For Quick Alerts
  ALLOW NOTIFICATIONS  
  For Daily Alerts

  ಓ ಮೈ ಗಾಡ್ 'ಬಲ್ಲಾಳದೇವ' ರಾಣಾ ದಗ್ಗುಬಾಟಿಗೆ ಏನಾಯಿತು?

  |

  ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಆರೋಗ್ಯದ ವಿಚಾರವಾಗಿ ಸುದ್ದಿಯೊಂದು ಹರಿದಾಡುತ್ತಿತ್ತು. ಬಲ್ಲಾಳದೇವ ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಲ್ಲದೆ ಅವರಿಗೆ ತಾಯಿಯೆ ಕಿಡ್ನಿ ದಾನ ಮಾಡಿದ್ದಾರೆ ಎನ್ನುವ ಸುದ್ದಿಯೂ ವೈರಲ್ ಆಗಿತ್ತು. ಯು ಎಸ್ ಎಯಲ್ಲಿ ರಾಣಾ ಕಿಡ್ನಿ ಬದಲಾವಣೆ ಮಾಡಿಸಿಕೊಂಡಿದ್ದಾರೆ. ಇಡೀ ಕುಟುಂಬ ಯು ಎಸ್ ಎಗೆ ತೆರಳಿತ್ತು ಎನ್ನುವ ಚರ್ಚೆ ಕಳೆದ ಕೆಲವು ತಿಂಗಳ ಹಿಂದೆ ಜೋರಾಗಿ ನಡೆಯುತ್ತಿದೆ.

  ಕಿಡ್ನಿ ವೈಫಲ್ಯ ರೂಮರ್ಸ್ ಬಗ್ಗೆ ಮೌನ ಮುರಿದ 'ಬಾಹುಬಲಿ' ನಟ ರಾಣಾ ದಗ್ಗುಬಾಟಿಕಿಡ್ನಿ ವೈಫಲ್ಯ ರೂಮರ್ಸ್ ಬಗ್ಗೆ ಮೌನ ಮುರಿದ 'ಬಾಹುಬಲಿ' ನಟ ರಾಣಾ ದಗ್ಗುಬಾಟಿ

  ಆ ನಂತರ ರಾಣಾ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆದ್ರೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಪ್ರತ್ಯಕ್ಷರಾಗುತ್ತಿದ್ದಾರೆ. ಇತ್ತೀಚಿಗೆ ರಾಣಾ ಇನ್ಸ್ಟಾಗ್ರಾಮ್ ನಲ್ಲಿ ಒಂದು ಫೋಟೋವನ್ನು ಫೋಸ್ಟ್ ಮಾಡಿದ್ದಾರೆ. ರಾಣಾನ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.

  ರಾಣಾ ನೋಡಿದ ಅಭಿಮಾನಿಗಳಿಗೆ ಅಚ್ಚರಿ

  ರಾಣಾ ನೋಡಿದ ಅಭಿಮಾನಿಗಳಿಗೆ ಅಚ್ಚರಿ

  ದೇಹ ದಂಡಿಸಿ ಸಿಕ್ಸ್ ಪ್ಯಾಕ್ ಮಾಡಿ ಕಟ್ಟು ಮಸ್ತಾದ ದೇಹದೊಂದಿಗೆ ಮಿಂಚುತ್ತಿದ್ದ ರಾಣಾ ಈಗ ಫುಲ್ ವೀಕ್ ಆಗಿದ್ದಾರೆ. ರಾಣಾ ನೋಡಿದ ಅಭಿಮಾನಿಗಳು ಇದು ಬಾಹುಬಲಿಯ ಬಲ್ಲಾಳದೇವನಾ ಎಂದು ಅಚ್ಚರಿ ಪಡುವಂತೆ ಆಗಿದ್ದಾರೆ. ಪ್ರತಿ ಸಿನಿಮಾದಲ್ಲೂ ಖಡಕ್ ಆಗಿ ಕಾಣಿಸಿಕೊಳ್ಳುತ್ತಿದ್ದ ರಾಣಾ ಸಂಪೂರ್ಣವಾಗಿ ವೀಕ್ ಆಗಿದ್ದಾರೆ.

  ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆ

  ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆ

  ದೈತ್ಯಾಕಾರವಾಗಿದ್ದ ರಾಣಾ ದಿಢೀರನೆ ತೀರಾ ತೆಳ್ಳಗೆ ಆಗಿರುವುದನ್ನು ನೋಡಿ ಬೆರಗಾದ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆ ಹರಿಸುತ್ತಿದ್ದಾರೆ. ಏನಾಗಿದೆ ನಿಮಗೆ, ಆರೋಗ್ಯ ಸರಿ ಇಲ್ಲವಾ, ಕಾಯಿಲೆ ಬಂದವರಹಾಗೆ ಆಗಿದ್ದೀರಾ, ನೀವೆ ಎಷ್ಟೋ ಜನಕ್ಕೆ ಸ್ಫೂರ್ತಿಯಾಗಿದ್ದೀರಿ ಆದ್ರೀಗ ಯಾಕೆ ಹೀಗಾಗಿದ್ದೀರಿ, ಮತ್ತೆ ಹಳೆಯ ರಾಣಾ ನೋಡಲು ಇಷ್ಟಪಡುತ್ತೇವೆ. ಹೀಗೆ ಸಾಕಷ್ಟು ಕಮೆಂಟ್ ಗಳು ಹರಿದುಬರುತ್ತಿವೆ.

  ಬಾಹುಬಲಿ ನಟ ರಾಣಾಗೆ ಕಿಡ್ನಿ ವೈಫಲ್ಯ : ಮಗನಿಗಾಗಿ ಕಿಡ್ನಿ ದಾನ ಮಾಡಿದ ತಾಯಿಬಾಹುಬಲಿ ನಟ ರಾಣಾಗೆ ಕಿಡ್ನಿ ವೈಫಲ್ಯ : ಮಗನಿಗಾಗಿ ಕಿಡ್ನಿ ದಾನ ಮಾಡಿದ ತಾಯಿ

  ಅಭಿಮಾನಿಗಳ ಪ್ರಶ್ನೆಗೆ ನೋ ಕಮೆಂಟ್ಸ್

  ಅಭಿಮಾನಿಗಳ ಪ್ರಶ್ನೆಗೆ ನೋ ಕಮೆಂಟ್ಸ್

  ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದರು ರಾಣಾ ಮಾತ್ರ ಯಾವ ಪ್ರಶ್ನೆಗೂ ಪ್ರತಿಕ್ರಿಯೆ ನೀಡುತ್ತಿಲ್ಲ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪೋಸ್ಟ್ ಗಳನ್ನು ಮಾಡದ ರಾಣಾ, ಈ ಬಾರಿ ಯಾವುದೋ ಜಾಹಿರಾತಿನ ಉದ್ದೇಶದಿಂದ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋ ಅಭಿಮಾನಿಗಳಲ್ಲಿ ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

  ಕಿಡ್ನಿ ವೌಫಲ್ಯದ ಬಗ್ಗೆ ರಾಣಾ ಹೇಳಿದ್ದೇನು?

  ಕಿಡ್ನಿ ವೌಫಲ್ಯದ ಬಗ್ಗೆ ರಾಣಾ ಹೇಳಿದ್ದೇನು?

  ಕಿಡ್ನಿ ವೈಫಲ್ಯ ಮತ್ತು ಕಿಡ್ನಿ ದಾನದ ವಿಚಾರವಾಗಿ ರಾಣಾ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಆಗ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ರಾಣಾ ಫುಲ್ ಗರಂ ಆಗಿದ್ದರು. "ವದಂತಿಗಳನ್ನು ಓದುವುದನ್ನು ಮೊದಲು ನಿಲ್ಲಿಸಿ" ಎಂದು ಹೇಳಿದ್ದರು. ಅಲ್ಲದೆ "ಯಾಕೆ ನೀವು ಇಷ್ಟು ಸಣ್ಣಗೆ ಆಗಿದ್ದೀರಿ" ಎಂದು ಕೇಳಿದ ಪ್ರಶ್ನೆಗೆ ರಾಣಾ "ಯಾವಾಗಲು ದೈತ್ಯಾಕಾರವಾಗಿ ಕಾಣಲು ಸಾಧ್ಯವಿಲ್ಲ" ಎಂದು ಕಾರವಾಗಿಯೆ ಪ್ರತಿಕ್ರಿಯೆ ನೀಡಿದ್ದರು. ಈ ಮೂಲಕ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವುದು ಸುಳ್ಳು ಎಂದು ಹೇಳಿದ್ದರು.

  ರಾಣ ದಗ್ಗುಬಾಟಿ ಸಿನಿಮಾದಿಂದ ಹೊರ ನಡೆಯುವುದಾಗಿ ಬೆದರಿಕೆ ಹಾಕಿದ್ರಾ ಸಾಯಿ ಪಲ್ಲವಿ?ರಾಣ ದಗ್ಗುಬಾಟಿ ಸಿನಿಮಾದಿಂದ ಹೊರ ನಡೆಯುವುದಾಗಿ ಬೆದರಿಕೆ ಹಾಕಿದ್ರಾ ಸಾಯಿ ಪಲ್ಲವಿ?

  ರಾಣಾ ಬಳಿ ಇರುವ ಸಿನಿಮಾಗಳು

  ರಾಣಾ ಬಳಿ ಇರುವ ಸಿನಿಮಾಗಳು

  ರಾಣಾ ತೆಲುಗಿನ 'ವಿರಾಟಪರ್ವಂ' ಸಿನಿಮಾ ಒಪ್ಪಿಕೊಂಡು ಅನೇಕ ದಿನಗಳೆ ಆಗಿವೆ. ಆದ್ರಿನ್ನು ಆ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿಲ್ಲ. ಅಲ್ಲದೆ ಹಿಂದಿಯ 'ಹೌಸ್ ಫುಲ್-4' ಸಿನಿಮಾದಲ್ಲು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಇನ್ನು ಎರಡು ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿ ಇದೆ. 2018ರ ನಂತರ ರಾಣಾ ಸಿನಿಮಾಗಳು ತೆರೆಗೆ ಬಂದಿಲ್ಲ.

  English summary
  Netizanes are shoking and questioned to rana daggubati after saw his weak photo. After a long time Rana Daggubati share a photo in social media

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X