ಫೋಟೋ ಶೇರ್ ಮಾಡಿ ಮಗಳ ಹುಟ್ಟುಹಬ್ಬಕ್ಕೆ ನೆನಪಿರಲಿ ಪ್ರೇಮ್ ಪ್ರೀತಿಯ ವಿಶ್

ಸ್ಯಾಂಡಲ್ ವುಡ್ ನ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಪುತ್ರಿಗೆ ಹುಟ್ಟುಹಬ್ಬದ ಸಂಭ್ರಮ. ಮುದ್ದಿನ ಮುದ್ದಿನ ಮಗಳು ಅಮೃತಾ ಹುಟ್ಟುಹಬ್ಬಕ್ಕೆ ಪ್ರೇಮ್ ಮಗಳ ಜೊತೆಯಿರುವ ಫೋಟೋ ಹಂಚಿಕೊಂಡು ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಪ್ರೇಮ್ ಮಗಳ ಜೊೆತೆ ಇರುವ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರೇಮ್ ಮಗಳ ಫೋಟೋ ಎಲ್ಲರ ಗಮನ ಸೆಳೆಯುತ್ತಿದ್ದು, ಅಭಿಮಾನಿಗಳು ಸಹ ಶುಭಕೋರುತ್ತಿದ್ದಾರೆ. ನೆನಪಿರಲಿ ಪ್ರೇಮ್ ಗೆ ಇಷ್ಟು ದೊಡ್ಡ ಮಗಳಿದ್ದಾರಾ ಎಂದು ಅಚ್ಚರಿ ಪಡುತ್ತಿದ್ದಾರೆ. ಇನ್ನೂ ಯಂಗ್ ಆಗಿಯೇ ಇರುವ ಪ್ರೇಮ್ ಈಗಲೂ ಲವರ್ ಬಾಯ್ ಇಮೇಜ್ ನಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಆದರೆ ಮಗಳು ಇಷ್ಟು ಎತ್ತರಕ್ಕೆ ಬೆಳದಿದ್ದಾರೆ ಎಂದರೇ ನಂಬಲು ಸಾಧ್ಯವಾಗುತ್ತಿಲ್ಲ.

ಪ್ರೇಮ್ ಗೆ ಮಗಳೆಂದರೆ ಅತೀವ ಪ್ರೀತಿ. ಮಗಳ ಹುಟ್ಟುಹಬ್ಬಕ್ಕೆ ಪ್ರೇಮ್ ಪ್ರೀತಿಯ ವಿಶ್ ಮಾಡಿದ್ದಾರೆ. 'ನಕ್ಷತ್ರಗಳು ನಾಚುವ ಹಾಗೆ ಸದಾ ನಗುತ್ತಿರು. ಹುಟ್ಟುಹಬ್ಬದ ಶುಭಾಶಯಗಳು ಮಗಳೆ. ಲವ್ ಯೂ' ಎಂದು ಬರೆದುಕೊಂಡಿದ್ದಾರೆ. ಪ್ರೇಮ್ ಮಗಳ ಫೋಟೋ ಶೇರ್ ಮಾಡುತ್ತಿದಂತೆ ನೆಟ್ಟಿಗರು, ಸರ್ ನಿಮ್ಮ ಮಗಳು ಇಷ್ಟು ದೊಡ್ಡವರಾ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Nenapirali Prem birthday wishes to his daughter Amrutha

ಅಂದಹಾಗೆ ಅಮೃತಾ ಮೆಡಿಕಲ್ ಎಲೆಕ್ಟ್ರಾನಿಕ್ಸ್ ಓದುತ್ತಿದ್ದಾರೆ. ಇತ್ತೀಚಿಗಷ್ಟೆ ಅಮೃತಾ ಟ್ರಡಿಷನಲ್ ಫೋಟೋಶೂಟ್ ಮಾಡಿಸುವ ಮೂಲಕ ಎಲ್ಲರ ಗಮನ ಸೆಳೆಸಿದ್ದರು. ಮಗಳು ಸೀರೆ ಧರಿಸಿ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋವನ್ನು ಶೇರ್ ಮಾಡಿ ಪ್ರೇಮ್, 'ಮಗಳೆಂದರೆ ದೇವತೆ. ದೇವತೆಯನ್ನು ಪಡೆಯುವ ಅದೃಷ್ಟ ಎಲ್ಲಾ ತಂದೆಯರಿಗೂ ಸಿಗುವುದಿಲ್ಲ. ಅಭಿನಂದನೆಗಳು ನನ್ನ ಅದೃಷ್ಟ ದೇವತೆಗೆ' ಎಂದು ಮಗಳ ಬಗ್ಗೆ ಪ್ರೀತಿಯಿಂದ ಬರೆದುಕೊಂಡಿದ್ದರು.

Recommended Video

ಸದ್ದಿಲ್ಲದೆ ಮುಗಿದುಹೋಯ್ತು ವರುಣ್ ಧವನ್ ಮದುವೆ | Filmibeat Kannada

More from Filmibeat

English summary
Nikhil Kumar reaction to Doddarange Gowda's statement about Hindi language.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X