For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್ ರೋಣ' ಡಬ್ಬಿಂಗ್ ಮುಗಿಸಿದ ನೀತಾ ಅಶೋಕ್ ಹೇಳಿದ್ದೇನು?

  |

  ಕಿಚ್ಚ ಸುದೀಪ್ ಅಭಿನಯದಲ್ಲಿ ತಯಾರಾಗಿರುವ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕೋವಿಡ್ ಕಾರಣದಿಂದ ಕನ್ನಡದ ನಿರೀಕ್ಷಿತ ಚಿತ್ರಗಳು ಚಿತ್ರಮಂದಿರಕ್ಕೆ ಬರಲು ಕಾದು ಕುಂತಿವೆ. ಸಹಜ ಸ್ಥಿತಿ ನಿರ್ಮಾಣವಾದ ಕೂಡಲೇ ದಿನಾಂಕ ಲಾಕ್ ಮಾಡಿ ಪ್ರೇಕ್ಷಕರ ಮುಂದೆ ಬರಲಿವೆ. ಈ ಸಾಲಿನಲ್ಲಿ ವಿಕ್ರಾಂತ್ ರೋಣ ಸಿನಿಮಾ ಸ್ವಲ್ಪ ವಿಶೇಷವಾಗಿದೆ.

  ದುಬೈನಲ್ಲಿ ಟೈಟಲ್ ಟೀಸರ್ ಲಾಂಚ್ ಮಾಡಿ ದೇಶದ ಗಮನ ಸೆಳೆದ ವಿಕ್ರಾಂತ್ ರೋಣ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡ್ತಿದೆ. ಚಿತ್ರದ ಪ್ರಮುಖ ಕಲಾವಿದರು ತಮ್ಮ ಪಾತ್ರಗಳಿಗೆ ಡಬ್ಬಿಂಗ್ ಮಾಡ್ತಿದ್ದು, ಈ ವೇಳೆ ಸಿನಿಮಾದ ಔಟ್‌ಪುಟ್ ನೋಡಿ ಫುಲ್ ಖುಷ್ ಆಗಿದ್ದಾರೆ. ವಿಕ್ರಾಂತ್ ರೋಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ನೀತಾ ಅಶೋಕ್ ಡಬ್ಬಿಂಗ್ ಮುಗಿಸಿದ್ದಾರೆ. ಡಬ್ಬಿಂಗ್ ಮುಗಿಸಿದ ನೀತಾ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

  ಸುದೀಪ್ ಫ್ಯಾಂಟಮ್ ಲೋಕಕ್ಕೆ ಎಂಟ್ರಿ ಕೊಟ್ಟ ಅಪರ್ಣ ಬಲ್ಲಾಳ್ ಯಾರು?ಸುದೀಪ್ ಫ್ಯಾಂಟಮ್ ಲೋಕಕ್ಕೆ ಎಂಟ್ರಿ ಕೊಟ್ಟ ಅಪರ್ಣ ಬಲ್ಲಾಳ್ ಯಾರು?

  ನಿರೀಕ್ಷೆ, ಉತ್ಸಾಹ ಹೆಚ್ಚಾಗಿದೆ

  ನಿರೀಕ್ಷೆ, ಉತ್ಸಾಹ ಹೆಚ್ಚಾಗಿದೆ

  ''ಡಬ್ಬಿಂಗ್ ವೇಳೆ ವಿಕ್ರಾಂತ್ ರೋಣ ಸಿನಿಮಾ ನೋಡಿದ ನನಗೆ ನಿರೀಕ್ಷೆ, ಉತ್ಸಾಹ, ಸಂತೋಷ, ಕುತೂಹಲ, ರೋಮಾಂಚನ ಎಲ್ಲವೂ 10,000 ಪಟ್ಟು ಹೆಚ್ಚಾಗಿದೆ. ಅನೂಪ್ ಭಂಡಾರಿ ಸರ್ ನಿಮ್ಮ ಕಲ್ಪನೆಗೆ ನನ್ನ ಸಲ್ಯೂಟ್. ಸಂಪೂರ್ಣವಾಗಿ ಸಿನಿಮಾ ನೋಡಿದ್ಮೇಲೆ ರೋಮಾಂಚನ ಉಂಟಾಗುತ್ತದೆ'' ಎಂದು ನೀತಾ ಅಶೋಕ್ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  'ವಿಕ್ರಾಂತ್ ರೋಣ ನೋಡ್ತಾಯಿದ್ರೆ ಜೀವ ನಡುಗತ್ತೆ': ಡಬ್ಬಿಂಗ್ ಅನುಭವ ಬಿಚ್ಚಿಟ್ಟ'ವಿಕ್ರಾಂತ್ ರೋಣ ನೋಡ್ತಾಯಿದ್ರೆ ಜೀವ ನಡುಗತ್ತೆ': ಡಬ್ಬಿಂಗ್ ಅನುಭವ ಬಿಚ್ಚಿಟ್ಟ

  ಜೀವ ನಡುಗುತ್ತೆ ಎಂದಿದ್ದ ರವಿಶಂಕರ್ ಗೌಡ

  ಜೀವ ನಡುಗುತ್ತೆ ಎಂದಿದ್ದ ರವಿಶಂಕರ್ ಗೌಡ

  ಇತ್ತೀಚಿಗಷ್ಟೆ ನಟ ರವಿಶಂಕರ್ ಗೌಡ ವಿಕ್ರಾಂತ್ ರೋಣ ಡಬ್ಬಿಂಗ್ ಮುಗಿಸಿದ್ದರು. ಈ ಕುರಿತು ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದ ರವಿಶಂಕರ್, ''ಕ್ರಾಂತ್ ರೋಣ ಡಬ್ಬಿಂಗ್ ಮಾಡಿದೆ. ಅಬ್ಬಾ!! ಸಿನಿಮಾ ಪ್ರಾರಂಭವಾದಗಿನಿಂದ ಕೊನೆಯವರೆಗೂ ಸೀಟಿನಲ್ಲಿ ಒರಗಿಕೊಳ್ಳಲು ಸಾದ್ಯವಿಲ್ಲ. ಕುತೂಹಲದ ಮಹಾಪೂರ. ಗೆಳೆಯ ದೀಪುವಿನ ಅಭಿನಯಕ್ಕೆ ಮನಸೋಲದವರಿಲ್ಲಾ. ಹೊಸ ಕಲಾವಿದರದು ಅಚ್ಚುಕಟ್ಟಾದ ಅಭಿನಯ. ಇಡೀ ಸಿನಿಮಾ ನೋಡ್ತಾಯಿದ್ರೆ ಜೀವ ನಡುಗುತ್ತೆ'' ಎಂದಿದ್ದರು.

  ನೀತಾ ಅಶೋಕ್ ಯಾರು?

  ನೀತಾ ಅಶೋಕ್ ಯಾರು?

  ಕಿರುತೆರೆಯಲ್ಲಿ ಯಶೋಧೆ, ನಾ ನಿನ್ನ ಬಿಡಲಾರೆ ಮತ್ತು ನೀಲಾಂಬರಿ ಅಂತಹ ಧಾರಾವಾಹಿ ಮೂಲಕ ಖ್ಯಾತರಾಗಿರುವ ನೀತಾ ಅಶೋಕ್, ವಿಕ್ರಾಂತ್ ರೋಣ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸುತ್ತಿದ್ದಾರೆ. ಅಪರ್ಣ ಬಲ್ಲಾಳ್ ಎಂಬ ಪಾತ್ರ ನಿರ್ವಹಿಸುತ್ತಿದ್ದು, ನಿರೂಪ್ ಭಂಡಾರಿಗೆ ಜೋಡಿಯಾಗಿ ನಟಿಸಿದ್ದಾರೆ.

  ಕರೀನಾ ಕಪೂರ್ ಸೀತೆ ಅಲ್ಲ ಎಂದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ | Filmibeat Kannada
  ರಿಲೀಸ್ ಯಾವಾಗ?

  ರಿಲೀಸ್ ಯಾವಾಗ?

  ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ಕುರಿತು ಸದ್ಯಕ್ಕೆ ಸ್ಪಷ್ಟತೆ ಇಲ್ಲ. ಇದಕ್ಕೂ ಮುಂಚೆ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ತೆರೆಗೆ ಬರಬೇಕಿದೆ. ಈ ಚಿತ್ರದ ರಿಲೀಸ್ ದಿನಾಂಕ ನೋಡಿಕೊಂಡು ವಿಕ್ರಾಂತ್ ರೋಣ ಬಿಡುಗಡೆ ನಿರ್ಧರಿಸುವುದು ಚಿತ್ರತಂಡದ ಯೋಜನೆಯಾಗಿದೆ. ಹಾಗಾಗಿ, ಸದ್ಯಕ್ಕೆ ರಿಲೀಸ್ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ.

  English summary
  Actress Neetha Ashok Completes Dubbing for Vikrant Rona, says final version makes goosebumps.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X