For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ಕಾಲಿಟ್ಟು 19 ವರ್ಷ: ಹಳೆಯ ನೆನಪು ಮೆಲುಕು ಹಾಕಿದ ನೆನಪಿರಲಿ ಪ್ರೇಮ್

  |

  ನಟ ನೆನಪಿರಲಿ ಪ್ರೇಮ್ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ (ಜನವರಿ 30) 19 ವರ್ಷಗಳಾಗಿವೆ. ತಮ್ಮ ಮೊದಲ ಸಿನಿಮಾದ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ನಟ.

  ಪ್ರೇಮ್ ಅನ್ನು 'ನೆನಪಿರಲಿ ಪ್ರೇಮ್' ಎಂದೇ ಕರೆಯುವುದು ರೂಢಿ. ಆದರೆ 'ನೆನಪಿರಲಿ' ಪ್ರೇಮ್‌ ರ ಮೊದಲ ಸಿನಿಮಾ ಅಲ್ಲ. ಅದಕ್ಕೂ ಮುನ್ನಾ 2004ರಲ್ಲಿ 'ಪ್ರಾಣ' ಸಿನಿಮಾದಲ್ಲಿ ಪ್ರೇಮ್ ನಟಿಸಿದ್ದರು.

  'ಪ್ರಾಣ' ಸಿನಿಮಾದ ಕೆಲವು ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ನಟ ಪ್ರೇಮ್. 'ಇಂದಿಗೆ 19 ವರ್ಷ ಚಿತ್ರ ರಂಗದ ನನ್ನ ವೃತ್ತಿ ಜೀವನಕ್ಕೆ. ನನ್ನನ್ನು ಹರಸಿದ, ಬೆಳೆಸಿದ, ಆಶೀರ್ವದಿಸಿದ ಅಭಿಮಾನಕ್ಕೆ ನಿಮ್ಮೆಲ್ಲರ ಪಾದಕ್ಕೆ ಹಣೆ ಹಚ್ಚಿ ನಮಸ್ಕರಿಸುತ್ತೇನೆ' ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

  'ಪ್ರಾಣ' ಸಿನಿಮಾದಲ್ಲಿ ಜೀವ ಎನ್ನುವ ಪಾತ್ರದಲ್ಲಿ ನಟಿಸಿದ್ದರು ನಟ ಪ್ರೇಮ್. ಕೆಲವು ಒಳ್ಳೆಯ ಹಾಡುಗಳಿದ್ದ ಈ ಪ್ರೇಮ ಕತೆ ಅಷ್ಟೇನೂ ಚೆನ್ನಾಗಿ ಪ್ರದರ್ಶನ ಕಾಣಲಿಲ್ಲ. ಆದರೆ ಪ್ರೇಮ್ ಎಲ್ಲರ ಗಮನ ಸೆಳೆದರು.

  'ನೆನಪಿರಲಿ' ಸಿನಿಮಾದಲ್ಲಿ ಪ್ರೇಮ್‌ಗೆ ಅವಕಾಶ ದೊರೆಯಿತು. ಆ ನಂತರದ್ದು ಇತಿಹಾಸ. ನೆನಪಿರಲಿ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಸಿನಿಮಾದ ಹಾಡುಗಳಂತೂ ಇಂದಿಗೂ ಮಾಸಿಲ್ಲ. ನೆನಪಿರಲಿ ಸಿನಿಮಾದಿಂದ ಪ್ರೇಮ್ ಕನ್ನಡದಲ್ಲಿ ಗಟ್ಟಿಯಾಗಿ ನೆಲೆನಿಲ್ಲುವಂತಾಯಿತು.

  ನೆನಪಿರಲಿ ನಂತರ ಬಂದ 'ಜೊತೆ-ಜೊತೆಯಲಿ' ಸಿನಿಮಾ ಪ್ರೇಮ್ ಸ್ಥಾನವನ್ನು ಇನ್ನಷ್ಟು ಭದ್ರ ಮಾಡಿತು. ನಂತರ 'ಪಲ್ಲಕ್ಕಿ', ಗುಣವಂತ ಸಿನಿಮಾಗಳು ಸಹ ಚೆನ್ನಾಗಿ ಪ್ರದರ್ಶನ ಕಂಡು, ಪ್ರೇಮ್ ಪೈಸಾ ವಸೂಲ್ ನಟ ಎಂಬುದು ಚಿತ್ರರಂಗಕ್ಕೆ ಖಾತ್ರಿಯಾಯಿತು.

  ಮಾಜಿ ಗೆಳೆಯನ ರಾಬರ್ಟ್ ಸಿನಿಮಾ ಬಗ್ಗೆ ಮಾತನಾಡಿದ ಸುದೀಪ್ | Sudeep | Darshan | Roberrt

  ಹಲವು ಹೊಸ ಹೀರೋಗಳ ಮಧ್ಯೆಯೂ ನಟ ಪ್ರೇಮ್ ಹಾಗಯೇ ಉಳಿದುಕೊಂಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಕೆಲವು ನೆನಪುಳಿಯುವ ಸಿನಿಮಾಗಳನ್ನು ನಟ ಪ್ರೇಮ್ ನೀಡಿದ್ದಾರೆ.

  English summary
  Actor Nenapirali Prem celebrates 19 years in Kannada cinema industry. He first acted in Prana movie which released on 2004 January 30.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X