'ಮಾರ್ಟಿನ್' ಅಪ್‌ಡೇಟ್‌ಗಾಗಿ ತನ್ನ ಫೋಟೊ ದುರುಪಯೋಗ, ಡಿಲೀಟ್ ಮಾಡುವಂತೆ ಯುವತಿ ಆಗ್ರಹ
ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ರಿಲೀಸ್ ತಡವಾಗುತ್ತಿದೆ. ಆಕ್ಷನ್ ಪ್ರಿನ್ಸ್ ಸದ್ಯ 'KD' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕು ಮುನ್ನ ಶುರುವಾದ 'ಮಾರ್ಟಿನ್' ಸಿನಿಮಾ ಯಾಕೋ ಸದ್ಯಕ್ಕೆ ಥಿಯೇಟರ್ ಕಡೆ ಮುಖ ಮಾಡುವಂತೆ ಕಾಣುತ್ತಿಲ್ಲ.
ಈಗಾಗಲೇ 'ಮಾರ್ಟಿನ್' ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಎ. ಪಿ ಅರ್ಜುನ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಒದಗಿಸಿದ್ದಾರೆ. ಧ್ರುವ ಸರ್ಜಾ ಮತ್ತೆ ರಗಡ್ ಲುಕ್‌ನಲ್ಲಿ ಅಭಿಮಾನಿಗಳಿಗೆ ಕಿಕ್ ಕೊಡೋಕೆ ಬರ್ತಿದ್ದಾರೆ. ಉದಯ್ ಕೆ. ಮೆಹ್ತಾ ನಿರ್ಮಾಣದ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಗೆ ಬರಲಿದೆ.

ಕಳೆದ ವರ್ಷವೇ 'ಮಾರ್ಟಿನ್' ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಔಟ್ ಅಂಡ್ ಔಟ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಇದು. ಅಂದಾಜು 60 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ ಎನ್ನಲಾಗುತ್ತಿದೆ. ಆದರೆ ಚಿತ್ರತಂಡ ಸೈಲೆಂಟ್ ಆಗಿದ್ದು ಅಭಿಮಾನಿಗಳು ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಇದೀಗ ನೆಟ್ಟಿಗನೊಬ್ಬ 'ಮಾರ್ಟಿನ್' ಅಪ್‌ಡೇಟ್ ಕೊಡುವಂತೆ ಆಗ್ರಹಿಸಿ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ.
ಯುವತಿಯೊಬ್ಬರು 'ಬಂಡೀಪುರ ಉಳಿಸಿ' ಅಭಿಮಾನ ಬೆಂಬಲಿಸಿ ಪೋಸ್ಟ್ ಮಾಡಿರುವ ಫೋಟೊವನ್ನು ಎಡಿಟ್ ಮಾಡಿ ಮಾರ್ಟಿನ್' ಅಪ್‌ಡೇಟ್ ಕೇಳುತ್ತಿರುವಂತೆ ಬಿಂಬಿಸಲಾಗಿದೆ. ಲಕ್ಷ್ಮಿ ನಾರಾಯಣ್ ಎಂಬ ಹೆಸರಿನ ಯುವತಿ 'ಬಂಡೀಪುರ ಉಳಿಸಿ' ಎಂದು ಬರೆದಿರುವ ಪೋಸ್ಟರ್ ಹಿಡಿದು ಪೋಸ್ಟ್ ಮಾಡಿದ್ದರು. ಯಾಕೆ ಬಂಡೀಪುರ ಯಾಕ ವಿಶೇಷ, ಯಾಕೆ ಅದನ್ನು ಉಳಿಸಿಕೊಳ್ಳಬೇಕು ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು.
ಆಕೆ ಹಿಡಿದಿದ್ದ ಫೋಟೊದಲ್ಲಿ ಬಂಡೀಪುರ ಉಳಿಸಿ ಎನ್ನುವುದನ್ನು ಅಳಿಸಿ 'ಮಾರ್ಟಿನ್' ಪೋಸ್ಟರ್ ಎಡಿಟ್ ಮಾಡಲಾಗಿದೆ. ಅದರಲ್ಲಿ ನಮಗೆ 'ಮಾರ್ಟಿನ್' ಅಪ್‌ಡೇಟ್ ಬೇಕು ಎಂದು ಬರೆದು ಯುವತಿಯ ಫೋಟೊವನ್ನು ವೈರಲ್ ಮಾಡಲಾಗಿದೆ. ಆಕೆಯೇ 'ಮಾರ್ಟಿನ್' ಅಪ್‌ಡೇಟ್ ಕೇಳಿ ಪೋಸ್ಟರ್ ಹಿಡಿದು ನಿಂತಂತೆ ಎಡಿಟ್ ಮಾಡಲಾಗಿದೆ. ಈ ಬಗ್ಗೆ ಯುವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟು ಸುಲಭವಾಗಿ ಹೇಗೆ ನನ್ನ ಫೋಟೊ ಎಡಿಟ್ ಮಾಡಿ ನಿಮಗೆ ಬೇಕಾದಂತೆ ಪೋಸ್ಟ್ ಮಾಡಿದ್ದೀರಾ? ಇದು ತಪ್ಪು. ಕೂಡಲೇ ತೆಗೆಯಿರಿ ಎಂದು ಆಗ್ರಹಿಸಿದ್ದಾರೆ.

ಆಕೆಯ ಪೋಸ್ಟ್‌ಗೆ ನೆಟ್ಟಿಗರು ದನಿಗೂಡಿಸಿದ್ದಾರೆ. ಈ ರೀತಿ ಫೋಟೊವನ್ನು ತಪ್ಪಾಗಿ ಬಳಸಿಕೊಳ್ಳಬಾರದು. ಕೂಡಲೇ ತೆಗೆಯಿರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಈ ಪೋಸ್ಟ್ ಅಂತೂ ವೈರಲ್ ಆಗುತ್ತಿದೆ.
ಹೊಸ ವರ್ಷದ ಆರಂಭದಲ್ಲಿ 'ಮಾರ್ಟಿನ್' ಚಿತ್ರದ ಸಣ್ಣ ಅಪ್‌ಡೇಟ್ ಸಿಕ್ಕಿತ್ತು. ಭಾರೀ ಮೊತ್ತಕ್ಕೆ ಸಾರೆಗಾಮ ಸೌತ್ ಸಂಸ್ಥೆ ಚಿತ್ರದ ಆಡಿಯೋ ರೈಟ್ಸ್ ಕೊಂಡುಕೊಂಡಿತ್ತು. 9 ಕೋಟಿ ರೂ.ಗೆ ರೈಟ್ಸ್ ಮಾರಾಟವಾಗಿರುವುದಾಗಿ ಚಿತ್ರತಂಡ ಹೇಳಿತ್ತು. ಇದು ಕನ್ನಡ ಚಿತ್ರರಂಗದಲ್ಲಿ ದಾಖಲೆ ಎನ್ನಲಾಗಿತ್ತು.
ವೈಭವಿ ಶಾಂಡಿಲ್ಯ 'ಮಾರ್ಟಿನ್' ಚಿತ್ರದಲ್ಲಿ ಧ್ರುವ ಸರ್ಜಾಗೆ ಜೋಡಿಯಾಗಿದ್ದಾರೆ. ಇನ್ನುಳಿದಂತೆ ಅನ್ವೇಶಿ ಜೈನ್, ಚಿಕ್ಕಣ್ಣ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ಸಾಧುಕೋಕಿಲ ನಿಕ್ತಿನ್ ಧೀರ್, ನವಾಬ್ ಶಾ, ರೋಹಿತ್ ತಾರಾಗಣದಲ್ಲಿದ್ದಾರೆ. ಸಣ್ಣ ಟೀಸರ್‌ನಿಂದಲೇ ಸಿನಿಮಾ ಹೈಪ್ ಕ್ರಿಯೇಟ್ ಮಾಡಿರುವುದು ಸುಳ್ಳಲ್ಲ. ಧ್ರುವ ಸರ್ಜಾ ನಟನೆಯ ಎಲ್ಲಾ ಸಿನಿಮಾಗಳು ತಡವಾಗಿಯೇ ಚಿತ್ರಮಂದಿರಕ್ಕೆ ಬಂದಿವೆ. ಅದೇ ಸಾಲಿಗೆ 'ಮಾರ್ಟಿನ್' ಸೇರಿಕೊಂಡಂತಾಗಿದೆ.


Click it and Unblock the Notifications











