twitter
    For Quick Alerts
    ALLOW NOTIFICATIONS  
    For Daily Alerts

    ಸೆನ್ಸಾರ್‌ ಮಂಡಳಿಯಲ್ಲಿ ಕುಟುಂಬ ವಾರಸ್ಧಾರಿಕೆ: ತೀವ್ರ ಆಕ್ರೋಶ

    |

    ಸಿನಿಮಾಗಳಿಗೆ ಪ್ರಮಾಣ ಪತ್ರ ನೀಡುವ ಸೆನ್ಸಾರ್ ಮಂಡಳಿಗೆ 71 ಸದಸ್ಯರ ನೇಮಕವಾಗಿ ಪಟ್ಟಿ ಹೊರಬಿದ್ದಿದೆ. ಅದರಲ್ಲಿ ಕರ್ನಾಟಕದಿಂದ ನೇಮಕವಾದ ಸದಸ್ಯರ ಹೆಸರುಗಳೂ ಇವೆ. ಆದರೆ ಈ ಪಟ್ಟಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.

    ಸೆನ್ಸಾರ್ ಮಂಡಳಿಯಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಹತ್ತಿರದವರು ಅಥವಾ ಅಧಿಕಾರದಲ್ಲಿರುವವರ ಹತ್ತಿರದವರು ನೇಮಕವಾಗುವುದು ಹೊಸದೇನಲ್ಲ. ಆದರೆ ಈ ಬಾರಿ ಬಹುತೇಕ ವಿವಿಧ ಅಕಾಡೆಮಿಗಳಲ್ಲಿ ಹುದ್ದೆಯಲ್ಲಿರುವವರ ಕುಟುಂಬದವರು, ಸಿನಿಮಾ ರಂಗಕ್ಕೆ ಸಂಬಂಧವಿಲ್ಲದವರು, ಟಿವಿ, ರಿಯಾಲಿಟಿ ಶೋ ತಂತ್ರಜ್ಞರನ್ನು ನೇಮಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಲಾಗಿದೆ.

    ಈ ಬಗ್ಗೆ 'ಫಿಲ್ಮೀಬೀಟ್ ಕನ್ನಡ'ದೊಂದಿಗೆ ಮಾತನಾಡಿರುವ ನಿರ್ದೇಶಕ, ನಿರ್ಮಾಪಕ ಆಸ್ಕರ್ ಕೃಷ್ಣ 'ಸೆನ್ಸಾರ್ ಮಂಡಳಿಗೆ ನೇಮಕವಾರದವರಲ್ಲಿ ಸಿನಿಮಾ ರಂಗಕ್ಕೆ ಸೇವೆ ಸಲ್ಲಿರುವವರ ಸಂಖ್ಯೆ ಬಹಳ ಕಡಿಮೆ ಇದೆ. ಸಿನಿಮಾ ಅಜ್ಞಾನಿಗಳ ಸಂಖ್ಯೆ ಹೆಚ್ಚಿದೆ. ಈಗಾಗಲೇ ಅಕಾಡೆಮಿಗಳಲ್ಲಿ ಹುದ್ದೆಗಳನ್ನು ಅನುಭವಿಸುತ್ತಿರುವವರೇ ತಮ್ಮ ಕುಟುಂಬದವರನ್ನು ಆಪ್ತರನ್ನು ಮಂಡಳಿಗೆ ನೇಮಿಸಿದ್ದಾರೆ' ಎಂದಿದ್ದಾರೆ.

    'ಚಲನಚಿತ್ರ ಅಕಾಡೆಮಿಯಿಂದಲೇ ಶಿಫಾರಸ್ಸು ಮಾಡಿರುವವರನ್ನು ಮಂಡಳಿಗೆ ಆಯ್ಕೆ ಮಾಡಲಾಗಿದೆ. ಅಕಾಡೆಮಿ ಇರುವುದು ಚಿತ್ರರಂಗದ ಅಭಿವೃದ್ಧಿಗೆ ಅದನ್ನು ಬಿಟ್ಟು ತಮ್ಮ ಕುಟುಂಬದವರಿಗೆ, ಆಪ್ತರಿಗೆ ಉದ್ಯೋಗಗಳನ್ನು, ಹುದ್ದೆಗಳನ್ನು ಕೊಡಿಸಲು ಅಲ್ಲ' ಎಂದಿದ್ದಾರೆ ಆಸ್ಕರ್ ಕೃಷ್ಣ.

    ಚಿತ್ರೋದ್ರಮದ ಮೇಲೆ ಕೆಟ್ಟ ಪರಿಣಾಮ: ಆಸ್ಕರ್ ಕೃಷ್ಣ

    ಚಿತ್ರೋದ್ರಮದ ಮೇಲೆ ಕೆಟ್ಟ ಪರಿಣಾಮ: ಆಸ್ಕರ್ ಕೃಷ್ಣ

    'ಈ ಸ್ವಜನಪಕ್ಷಪಾತ ನಡೆ ಕನ್ನಡ ಚಿತ್ರೋದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಅನುನಭುವಿಗಳು, ಅಜ್ಞಾನಿಗಳು ಸೇರಿಕೊಂಡಿರುವುದರಿಂದ ಯಾವ ಸಿನಿಮಾಗಳಿಗೆ ಯಾವ ಮಾನದಂಡದ ಮೇಲೆ ಪ್ರಮಾಣ ಪತ್ರ ನೀಡಬೇಕು ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಸಿನಿಮಾಗಳ ಪಾತ್ರಜ್ಞಾನ, ಸಂಸ್ಕೃತಿ ಜ್ಞಾನ ಇರುವುದಿಲ್ಲ. ಯಾವ ಸಂಭಾಷಣೆಗಳನ್ನು ಕಟ್ ಮಾಡಬೇಕು, ಯಾವ ದೃಶ್ಯಗಳನ್ನು ಕಟ್ ಮಾಡಬೇಕು ಕೇವಲ ಮಾರ್ಗಸೂಚಿ ಓದಿಕೊಂಡು ನಿರ್ಧರಿಸಿಬಿಡುವ ಅಪಾಯ ಇದೆ. ಇದರಿಂದ ಸೃಜನಶೀಲ ನಿರ್ದೇಶಕರಿಗೆ ದೊಡ್ಡ ಪೆಟ್ಟು ಬೀಳುತ್ತದೆ' ಎಂದಿದ್ದಾರೆ ಆಸ್ಕರ್ ಕೃಷ್ಣ.

    'ಪ್ರಮಾಣ ಪತ್ರಗಳು ಸಿನಿಮಾ ಮಾರುಕಟ್ಟೆಗೆ ಬಹಳ ಅವಶ್ಯಕ'

    'ಪ್ರಮಾಣ ಪತ್ರಗಳು ಸಿನಿಮಾ ಮಾರುಕಟ್ಟೆಗೆ ಬಹಳ ಅವಶ್ಯಕ'

    'ಸಿನಿಮಾಗಳ ಮಾರುಕಟ್ಟೆಗೆ ಪ್ರಮಾಣ ಪತ್ರಗಳು ಬಹಳ ಅವಶ್ಯಕ. ಸರ್ಟಿಫಿಕೇಟ್‌ಗಳನ್ನು ನೋಡಿಕೊಂಡು ಪ್ರಚಾರ ಮಾಡಲಾಗುತ್ತದೆ. ಸ್ಯಾಟಲೈಟ್ ಹಕ್ಕು ಖರೀದಿ ವೇಳೆಯೂ ಸರ್ಟಿಫಿಕೇಟ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾರೋ ಕೆಲವು ಅನನುಭವಿಗಳು ಸಿನಿಮಾಗಳಿಗೆ ತಮ್ಮ ಜ್ಞಾನಕ್ಕೆ ಅನುಗುಣವಾಗಿ 'ಯು', 'ಎ' ಸರ್ಟಿಫಿಕೇಟ್‌ ನೀಡಿದಾಗ ಸಿನಿಮಾದ ನಿರ್ದೇಶಿಕರಿಗೆ, ನಿರ್ಮಾಪಕರಿಗೆ ದೊಡ್ಡ ನಷ್ಟವಾಗುತ್ತದೆ' ಎಂದು ವಿಶ್ಲೇಷಿಸಿದರು ಆಸ್ಕರ್ ಕೃಷ್ಣ.

    'ಸಿನಿಮಾ ಅಜ್ಞಾನಿಗಳು ಫಲಿತಾಂಶ ನೀಡುವುದು ಸೂಕ್ತವಲ್ಲ'

    'ಸಿನಿಮಾ ಅಜ್ಞಾನಿಗಳು ಫಲಿತಾಂಶ ನೀಡುವುದು ಸೂಕ್ತವಲ್ಲ'

    ಸೀರಿಯಲ್ ನವರನ್ನು, ಸಿನಿಮಾ ರಂಗಕ್ಕೆ ಸಂಬಂಧ ಇಲ್ಲದವರನ್ನು ಕರೆದುಕೊಂಡು ಬಂದು ಮಂಡಳಿಯಲ್ಲಿ ಕೂರಿಸಲಾಗಿದೆ. ನಮ್ಮಲ್ಲಿ ಹಲವು ಹಿರಿಯ ನಿರ್ದೇಶಕ, ನಿರ್ಮಾಪಕರಿದ್ದಾರೆ ಅವರ ಸಿನಿಮಾಗಳನ್ನು ಸಿನಿಮಾ ಬಗ್ಗೆ ಗೊತ್ತೇ ಇಲ್ಲದವರು, ಅಥವಾ ಒಂದೆರಡು ಸಿನಿಮಾ ಮಾಡಿದವರು ಎಕ್ಸಾಮಿನ್ ಮಾಡುವುದು ಬಾಲಿಶ. ಸಿನಿಮಾವನ್ನು ತಪಸ್ಸಿನಂತೆ ಭಾವಿಸಿ ನಿರ್ದೇಶಿಸುವರಿದ್ದಾರೆ. ಅಂಥಹವರ ಸಿನಿಮಾಗಳನ್ನು ಸಿನಿಮಾ ಅಜ್ಞಾನಿಗಳು ನೋಡಿ ಫಲಿತಾಂಶ ನೀಡುವುದು ಯಾವ ಮಟ್ಟಿಗೂ ಸೂಕ್ತವಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನ್ಯಾಯ ಕೇಳಲು ಟ್ರಿಬ್ಯೂನಲ್ ಸಹ ಇಲ್ಲ

    ನ್ಯಾಯ ಕೇಳಲು ಟ್ರಿಬ್ಯೂನಲ್ ಸಹ ಇಲ್ಲ

    'ಸೆನ್ಸಾರ್‌ ಬೋರ್ಡ್‌ನಿಂದ ಅನ್ಯಾಯವಾಗಿದೆ ಎನಿಸಿದರೆ ನ್ಯಾಯ ಕೇಳಲು ಟ್ರಿಬ್ಯೂನಲ್ ಇತ್ತು ಈಗ ಅದನ್ನೂ ರದ್ದು ಮಾಡಲಾಗಿದೆ. ಈಗ ಸೆನ್ಸಾರ್‌ ಬೋರ್ಡ್‌ಗೆ ಸಿನಿಮಾ ಅಜ್ಞಾನಿಗಳನ್ನು ನೇಮಿಸಲಾಗಿದ್ದು ಇದರಿಂದ ನಿರ್ದೇಶಕ, ನಿರ್ಮಾಪಕನಿಗೆ ಸಮಸ್ಯೆ ದ್ವಿಗುಣವಾಗಿದೆ. ಒಂದೊಮ್ಮೆ ಸೆನ್ಸಾರ್‌ ಬೋರ್ಡ್‌ನಲ್ಲಿ ಅನ್ಯಾಯವಾದರೆ ಆತ ನೇರವಾಗಿ ನ್ಯಾಯಾಲಕ್ಕೆ ಹೋಗಬೇಕಾಗುತ್ತದೆ. ಅಲ್ಲಿ ಪ್ರಕರಣ ಇತ್ಯರ್ಥವಾಗಲು ಎಷ್ಟು ವರ್ಷ ಬೇಕಾಗುತ್ತೆಯೋ ಹೇಳಲಾಗದು' ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಕೃಷ್ಣ.

    Recommended Video

    ಲೀಲಾವತಿ ಕುಟುಂಬ ನನಿಗೆ ಸಹಾಯ ಮಾಡಿದಾರೆ! | Filmibeat Kannada
    ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪರೋಕ್ಷ ದಾಳಿ: ಆಸ್ಕರ್ ಕೃಷ್ಣ

    ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪರೋಕ್ಷ ದಾಳಿ: ಆಸ್ಕರ್ ಕೃಷ್ಣ

    'ಸೆನ್ಸಾರ್‌ ಮಂಡಳಿಯನ್ನು ಹೀಗೆ ಕುಟುಂಬದ ಹಿಡಿತಕ್ಕೆ ಅಥವಾ ಒಂದು ಐಡಿಯಾಲಜಿ ಉಳ್ಳವರ ಹಿಡಿತಕ್ಕೆ ಕೊಡುತ್ತಿರುವುದು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪರೋಕ್ಷ ದಾಳಿ ಎನಿಸುತ್ತಿದೆ. ಈ ಬಗ್ಗೆ ನಾವು ಹೋರಾಟ ಮಾಡಲಿದ್ದೇವೆ. ಈಗಾಗಲೇ ಸುಮಾರು 50 ಮಂದಿ ಸಮಾನ ಮನಸ್ಕರು ಒಟ್ಟಾಗಿದ್ದು ಈಗ ಬಿಡುಗಡೆ ಆಗಿರುವ ಪಟ್ಟಿ ರದ್ದು ಮಾಡುವಂತೆ ಒತ್ತಾಯಿಸಲಿದ್ದೇವೆ' ಎಂದಿದ್ದಾರೆ ಆಸ್ಕರ್ ಕೃಷ್ಣ.

    English summary
    Some Sandalwood film makers oppose to Censor board new members list. Allaged that movie illitrates are in the list.
    Thursday, June 3, 2021, 19:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X