ದರ್ಶನ್ ಕ್ಷಮೆ ವಿಚಾರ: "ಸಹಿನೂ ನಕಲಿ.. ಪತ್ರನೂ ನಕಲಿ.." ಫ್ಯಾನ್ಸ್ ಪ್ರತಿಕ್ರಿಯೆ ಏನು?

By ಫಿಲ್ಮಿಬೀಟ್ ಡೆಸ್ಕ್

ಕಳೆದ ಕೆಲವು ದಿನಗಳಿಂದ ದರ್ಶನ್ ಹಾಗೂ ಸುದ್ದಿ ಮಾಧ್ಯಮಗಳ ನಡುವಿನ ಭಿನ್ನಾಭಿಪ್ರಾಯ ಗೊತ್ತೇ ಇದೆ. ಇತ್ತೀಚೆಗೆ 'ಕ್ರಾಂತಿ' ಸಿನಿಮಾ ರಿಲೀಸ್ ಆಗುವ ವೇಳೆನೂ ದರ್ಶನ್ ಸುದ್ದಿ ಮಾಧ್ಯಮಕ್ಕೆ ಸಂದರ್ಶನ ನೀಡಿರಲಿಲ್ಲ. ನ್ಯೂಸ್‌ ಚಾನೆಲ್‌ಗಳು ಕೂಡ ಸುದ್ದಿಯನ್ನು ಪ್ರಸಾರ ಮಾಡಿರಲಿಲ್ಲ.

ಮಾಧ್ಯಮಗಳ ಬಗ್ಗೆ ದರ್ಶನ್ ಅವ್ಯಾಚ ಶಬ್ದಗಳನ್ನು ಬಳಸಿ ಟೀಕಿಸಿದ್ದಾರೆ ಎನ್ನಲಾದ ಆಡಿಯೋ ಓಡಾಡಿತ್ತು. ಈ ಆಡಿಯೋ ವೈರಲ್ ಆಗುತ್ತಿದ್ದಂತೆ ವಿದ್ಯುನ್ಮಾನ ಮಾಧ್ಯಮಗಳು ದರ್ಶನ್‌ ಸುದ್ದಿಗಳನ್ನು ಪ್ರಸಾರ ಮಾಡದೆ ಇರುವ ನಿರ್ಧಾರ ತೆಗೆದುಕೊಂಡಿದ್ದರು.

Netizens and fans Reaction on Darshan apology letter to the Kannada News Channel

ಇತ್ತ ದರ್ಶನ್ ಮಾಧ್ಯಮಗಳಿಗೆ ಕ್ಷಮೆ ಕೇಳಲ್ಲ. ಅತ್ತ ಸುದ್ದಿ ಮಾಧ್ಯಮಗಳೂ ಕಾಂಪ್ರಮೈಸ್ ಆಗೋದಿಲ್ಲ ಅನ್ನೋ ವಾತಾವರಣ ಸೃಷ್ಟಿಯಾಗಿತ್ತು. ಇದು 'ಕ್ರಾಂತಿ' ಸಿನಿಮಾ ಬಿಡುಗಡೆಯೇ ಪ್ರತ್ಯಕ್ಷ ಉದಾಹರಣೆ. ಈ ಬೆನ್ನಲ್ಲೇ ದಿಢೀರನೇ ನಿನ್ನೆ (ಏಪ್ರಿಲ್ 24)ಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಧ್ಯಮಗಳಿಗೆ ಕ್ಷಮೆ ಕೋರಿ ಪತ್ರ ಕಳುಹಿಸಿದ್ದಾರೆ ಎನ್ನಲಾದ ಸುದ್ದಿ ಓಡಾಡುತ್ತಿದೆ. ಈ ಪತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹೇಗೆಲ್ಲಾ ಪ್ರತಿಕ್ರಿಯೆ ನೀಡುತ್ತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ದರ್ಶನ್ ಬರೆದ ಪತ್ರದಲ್ಲೇನಿದೆ?

ನಿನ್ನೆ ಸಂಜೆಯಿಂದ (ಏಪ್ರಿಲ್ 24) ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಷಮೆ ಕೋರಿದ್ದಾರೆ ಎನ್ನಲಾದ ಪತ್ರ ಸುದ್ದಿ ಮಾಧ್ಯಮಗಳಿಗೆ ತಲುಪಿದೆ. ದರ್ಶನ್‌ ಕಡೆಯವರು ಈ ಪತ್ರವನ್ನು ತಲುಪಿಸಿದ್ದು, ಅದರಲ್ಲಿ ಕಅಚಾತುರ್ಯದಿಂದ ಮಾತನಾಡಿರುವುದಕ್ಕೆ ವಿಷಾದಿಸುತ್ತೇನೆ ಎಂದು ಬರೆದಿರೋ ಸುದ್ದಿ ಸಂಚಲನ ಸೃಷ್ಟಿಸುತ್ತಿದೆ.

Netizens and fans Reaction on Darshan apology letter to the Kannada News Channel

"ನಿಜ ಜೀವನದಲ್ಲಿ ಸಹ ಯಾವುದೋ ಒಂದು ಗಳಿಗೆಯಲ್ಲಿ ಕೆಲವು ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ-ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ." ಎಂದು ಪತ್ರದ ಕೊನೆಯಲ್ಲಿ ದರ್ಶನ್ ಬರೆದಿದ್ದಾರೆ. ಈ ಪತ್ರದ ಬಗ್ಗೆ ಈಗ ಅವರ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಏನು?

ದರ್ಶನ್ ಬರೆದಿದ್ದಾರೆ ಎನ್ನಲಾದ ಪತ್ರ ಸುದ್ದಿ ಮಾಧ್ಯಮಗಳನ್ನು ತಲುಪುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಯಾಗಿದೆ. ಅಸಲಿಗೆ ಇದು ದರ್ಶನ್ ಬರೆದಿದ್ದಾರೋ ಇಲ್ಲವೋ? ಅನ್ನೋ ಅನುಮಾನಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಬಗ್ಗೆ ದರ್ಶನ್ ಕೂಡ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಇದು ಸ್ವತ: ದರ್ಶನ್ ಅಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿಸಿರೋದು ಸುಳ್ಳಲ್ಲ.

ಇನ್ನೊಂದು ಕಡೆ ನೆಟ್ಟಿಗರು ಕೂಡ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ನಿಜಕ್ಕೂ ದರ್ಶನ್ ಮಾಧ್ಯಮಗಳಿಗೆ ಕ್ಷಮೆಯಾಚಿಸಿದ್ದಾರಾ? ಪತ್ರ ಬರೆದಿರೋದು ನಿಜವೇ? ಇಂತಹದ್ದೇ ಒಂದಿಷ್ಟು ಪ್ರಶ್ನೆ ಮಾಡುತ್ತಿದ್ದಾರೆ. ಒಬ್ಬರು "ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಧ್ಯಮದವರಲ್ಲಿ ಕ್ಷಮೆ ಕೇಳಿರೋದು ನಿಜವೇ ..ನಂಬೋಕೆ ಆಗ್ತಿಲ್ಲ" ಅಂತ ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಸಹಿ ತೋರಿಸಿ ಫೇಕ್ ಎನ್ನುತ್ತಿರೋ ನೆಟ್ಟಿಗರು

ಮೂಲಗಳ ಪ್ರಕಾರ, ದರ್ಶನ್ ಅವರೇ ಎಲ್ಲಾ ಸುದ್ದಿ ಮಾಧ್ಯಮಗಳಿಗೆ ಪತ್ರ ಕಳುಹಿಸಿಕೊಟ್ಟಿದ್ದಾರೆ. ಆದರೆ, ಈ ಸುದ್ದಿ ನಿನ್ನೆ(ಏಪ್ರಿಲ್ 24)ಯಿಂದಲೂ ಕಿಚ್ಚು ಹಚ್ಚುತ್ತಲೇ ಇದೆ. ಇತ್ತ ದರ್ಶನ್ ಕೂಡ ಪತ್ರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿಲ್ಲ. ಹೀಗಾಗಿ ಈ ವಿಷಯವನ್ನು ದರ್ಶನ್ ಅಭಿಮಾನಿಗಳೇ ಒಪ್ಪುತ್ತಿಲ್ಲ.

ಅಭಿಮಾನಿಯೊಬ್ಬರು ದರ್ಶನ್ ಹಳೆಯ ಸಹಿಯನ್ನು ತೋರಿಸಿ, ಈ ಸುದ್ದಿ ಸುಳ್ಳು. ಯಾರು ನಂಬಬೇಡಿ ಅಂತ ಟ್ವೀಟ್ ಮಾಡಿದ್ದಾರೆ. ನಿನ್ನೆ ಕಳುಹಿಸಿದ ದರ್ಶನ್ ಲೆಟರ್ ಹೆಡ್‌ನಲ್ಲಿದ್ದ ಸಹಿಗೂ ಹಳೆ ಸಹಿಗೂ ಹೊಂದಾಣಿಯಾಗುತ್ತಿಲ್ಲ ಎಂದು ಹೋಲಿಕೆ ಮಾಡಿ ಹೇಳುತ್ತಿದ್ದಾರೆ.

More from Filmibeat

English summary
Netizens and fans Reaction on Darshan apology letter to the Kannada News Channel. Fans arguing that letter and signature are fake, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X