twitter
    For Quick Alerts
    ALLOW NOTIFICATIONS  
    For Daily Alerts

    Neethu Shetty : ದಪ್ಪಗಿರುವವರಿಗೆ 'ಸೂ*' ಸರ್ಟಿಫಿಕೇಟ್ ಕೊಡಲಾಗ್ತಿದೆ: ನಟಿ ನೀತು ಶೆಟ್ಟಿ ಆಕ್ರೋಶ

    |

    'ಗಾಳಿಪಟ', 'ಮನಸಾರೆ' ಸೇರಿದಂತೆ ಇನ್ನೂ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ, ನಟಿಸುತ್ತಿರುವ ನೀತು ಶೆಟ್ಟಿ, ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರು.

    ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿರುವ ನೀತು ಶೆಟ್ಟಿ, ಕನ್ನಡ ಶಾಲೆಗಳಿಗೆ ಬಣ್ಣ ಬಳಿಯುವುದು ಸೇರಿದಂತೆ ಸಂಘ-ಸಂಸ್ಥೆಗಳೊಟ್ಟಿಗೆ ಸೇರಿಕೊಂಡು ಗ್ರೌಂಡ್ ಲೆವೆಲ್‌ ಕೆಲಸಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಸಾಮಾಜಿಕ ಜಾಲತಾಣದ ಟ್ರೋಲ್ ಫುಂಡರಿಗೆ ಇದೆಲ್ಲವೂ ಕಾಣದು. ಅವರಿಗೆ ನೀತುರಲ್ಲಿ ಕಾಣುವುದೇ ಬೇರೆ.

    ಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಬೆಂಬಲ: ಶಾಲೆಗೆ ಬಣ್ಣ ಬಳಿದ ನಟಿ ನೀತುಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಬೆಂಬಲ: ಶಾಲೆಗೆ ಬಣ್ಣ ಬಳಿದ ನಟಿ ನೀತು

    ಸಾಮಾಜಿಕ ಜಾಲತಾಣದಲ್ಲಿ ಹಲವು ಅಸಭ್ಯ ಕಮೆಂಟ್‌ಗಳನ್ನು ಎದುರಿಸಿರುವ ನೀತು ಶೆಟ್ಟಿ ಇದೀಗ ತಮ್ಮ ಅಸಮಾಧಾನವನ್ನು ಬಹಿರಂಗಗೊಳಿಸಿದ್ದಾರೆ. ಮಹಿಳೆಯರ ದೇಹಾಕಾರದ ಬಗ್ಗೆ, ಅದರಲ್ಲಿಯೂ 'ಆರೋಗ್ಯ'ವಂತ ದೇಹ ಹೊಂದಿದ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವವರ ಮೇಲೆ ಅಕ್ಷರಗಳ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

    Neetu Shetty Lambasted On Trolls Who Do Body Shaming On Social Media

    ಟಿವಿ ಚಾನೆಲ್‌ ಕಾರ್ಯಕ್ರಮ ಒಂದರಲ್ಲಿ ತಾವು ಪಾಲ್ಗೊಂಡಿದ್ದ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ನೀತು ಶೆಟ್ಟಿ, ''ಪ್ರತಿ ಸಲ ಚಾನೆಲ್ ಈ ಎಪಿಸೋಡ್ ಮರು ಪ್ರಸಾರ ಮಾಡಿದಾಗ ನಿಂದಕರು ಒಟ್ಟಿಗೆ ಕಾಮೆಂಟ್ಸ್ ಸೆಕ್ಷನ್ ಅಲ್ಲಿ ಸಿಗುತ್ತಾರೆ. ಇವರ ಪ್ರಕಾರ ತೆಳ್ಳಗಿಲ್ದೆ ಇರೋವ್ರು ಲೂಸ್ ಫಿಟ್ಟಿಂಗ್ ಬಟ್ಟೆ ಮಾತ್ರ ಹಾಕೋಕ್ಕೆ ಯೋಗ್ಯರು. ಇವರ ಪ್ರಕಾರ ದುಂಡಗಿರುವವರು ತುಂಬಾ 'ಮಜಾ /s**' ಮಾಡೋದ್ರಿಂದ ಹಾಗೆ ಆಗಿದ್ದಾರೆ. ಹಾಗಾಗಿ 'ಸೂ*' ಅನ್ನೋ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವುದು ಸರಿ. ಇವರ ಪ್ರಕಾರ 'ಪ್ಲಸ್ ಸೈಜ್' ಇರುವವರ ಮೇಲೆ ಯಾರಿಗೂ ಪ್ರೀತಿ, ರೋಮ್ಯಾನ್ಸ್ ಹುಟ್ಟಲ್ಲ. ಬ್ಯೂಟಿಫುಲ್ ಅಂತ ಪರಿಗಣಿಸಬಾರದು. ಹಿಡಿಂಬಾ/ರಾಕ್ಷಸಿಯಾಗೋಕ್ಕೆ ಮಾತ್ರ ನಾವು ಲಾಯಕ್'' ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಸಂಚಾರಿ ವಿಜಯ್‌ರ ಅಪೂರ್ಣ ಆಸೆ ಈಡೇರಿಸಿದ 'ಉಸಿರು' ತಂಡಸಂಚಾರಿ ವಿಜಯ್‌ರ ಅಪೂರ್ಣ ಆಸೆ ಈಡೇರಿಸಿದ 'ಉಸಿರು' ತಂಡ

    ಮುಂದುವರೆದು ''ಪ್ಲಸ್ ಸೈಜ್' ಹೊಂದಿರುವವರು ಜೀವನ ಪರ್ಯಂತ ದುಃಖದಲ್ಲಿ, ಡಯಟ್ ಹಾಗೂ ವರ್ಕೌಟ್ ಬಗ್ಗೆನೇ ಚಿಂತಿಸಿ, ತಗ್ಗಿ ಬಗ್ಗಿ ಸಮಾಜದಿಂದ ವಿಮುಖರಾಗಿ ಬದುಕ್ಬೇಕು. ಬೇರೆ ಯಾವ ವಿಷಯದ ಬಗ್ಗೆಯೂ ನಮಗೆ ಒಪೀನಿಯನ್ ಇರಲೇ ಬಾರದು. ಇದ್ರೆ, 'ಮೊದ್ಲು ಸಣ್ಣ ಆಗು, ಆಮೇಲೆ ಮಾತಾಡು' (ನನ್ನಂತಹ ನಟಿಯರು ಈ ಕೆಟಗರಿಗೆ ಸೇರಬೇಕು) 'ಪ್ಲಸ್ ಸೈಜ್' ಹೊಂದಿರುವವರು ಧೈರ್ಯವಾಗಿ ಪಬ್ಲಿಕ್‌ನಲ್ಲಿ ಅಥವಾ ಟೀವಿಯಲ್ಲಿ ಬಿಂದಾಸ್ ಆಗಿ ಕಾಣಿಸ್ಕೊಂಡ್ರೆ , ಅವರ 'ಗಟ್ಸ್' ಬಗ್ಗೆ ಇವರಿಗೆ ಸಿಟ್ಟು ಬರುತ್ತೆ. ದಪ್ಪ ಇರೋವ್ರು ಆರೋಗ್ಯವಂತರಲ್ಲ ಅನ್ನೋದೇ 'ಫ್ಯಾಕ್ಟ್' ಅಂತ ಇವರು ನಂಬಿದ್ದಾರೆ. ತೆಳ್ಳಗಿರುವವರೆಲ್ಲ ಫಿಟ್ ಅಂಡ್ ಫೈನ್ ಅಂತ ಅಂದುಕೊಂಡಿರ್ತಾರೆ. ತೆಳ್ಳಗಿಲ್ಲದೆ ಇರೋವವರನ್ನು ಪ್ರಾಣಿಗಳಿಗೆ ಹೋಲಿಸುವುದು ಇವರ ಹಕ್ಕು ಮಾಡ್ಕೊಂಡಿದ್ದಾರೆ'' ಎಂದು ಟ್ರೋಲರ್‌ಗಳನ್ನು ಜಾಡಿಸಿದ್ದಾರೆ ನೀತು.

    ''ಪ್ಲಸ್ ಸೈಜ್ ಇರೋದ್ರಿಂದ ಅವಕಾಶ ವಂಚಿತರಾಗುವುದು ಸರಿಯಾಗೇ ಇದೆ ಅಂತ ಇವರಿಗನಿಸುತ್ತೆ. ಇವರು ಈ ಸಮಾಜದ 'FatPhobic' ಜನ. ಇವರ ಯೋಚನೆಗಳು ತುಂಬಾನೇ ಹಳೆಯ ಕಾಲದ್ದು, ತುಕ್ಕು ಹಿಡಿದದ್ದು ಹಾಗೂ ತುಂಬಾ ವಿಷದಿಂದ ತುಂಬಿದ್ದು. ಇದು 'ಫ್ಯಾಟ್ ಫೋಬಿಯಾ' ದ ವಿಶ್ಲೇಷಣೆ. ಪ್ಲಸ್ ಸೈಜ್ ಜನರು ವಿಶ್ವದಾದ್ಯಂತ ಈಗ ಅಡಗಿ ಕೂರ್ತಾ ಇಲ್ಲ. ತೆಗಳಿಕೆ, ಅವಮಾನ, ನೋವಿನಿಂದ ಎದ್ದು ಫೀನಿಕ್ಸ್‌ ನಂತೇ ಎದ್ದು ಬದುಕುತ್ತಿದ್ದಾರೆ. ಆದರೆ We are Here, We are Real, We are not Victims, WE WILL SHOW UP'' ಎಂದು ಧೈರ್ಯ ಪ್ರದರ್ಶಿಸಿದ್ದಾರೆ ನೀತು ಶೆಟ್ಟಿ.

    English summary
    Actress Neetu Shetty lambasted on trolls who do body shaming on social media. She said we are strong and we do not care about trolls anymore.
    Thursday, March 24, 2022, 17:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X