ನಡ ಮಾತನಾಡುವುದು ಅಭ್ಯಾಸ. ಅಡ್ವೆಂಚರ್ಸ್ ನೇಚರ್ ಇರುವ ಹುಡುಗಿ. ಎಲ್ಲಾ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ. ಈ ಸಿನಿಮಾ ಮೂಲಕ ಮೊದಲನೇ ಬಾರಿಗೆ ದೊಡ್ಡ ಪರದೆ ಮೇಲೆ ನೀತಾ ಅಶೋಕ್ ಕಾಣಿಸಿಕೊಳ್ಳುತ್ತಿದ್ದಾರೆ." ಎಂದು ಪಾತ್ರದ ಪರಿಚಯ ಮಾಡಿಕೊಡುತ್ತಾ ಫಸ್ಟ್ ಲುಕ್ ಅನಾವರಣ ಮಾಡಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ.

  'ಫ್ಯಾಂಟಮ್' ಲೋಕಕ್ಕೆ ಲಂಡನ್ ನಿಂದ ಬಂದ ಸಂಜು: ವಿಶ್ ಮಾಡಿದ ವಿಕ್ರಾಂತ್ ರೋಣ

  ಸಂಜೀವ್ ಗಂಭೀರ ಪಾತ್ರದ ಬಗ್ಗೆ

  ಸಂಜೀವ್ ಗಂಭೀರ ಪಾತ್ರದ ಬಗ್ಗೆ

  ಫ್ಯಾಂಟಮ್ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರ ಸಂಜೀವ್ ಗಂಭೀರ. ಸಂಜು ಲಂಡನ್ ನಲ್ಲಿ ಬೆಳೆದು, ಹುಟ್ಟಿದ ಊರಿಗೆ ವಾಪಸ್ ಬರುತ್ತಾನೆ. ಸಂಜು ನಗ್ತಾನೆ, ನಗಿಸ್ತಾರೆ, ತರ್ಲೆ ಮಾಡುತ್ತಾನೆ ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತಾನೆ. ಸಂಜು ಪಾತ್ರದಲ್ಲಿ ನಿರೂಪ್ ಭಂಡಾರಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರೂಪ್ ಭಂಡಾರಿಗೆ ಜೋಡಿಯಾಗಿ ನೀತಾ ಅಶೋಕ್ ನಟಿಸುತ್ತಿದ್ದಾರೆ.

  Read more about: sudeep ಸುದೀಪ್
  English summary
  Actress Neetha Ashok playing Aparna Bhalla in Sudeep's Phantom movie. Neetha Ashok's Phantom movie first look released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X