'ಮನಸಾರೆ' ಹೊಸ ಹುಡುಗನ ಜೊತೆ ಮಳೆಯಲಿ ಮಿಂದೆದ್ದ ನಿವೇದಿತಾ ಗೌಡ..!

ನಿವೇದಿತಾ ಗೌಡ ಗೊತ್ತಲ್ವಾ..? ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಒಳಗಾಗಲೂ ಏನೇನೂ ಮಾಡಬಾರದೋ ಅದೆಲ್ಲವನ್ನು ಚಾಚು ತಪ್ಪದೇ ಪಾಲಿಸುವ ಚೆಲುವೆ. ನಿತ್ಯ ನಿರಂತರವಾಗಿ ರೀಲ್ಸ್‌ಗಳನ್ನು ಮಾಡುತ್ತಾ ಅನೇಕರ ಕಣ್ಣರಳಿಸಿ ಬಹುತೇಕರ ವಾಲು ಕಳ್ಳತಾ ಕೆಂಗಣ್ಣಿಗೆ ಗುರಿಯಾಗುತ್ತ ಬಂದಿರುವ ನಿವೇದಿತಾ ಗೌಡ ಈಗ ತಮ್ಮ ಬದುಕಿನಲ್ಲಿ ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ. ಬಹು ಭಾಷಾ ನಟಿಯಾಗಿ ಗುರುತಿಸಿಕೊಳ್ಳಬೇಕೆಂಬ ಆಸೆಯಲ್ಲಿ ತೆಲುಗು ಚಿತ್ರರಂಗಕ್ಕೆ ಕೂಡ ಕಾಲಿಟ್ಟಿದ್ದಾರೆ. ಇದರ ಫಲವೇ ವಾಲು ಕಳ್ಳತಾ ಆಲ್ಬಂ.

ಹೌದು. ಕೆಲ ದಿನಗಳ ಹಿಂದೆ ನಿವೇದಿತಾ ಗೌಡ ತೆಲುಗಿನಲ್ಲಿ ವಾಲು ಕಳ್ಳತಾ ಎಂಬ ಆಲ್ಬಂ ಹಾಡೊಂದಕ್ಕೆ ಹೆಜ್ಜೆ ಹಾಕಿರುವ ವಿಚಾರ ಗೊತ್ತಾಗಿತ್ತು. ಖುದ್ದು ನಿವೇದಿತಾ ಗೌಡ ಈ ವಿಚಾರವನ್ನು ಹಂಚಿಕೊಂಡಿದ್ದರು. ವಾಲು ಕಳ್ಳತಾ ಕೇವಲ ತೆಲುಗಿನಲ್ಲಿ ಮಾತ್ರವಲ್ಲ ಕನ್ನಡದಲ್ಲಿ ಕೂಡ ಮನಸಾರೆ ನಿನ್ನ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ ಎಂದು ಹೇಳಿದ್ದರು. ತಮ್ಮ ಈ ಹೊಸ ಪ್ರಯತ್ನದ ಫಸ್ಟ್ ಲುಕ್‌ನ್ನು ಹಂಚಿಕೊಂಡು ಸಂಭ್ರಮ ಪಟ್ಟಿದ್ದರು. ತಾವು ಮಾಡಿರುವ ಈ ಹೊಸ ಪ್ರಯತ್ನಕ್ಕೆ ನಿಮ್ಮ ಆಶೀರ್ವಾದ ಬೇಕೆಂದು ಸಮಸ್ತ ಕನ್ನಡಿಗರಲ್ಲಿ ಕೈ ಮುಗಿದು ಮನವಿಯನ್ನು ಮಾಡಿಕೊಂಡಿದ್ದರು.

Niveditha Gowda New Song Niveditha Gowda Telugu Song Niveditha Gowda s Vaalu Kallatho Vaalu Kalla

ಈಗ ಈ ವಾಲು ಕಳ್ಳುತಾ ಹಾಡು ಬಿಡುಗಡೆಯಾಗಿದೆ. ಸಮಸ್ತ ಚಂದನ್ ಶೆಟ್ಟಿ ಅಭಿಮಾನಿಗಳನ್ನು ಈ ಹಾಡು ಸದ್ಯಕ್ಕೆ ಬೆಚ್ಚಿ ಬೀಳಿಸಿದೆ. ಯಾಕೆಂದರೆ ಈ ಹಾಡಿನಲ್ಲಿ ನಿವೇದಿತಾ ಗೌಡ ಮೈ ಚಳಿ ಬಿಟ್ಟು ಹೆಜ್ಜೆ ಹಾಕಿದ್ದಾರೆ . ಮಳೆಯಲ್ಲಿ ಗೌರಿ ನಾಯ್ಡು ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಹೀಗಾಗಿಯೇ ಕೆರಳಿ ಕೆಂಡವಾಗಿರುವ ಅನೇಕರು ಮತ್ತೊಮ್ಮೆ ನಿವೇದಿತಾ ಗೌಡ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಮತ್ತೊಮ್ಮೆ ಮಗದೊಮ್ಮೆ ಡಿವೋರ್ಸ್ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ. ಈ ಸುಖಕ್ಕೆ ಚಂದನ್ ಶೆಟ್ಟಿಯಿಂದ ದೂರವಾಗಿದ್ದಾ ಎಂದು ಕೆಂಡವನ್ನು ಕಾರುತ್ತಿದ್ದಾರೆ. ಈ ಸುಖಕ್ಕೆ ಡಿವೋರ್ಸ್ ಪಡೆದಿದ್ದಾ ಎಂಬ ಪ್ರಶ್ನೆ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರಂತೆ ಫೇಮಸ್ ಆಗಲು ಇಲ್ಲಿಂದ ತೆಲುಗು ಚಿತ್ರರಂಗಕ್ಕೆ ನಿವೇದಿತಾ ಗೌಡ ಹೋಗಿದ್ದಾರೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ನಿವೇದಿತಾ ಗೌಡ ಅವರನ್ನು ವ್ಯಾಪಕವಾಗಿ ಟ್ರೋಲ್ ಕೂಡ ಮಾಡುತ್ತಿದ್ದಾರೆ.

ಅಂದ್ಹಾಗೇ ತೆಲುಗಿನಲ್ಲಿ ನಟನಾಗಿ, ಬರಹಗಾರನಾಗಿ, ಸಂಕಲನಕಾರನಾಗಿ ಇಷ್ಟೇ ಅಲ್ಲದೇ ಛಾಯಾಗ್ರಾಹಕರಾಗಿ ಕೂಡ ಗುರುತಿಸಿಕೊಂಡಿರುವ ಗೌರಿ ನಾಯ್ಡು ಇಲ್ಲಿ ನಿವೇದಿತಾ ಗೌಡ ಅವರ ಜೊತೆ ಇಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ. ಇನ್ನುಳಿದಂತೆ ನಿವೇದಿತಾ ಗೌಡ 'ವಾಲು ಕಳ್ಳತಾ' ಹಾಡಿನ ಮೂಲಕ ತೆಲುಗು ಚಿತ್ರರಂಗದ ಬಾಗಿಲನ್ನು ಬಡೆದಿದ್ದಾರೆ. ತಮ್ಮ ಈ ಬೋಲ್ಡ್ ನಡೆಯಿಂದ ಅಲ್ಲಿನವರ ಗಮನವನ್ನು ಕೂಡ ಸೆಳೆದಿದ್ದಾರೆ. ಗೊತ್ತಿಲ್ಲ.. ಮುಂದೊಂದು ದಿನ ತೆಲುಗು ಚಿತ್ರರಂಗ ಇವರಿಗೆ ರತ್ನಗಂಬಳಿಯನ್ನು ಹಾಕಿ ಸ್ವಾಗತ ಮಾಡಿದರು ಮಾಡಬಹುದು. ನಿವೇದಿತಾ ಗೌಡ ತೆಲುಗು ಚಿತ್ರರಂಗದಲ್ಲಿಯೇ ಬಿಡಾರ ಹೂಡಿದರು ಹೂಡಬಹುದು.

ಸಂದೀಪ್ ಸನ್ನು ಸಂಗೀತವನ್ನು ನೀಡಿ ಈ ಹಾಡನ್ನು ಹಾಡಿದ್ದಾರೆ. ಅಶೋಕ್ ಈ ಆಲ್ಬಂ ಹಾಡನ್ನು ನಿರ್ದೇಶಿಸಿದ್ದಾರೆ. ತೆಲುಗುದಲ್ಲಿ ಸ್ರಾವಣಿ ಈ ಹಾಡಿಗೆ ಪದಗಳನ್ನು ಪೋಣಿಸಿದ್ದರೆ ಸಿದ್ದು, ಅಖಿಲ್, ಶ್ರೀಲೇಖಾ ಈ ಹಾಡಿಗೆ ನೃತ್ಯವನ್ನು ಸಂಯೋಜಿಸಿದ್ದಾರೆ. ಸದ್ಯಕ್ಕೆ ಹಾಡು ಬಿಡುಗಡೆಯಾಗಿ 24 ಘಂಟೆಯಲ್ಲಿ 20.000 ಕ್ಕೂ ಅಧಿಕ ವೀಕ್ಷಣೆಯನ್ನು ಈ ಹಾಡು ಪಡೆದಿದೆ.

ಈ ಆಡಿಯೋ ಆಲ್ಬಂ ಹೊರತು ಪಡಿಸಿದರೆ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅಭಿನಯದ ಮುದ್ದು ರಾಕ್ಷಸಿ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರವನ್ನು ಪುನೀತ್ ಶ್ರೀನಿವಾಸ್ ಕಥೆ ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ.ಮೋಹನ್ ಕುಮಾರ್ ಈ ಮುದ್ದು ರಾಕ್ಷಸಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೂ ಸೈಕೋ ಥ್ರಿಲ್ಲರ್ ಕಥಾಹಂದರ ಈ ಚಿತ್ರದ ಚಿತ್ರೀಕರಣ ಬಹುತೇಕ ಬೆಂಗಳೂರಿನಲ್ಲಿಯೇ ನಡೆದಿದೆ. ಎಂ ಎಸ್ ತ್ಯಾಗರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎ ಕರುಣಾಕರ್ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. ಈ ವರ್ಷಾಂತ್ಯದಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ...!

More from Filmibeat

Read more about: niveditha gowda song sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X