»   » ರಸ್ನಾ,ಪಾ ಬಾಲೆ ನುಂಗಿದ 'ಅಗ್ನಿ' ವಿಮಾನ ದುರಂತ

ರಸ್ನಾ,ಪಾ ಬಾಲೆ ನುಂಗಿದ 'ಅಗ್ನಿ' ವಿಮಾನ ದುರಂತ

Posted By:
Subscribe to Filmibeat Kannada
Taruni Sachdv
ಅಮಿತಾಬ್ ಬಚ್ಚನ್ ಜೊತೆ 'ಪಾ' ಚಿತ್ರದಲ್ಲಿ ನಟಿಸಿದ್ದ ತರುಣಿ ಸಚ್ ದೇವ್(14) ಬಾಲನಟಿಯನ್ನು 'ಅಗ್ನಿ' ವಿಮಾನ ದುರಂತ ನುಂಗಿದೆ. ಉತ್ತರ ನೇಪಾಳದ ಜೊಮ್ಸಮ್‌ನಲ್ಲಿರುವ ಅತಿ ಎತ್ತರದ ವಿಮಾನ ನಿಲ್ದಾಣದಲ್ಲಿ ಖಾಸಗಿ ಕಿರು ವಿಮಾನ ದುರಂತದಲ್ಲಿ ಸಾವನ್ನಪ್ಪಿದ 13 ಮಂದಿ ಭಾರತೀಯರಲ್ಲಿ 'ಪಾ' ಬಾಲೆ ತರುಣಿ ಇರುವುದು ದೃಢಪಟ್ಟಿದೆ.

ತನ್ನ ಅಮ್ಮನ ಜೊತೆ ಮುಕ್ತಿನಾಥ ಯಾತ್ರಾಸ್ಥಳಕ್ಕೆ ಹೊರಟ್ಟಿದ್ದ ತರುಣಿ, ದುರಂತ ಸಾವನ್ನಪ್ಪಿದ್ದಾಳೆ. ಆಕೆಯ ಸಾವಿಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ತರುಣಿಗೆ ಅಶ್ರುತರ್ಪಣ ಅರ್ಪಿಸಲಾಗುತ್ತಿದೆ.

ಬಾಲಿವುಡ್ ಗಿಂತ ದಕ್ಷಿಣ ಭಾರತದಲ್ಲಿ ಮನೆ ಮಾತಾಗಿದ್ದವಳು ತರುಣಿ. ಮಲೆಯಾಳಂ ಚಿತ್ರ 2004ರಲ್ಲಿ ತೆರೆಕಂಡ 'ವೆಲ್ಲಿನಕ್ಷತ್ರಂ' ಚಿತ್ರದಲ್ಲಿ ಪುಟ್ಟ ಬಾಲೆ ನೋಡುವುದೇ ಕಣ್ಣಿಗೆ ಆನಂದವಾಗಿತ್ತು.

ಮುದ್ದು ಮುಖದ ತರುಣಿ, ಕರಿಷ್ಮಾ ಕಪೂರ್ ಜೊತೆ ರಸ್ನಾ ಗರ್ಲ್ ಆಗಿ ಕೂಡಾ ಜನಪ್ರಿಯತೆ ಗಳಿಸಿದ್ದಳು. ಸುಮಾರು 50ಕ್ಕೂ ಅಧಿಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ತರುಣಿ ಸಾವು ಆಕೆ ಅಭಿಮಾನಿಗಳಿಗೆ ಶಾಕ್ ತಂದಿದೆ.

ಅಗ್ನಿ ಸಂಸ್ಥೆಯ Dornier 228 9N AIG ವಿಮಾನ ನೇಪಾಳ ಕಾಲಮಾನದ ಪ್ರಕಾರ ಬೆಳಗ್ಗೆ 9.46 ರ ಸುಮಾರಿಗೆ ಮುಸ್ಟಾಂಗ್ ಜಿಲ್ಲೆಯ ಜೊಸೊಮ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ಅಪಘಾತವಾಗಿತ್ತು. ಸಾವು ನೋವು ವಿವರ.. ಸಹಾಯವಾಣಿ ಮಾಹಿತಿಗೆ ಕ್ಲಿಕ್ ಮಾಡಿ

English summary
Child Actor Taruni Sachdev who acted alongwith Amithab Bachchan Starrer 'Paa' movie had a sad demise on Monday(May.15). Taruni is among the 13 Indians who died 15 passengers died in the Agni Air-owned aircraft crash mishap Jomsom. Taruni was due to visit Muktinath along withher Mother.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada