For Quick Alerts
  ALLOW NOTIFICATIONS  
  For Daily Alerts

  'ನೆನಪಿರಲಿ' ಖ್ಯಾತಿಯ ನಟಿ ವರ್ಷ ಈಗ ಏನ್ಮಾಡ್ತಿದ್ದಾರೆ, ಹೇಗಾಗಿದ್ದಾರೆ? ನೀವೆ ನೋಡಿ

  |

  'ನೆನಪಿರಿಲಿ' ಸಿನಿಮಾ ಯಾರಿಗೆ ತಾನೆ ನೆನಪಿಲ್ಲ ಹೇಳಿ. ಲವ್ಲಿ ಸ್ಟಾರ್ ಪ್ರೇಮ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಹಿಟ್ ಆಗಿತ್ತು. ಈ ಸಿನಿಮಾ ಬಳಿಕ ಪ್ರೇಮ್ ನೆನಪಿರಲಿ ಪ್ರೇಮ್ ಆಗಿ ಖ್ಯಾತಿಗಳಿಸಿದರು. ಪ್ರೇಮ್ ಮಾತ್ರವಲ್ಲ, ಸಿನಿಮಾದ ನಾಯಕಿ ಕೂಡ ಅಷ್ಟೆ ಫೇಮಸ್ ಆದರು.

  2005ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾಗೆ ಈಗ 15 ವರ್ಷಗಳಾಗಿದೆ. ಈ ಚಿತ್ರದಲ್ಲಿ ಪ್ರೇಮ್ ಗೆ ನಾಯಕಿಯಾಗಿ ವರ್ಷ ಕಾಣಿಸಿಕೊಂಡಿದ್ದರು. ಸಿನಿಮಾದ ದ್ವಿತಿಯಾರ್ಧದಲ್ಲಿ ವರ್ಷ ಮಿಂಚಿದ್ದರು. ಎರಡನೇ ಭಾಗದಲ್ಲಿ ಕಾಣಿಸಿಕೊಂಡರೂ ವರ್ಷ ಕನ್ನಡ ಪ್ರೇಕ್ಷಕರ ಮನಗೆದಿದ್ದರು. ನಟಿ ವರ್ಷ ಅಭಿನಯಿಸಿದ ಸಿನಿಮಾಗಳ ಸಂಖ್ಯೆ ತೀರ ಕಡಿಮೆಯಾದರು ವರ್ಷ ಹೆಸರು ಮಾತ್ರ ಚಿರಪರಿಚಿತ. ಸಿನಿಮಾ ಜೊತೆಗೆ ನಿರೂಪಕಿಯಾಗಿಯೂ ವರ್ಷ ಕಾಣಿಸಿಕೊಂಡಿದ್ದಾರೆ.

  ನವಗ್ರಹ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು

  ನವಗ್ರಹ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು

  ಹೈಟ್, ಟ್ಯಾಲೆಂಟ್ ಮೂಲಕ ಸಿನಿಪ್ರೇಕ್ಷರ ಮೆಚ್ಚುಗೆ ಗಳಿಸಿದ್ದ ವರ್ಷ, ಖ್ಯಾತಿ ಗಳಿಸುತ್ತಿದ್ದಂತೆ ಸಿನಿಮಾರಂಗದಿಂದ ದೂರ ಸರಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ನವಗ್ರಹ' ಸಿನಿಮಾದಲ್ಲಿ ವರ್ಷ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅವಕಾಶಗಳು ಇದ್ದರು ವರ್ಷ ಬಣ್ಣದ ಲೋಕದಿಂದ ದೂರ ಸರಿದ ಕಾರಣವೇನು ಎನ್ನುವುದು ಬಹಿರಂಗವಾಗಿಲ್ಲ.

  ಬದಲಾದ ವರ್ಷ ಹೇಗಿದ್ದಾರೆ ನೋಡಿ

  ಬದಲಾದ ವರ್ಷ ಹೇಗಿದ್ದಾರೆ ನೋಡಿ

  ಇದೀಗ ವರ್ಷಗಳ ಬಳಿಕ ವರ್ಷ ಮತ್ತೆ ಕಾಣಿಸಿಕೊಂಡಿದ್ದಾರೆ. ಬದಲಾದ ವರ್ಷ ಅವರನ್ನು ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.

  ವರ್ಷ ಈಗ ಸಂಪೂರ್ಣ ಬದಲಾಗಿದ್ದಾರೆ. ಉದ್ದ ಕೂದಲಿನ ವರ್ಷ ಈಗ, ಸುಂದರ ಕೂದಲಿಗೆ ಕತ್ತರಿ ಹಾಕಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶಾಲಿನಿ ನಡೆಸಿಕೊಡುವ 'ಶಾಲಿವುಡ್' ಕಾರ್ಯಕ್ರಮದಲ್ಲಿ ವರ್ಷ ಕಾಣಿಸಿಕೊಂಡಿದ್ದಾರೆ. 'ಮಾಮ್ ಅಂಡ್ ಮಿ' ಎನ್ನುವ ಸೀರಿಸ್ ಪ್ರಾರಂಭಿಸಿದ್ದಾರೆ.

  'ಮಾಮ್ ಅಂಡ್ ಮಿ' ಸೀರಿಸ್ ನಲ್ಲಿ ವರ್ಷ

  'ಮಾಮ್ ಅಂಡ್ ಮಿ' ಸೀರಿಸ್ ನಲ್ಲಿ ವರ್ಷ

  'ಮಾಮ್ ಅಂಡ್ ಮಿ' ಸೀರಿಸ್ ನಲ್ಲಿ ವರ್ಷ ಮತ್ತು ಶಾಲಿನಿ ನಟಿಸುತ್ತಿದ್ದಾರೆ. ಅಮ್ಮ ಮಗಳ ನಡುವಿನ ಸಂಬಂಧ ಹೇಗಿರುತ್ತೆ ಎಂದು ಈ ಸೀರಿಸ್ ನಲ್ಲಿ ತೋರಿಸಲಾಗಿದೆ. ಈ ಸೀರಿಸ್ ನಲ್ಲಿ ವರ್ಷ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರ್ಷಗಳ ಬಳಿಕ ವರ್ಷರನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಇಷ್ಟು ದಿನ ಎಲ್ಲಿಗೆ ಹೋಗಿದ್ರಿ ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತೆ ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳಿ, ನಿರೂಪಣೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

  ಕರುಣೆ ಬರ್ಲಿ ನನ್ ಮೇಲೆ ಅಂತ ನಾನು ಈ ವಿಡಿಯೋ ಮಾಡ್ತಿಲ್ಲ | Anushree | Filmibeat Kannada
  ಅನಾರೋಗ್ಯದಿಂದ ಬಳಲುತ್ತಿದ್ದಾರಾ ವರ್ಷ?

  ಅನಾರೋಗ್ಯದಿಂದ ಬಳಲುತ್ತಿದ್ದಾರಾ ವರ್ಷ?

  ಸಾಕಷ್ಟು ಮಂದಿ, ವರ್ಷ ಲುಕ್ ನೋಡಿ ಆರೋಗ್ಯದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ವರ್ಷ ಅವರು ಅನಾರೋಗ್ಯದಿಂದ ಬಳಲುತ್ತಿದ್ದರಂತೆ. ಸದ್ಯ ಸುಧಾರಿಸಿಕೊಂಡಿರುವ ವರ್ಷ ಚಿಕಿತ್ಸೆ ಪಡೆಯುತ್ತಿದ್ದಾರಂತೆ. ಇದೀಗ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸದ್ಯ ಶಾಲಿವುಡ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ವರ್ಷ, ಮುಂದಿನ ದಿನಗಳಲ್ಲಿ ದೊಡ್ಡ ಪರದೆ ಮೇಲೆ ಮಿಂಚುವ ಸಾಧ್ಯತೆ ಇದೆ.

  English summary
  Nenapirali fame Actress Varsha come back to Acting after a long time. She is playing daughter role in shalini's Shaliwood show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X