For Quick Alerts
  ALLOW NOTIFICATIONS  
  For Daily Alerts

  Exclusive: ಶಿವಣ್ಣನಿಗೆ ಕಥೆ ಒಪ್ಪಿಸಿದ ರಜನಿ ಸಿನಿಮಾದ ನಿರ್ದೇಶಕ: ಶಿವಣ್ಣನ ಪಾತ್ರದ ಹೈಲೈಟ್ ಏನು?

  |

  ಒಂದ್ಕಡೆ ಸೂಪರ್‌ಸ್ಟಾರ್, ಇನ್ನೊಂದ್ಕಡೆ ಸೆಂಚುರಿ ಸ್ಟಾರ್. ಇಬ್ಬರೂ ಜೊತೆಯಾಗಿ ತೆರೆಮೇಲೆ ಬರುತ್ತಾರೆ ಅನ್ನೋ ಸುದ್ದಿ ದಕ್ಷಿಣ ಭಾರತದ ಚಿತ್ರರಂಗಕ್ಕೆ ದೊಡ್ಡ ಕಿಕ್ ಕೊಟ್ಟಿತ್ತು. ಪ್ಯಾನ್ ಇಂಡಿಯಾಗಳ ಈ ಜಮಾನದಲ್ಲಿ ರಜನಿಕಾಂತ್ ಸಿನಿಮಾ ಶಿವಣ್ಣ ನಟಿಸುತ್ತಾರೆ ಎಂದಾಗಲೇ ಸಿನಿಪ್ರಿಯರು ಫಿದಾ ಆಗಿದ್ದರು. ಇಬ್ಬರನ್ನೂ ತೆರೆಮೇಲೆ ನೋಡುವ ತವಕ ವ್ಯಕ್ತಪಡಿಸಿದ್ದರು. ಈ ಇದೇ ತಂಡದಿಂದ ಮತ್ತೊಂದು ಅಪ್‌ಡೇಟ್ ಹೊರಬಿದ್ದಿದೆ.

  ಇದೇ ಮೊದಲ ಬಾರಿಗೆ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟಿಸುತ್ತಿದ್ದಾರೆ. ಈ ಕಾರಣಕ್ಕೆ ಶಿವಣ್ಣ ಪಾತ್ರವೇನು? ಎಷ್ಟು ನಿಮಿಷ ರಜನಿಕಾಂತ್ ಜೊತೆ ಶಿವಣ್ಣ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ? ಯಾವಾಗ ಶೂಟಿಂಗ್ ಶುರುವಾಗುತ್ತೆ? ಇಂತಹದ್ದೆ ಒಂದಿಷ್ಟು ಕುತೂಹಲಗಳು ಕನ್ನಡಿಗರಲ್ಲಿ ಮನೆ ಮಾಡಿತ್ತು. ಆ ಕುತೂಹಲವೀಗ ದಪ್ಪಟ್ಟಾಗಿದೆ. ರಜನಿ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಶಿವಣ್ಣನ ಭೇಟಿ ಮಾಡಿ ತೆರೆಳಿದ್ದಾರೆ.

  ಪುನೀತ್ ಇಲ್ಲ ಅಂತಾ ಬೇಸರಪಟ್ಟಿದ್ದು ಸಾಕು, ಅಪ್ಪುನಾ ಸಂಭ್ರಮಿಸೋಣ ಎಂದು ಹೆಜ್ಜೆ ಹಾಕಿದ ಶಿವಣ್ಣಪುನೀತ್ ಇಲ್ಲ ಅಂತಾ ಬೇಸರಪಟ್ಟಿದ್ದು ಸಾಕು, ಅಪ್ಪುನಾ ಸಂಭ್ರಮಿಸೋಣ ಎಂದು ಹೆಜ್ಜೆ ಹಾಕಿದ ಶಿವಣ್ಣ

  ಶಿವಣ್ಣಗೆ ಕಥೆ ಹೇಳಿದ ನೆಲ್ಸನ್

  ಶಿವಣ್ಣಗೆ ಕಥೆ ಹೇಳಿದ ನೆಲ್ಸನ್

  ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಅಂದಾಗಲೇ ಕನ್ನಡ ಹಾಗೂ ತಮಿಳು ಸಿನಿಪ್ರಿಯ ಕಿವಿಗಳು ನೆಟ್ಟಗಾಗಿದ್ದವು. ಈಗ ರಜನಿಕಾಂತ್ 169ನೇ ಚಿತ್ರದಿಂದ ಮತ್ತೊಂದು ಅಪ್‌ಡೇಟ್ ಹೊರಬಿದ್ದಿದೆ. ರಜನಿಕಾಂತ್ ಸಿನಿಮಾ ನಿರ್ದೇಶಿಸುತ್ತಿರುವ ನೆಲ್ಸನ್ ದಿಲೀಪ್ ಕುಮಾರ್ ನಿನ್ನೆ (ಮೇ 05) ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಶಿವಣ್ಣನ ಮನೆಗೆ ಬಂದು ಅವರ ಪಾತ್ರ ಜೊತೆಗೆ ಕಥೆಯನ್ನು ಒಪ್ಪಿಸಿ ಹೋಗಿದ್ದಾರೆ. ಶಿವಣ್ಣ ಕೂಡ ತಮ್ಮ ಪಾತ್ರದ ಬಗ್ಗೆ ಫುಲ್ ಖುಷಿಯಾಗಿದ್ದಾರೆ ಎನ್ನುವುದು ಆಪ್ತರಿಂದಲೇ ಬಂದ ಸುದ್ದಿ.

  Dance Karnataka Dance: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಲ್ಲಿ ಆಯ್ಕೆಯಾದವರಿಗೆ ಪವರ್ ಫುಲ್ ʻರಾಜಪದಕʼDance Karnataka Dance: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಲ್ಲಿ ಆಯ್ಕೆಯಾದವರಿಗೆ ಪವರ್ ಫುಲ್ ʻರಾಜಪದಕʼ

  ರಜನಿಕಾಂತ್ ಚಿತ್ರಕ್ಕೆ ಶಿವಣ್ಣ ಟ್ವಿಸ್ಟ್

  ರಜನಿಕಾಂತ್ ಚಿತ್ರಕ್ಕೆ ಶಿವಣ್ಣ ಟ್ವಿಸ್ಟ್

  ಶಿವಣ್ಣನ ಪಾತ್ರದ ಬಗ್ಗೆ ಸಹಜವಾಗಿಯೇ ಕುತೂಹಲ ಹೆಚ್ಚಾಗಿದೆ. ಅದರಲ್ಲೂ ಶಿವಣ್ಣನ ಅಭಿಮಾನಿಗಳಿಗೆ ರಜನಿ ಜೊತೆ ತಮ್ಮ ನೆಚ್ಚಿನ ನೋಡುವುದೇ ದೊಡ್ಡ ಹಬ್ಬ. ಈ ಮಧ್ಯೆ ಪಾತ್ರದ ಬಗ್ಗೆ ಏನಾದರೂ ಸುಳಿವು ಸಿಗುತ್ತಾ? ಅಂತಾನೂ ಎದುರು ನೋಡುತ್ತಿದ್ದಾರೆ. ಆದರೆ, ಮೂಲಗಳ ಪ್ರಕಾರ, ಶಿವಣ್ಣನ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರದ ಚಿಕ್ಕದಾದರೂ, ಶಿವಣ್ಣನಿಂದ ಕಥೆಗೆ ದೊಡ್ಡದೊಂದು ಟ್ವಿಸ್ಟ್ ಸಿಗುತ್ತೆ ಎಂದು ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದ್ದಾರೆ.

  ನೆಲ್ಸನ್‌ಗೆ ಶಿವಣ್ಣನ ಮನೆಯಲ್ಲಿ ಆತಿಥ್ಯ

  ನೆಲ್ಸನ್‌ಗೆ ಶಿವಣ್ಣನ ಮನೆಯಲ್ಲಿ ಆತಿಥ್ಯ

  ನೆಲ್ಸನ್ ದಿಲೀಪ್ ಕುಮಾರ್ ಹಾಗೂ ಅವರ ಸಹಾಯರೊಬ್ಬರು ಶಿವಣ್ಣನ ಮನೆಗೆ ಬಂದಿದ್ದರು. ಕೆಲವೇ ಕ್ಷಣಗಳಲ್ಲಿ ಕಥೆ ಹಾಗೂ ಪಾತ್ರದ ಬಗ್ಗೆ ಹೇಳಿ ಮುಗಿಸಿದ್ದರು. ಬಳಿಕ ಒಂದಿಷ್ಟು ಹೊತ್ತು ಸಿನಿಮಾ ಬಗ್ಗೆ ಚರ್ಚೆ ಕೂಡ ಮಾಡಿದ್ದಾರೆ. ಇದೇ ವೇಳೆ ಶಿವಣ್ಣನ ಮನೆಯಲ್ಲಿ 'ಬೀಸ್ಟ್' ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್‌ಗೆ ವಿಶೇಷ ಭೋಜನವನ್ನು ಆಯೋಜಿಸಲಾಗಿತ್ತು. ಇತ್ತೀಚೆಗೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿ, ದಳಪತಿ ವಿಜಯ್ ಅಭಿನಯಿಸಿದ 'ಬೀಸ್ಟ್' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ.

  Shivarajkumar Ghost: ಸಂದೇಶ್ ನಾಗರಾಜ್ ನಿರ್ಮಾಣದ 'ಗೋಸ್ಟ್' ಹಿಂದೆ ಬಿದ್ದ ಶಿವಣ್ಣ, ಶ್ರೀನಿ ಸೂತ್ರಧಾರShivarajkumar Ghost: ಸಂದೇಶ್ ನಾಗರಾಜ್ ನಿರ್ಮಾಣದ 'ಗೋಸ್ಟ್' ಹಿಂದೆ ಬಿದ್ದ ಶಿವಣ್ಣ, ಶ್ರೀನಿ ಸೂತ್ರಧಾರ

  ಬಾಲಕೃಷ್ಣ ಜೊತೆ ಶಿವಣ್ಣ

  ಬಾಲಕೃಷ್ಣ ಜೊತೆ ಶಿವಣ್ಣ

  ಶಿವರಾಜ್‌ಕುಮಾರ್ ಈ ಹಿಂದೆ ತೆಲುಗು ಸಿನಿಮಾದಲ್ಲೂ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಬಾಲಕೃಷ್ಣ ನಟಿಸಿದ್ದ 'ಗೌತಮಿಪುತ್ರ ಶಾತಕರ್ಣಿ' ಸಿನಿಮಾದಲ್ಲಿ ಶಿವಣ್ಣ ಕಾಳಹಸ್ತೇಶ್ವರನ ಪಾತ್ರದಲ್ಲಿ ನಟಿಸಿದ್ದರು. ಅದೇ ಮೊದಲ ಬಾರಿಗೆ ಬೇರೆಯಲ್ಲಿ ನಟಿಸಿದ್ದ ಶಿವಣ್ಣ ಪಾತ್ರದ ಬಗ್ಗೆ ಕುತೂಹಲ ದುಪ್ಪಟ್ಟಾಗಿತ್ತು. ಈಗ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಸೂಪರ್‌ಸ್ಟಾರ್ ರಜನಿಕಾಂತ್ 169ನೇ ಚಿತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  English summary
  Nelson Dilipkumar Narrated Story to Shivarajkumar for Rajinikanth's 169th Movie, Know More.
  Friday, May 6, 2022, 13:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X