For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಸಂಕಷ್ಟದಲ್ಲಿ ರಾಜ್ಯ: ರಮ್ಯಾ ಈಗ ಎಲ್ಲಿದ್ದಾರೆ?

  |

  ಕೊರೊನಾ ಇಡೀಯ ವಿಶ್ವವನ್ನೇ ತಲ್ಲಣಗೊಳಿಸಿಬಿಟ್ಟಿದೆ. ಕರ್ನಾಕಟವು ಕೊರೊನಾದಿಂದ ತಲ್ಲಣಿಸಿದೆ. ಸಂಕಷ್ಟ ಸಮಯದಲ್ಲಿ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

  ಒಡಿಸ್ಸಿ ನೃತ್ಯ ಮಾಡಿದ ಸಾರಾ ಅಲಿ ಖಾನ್ ವಿಡಿಯೋ ವೈರಲ್ | Sara Ali Khan | Filmibeat Kannada

  ಕನ್ನಡದ ಹಲವು ಪ್ರಮುಖ ಸ್ಟಾರ್‌ಗಳು ಕೊರೊನಾ ಸಮಯದಲ್ಲಿ ತಮ್ಮ ನೆರವಿನ ಹಸ್ತ ಚಾಚಿದ್ದಾರೆ. ಬಾಲಿವುಡ್‌ನಲ್ಲಿ ಸಹ ಸ್ಟಾರ್‌ಗಳು ಕೋಟ್ಯಂತರ ಹಣವನ್ನು ಕೊರೊನಾ ವಿರುದ್ಧ ಹೋರಾಟಕ್ಕೆ ದೇಣಿಗೆ ನೀಡಿದ್ದಾರೆ.

  ಆದರೆ ಕೆಲವರು ಮಾತ್ರ ಕೊರೊನಾ ಸಂಕಷ್ಟದ ಸಮಯದಲ್ಲಿ ಅಡ್ರಸ್ಸಿಗೇ ಇಲ್ಲ. ಅಂಥಹವರಲ್ಲಿ ನಟಿ, ರಾಜಕಾರಣಿ ರಮ್ಯಾ ಸಹ ಒಬ್ಬರು. ರಮ್ಯಾ ಅವರನ್ನು ಅವರ ಅಭಿಮಾನಿಗಳು, ವಿರೋಧಿಗಳು ಇಬ್ಬರೂ ಸಹ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ.

  'ಎಲ್ಲಿದ್ದೀಯ ರಮ್ಯಾ' ಪೋಸ್ಟ್‌ಗಳು ಹರಿದಾಡುತ್ತಿವೆ

  'ಎಲ್ಲಿದ್ದೀಯ ರಮ್ಯಾ' ಪೋಸ್ಟ್‌ಗಳು ಹರಿದಾಡುತ್ತಿವೆ

  ಚುನಾವಣೆ ಸಮಯದಲ್ಲಿ ಮಾತ್ರವೇ ಕಾಣಸಿಗುವ ರಮ್ಯಾ ಅವರು ರಾಜ್ಯವು ಕೊರೊನಾ ದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಈ ಸಮಯದಲ್ಲಿ ಅವರು ಒಂದು ಸಂದೇಶವನ್ನು ಸಹ ನೀಡಿಲ್ಲ, 'ರಮ್ಯಾ ಎಲ್ಲಿದ್ದಾರೆ' ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ರಾಜಕಾರಣಿಯೂ ಆಗಿರುವ ರಮ್ಯಾ

  ರಾಜಕಾರಣಿಯೂ ಆಗಿರುವ ರಮ್ಯಾ

  ನಟಿ ಆಗಿರುವ ಜೊತೆಗೆ ರಾಜಕಾರಣಿಯೂ ಆಗಿರುವ, ಮಾಜಿ ಸಂಸದೆಯೂ ಆಗಿರುವ ರಮ್ಯಾ ಅವರು ಸಂಕಷ್ಟದ ಈ ಸಂದರ್ಭದಲ್ಲಿ ಜನರಿಗೆ ತಮ್ಮ ಕೈಲಾದ ಮಟ್ಟಿಗೆ ಜಾಗೃತೆಯನ್ನು ಮೂಡಿಸುವ ಕಾರ್ಯವನ್ನಾದರೂ ಮಾಡಬಹುದಾಗಿತ್ತು ಎಂಬುದು ನೆಟ್ಟಿಜನರ ವಾದ.

  ಟ್ವಿಟ್ಟರ್ ಖಾತೆಯನ್ನೂ ಡಿಲೀಟ್ ಮಾಡಿದ್ದಾರೆ

  ಟ್ವಿಟ್ಟರ್ ಖಾತೆಯನ್ನೂ ಡಿಲೀಟ್ ಮಾಡಿದ್ದಾರೆ

  ದಿವ್ಯಾ ಸ್ಪಂದನ ಅಲಿಯಾಸ್ ರಮ್ಯಾ ಅವರು ತಮ್ಮ ಟ್ವಿಟ್ಟರ್ ಖಾತೆಯನ್ನು ಕಳೆದ ವರ್ಷ ಜೂನ್ ತಿಂಗಳ ಸಮಯದಲ್ಲಿ ಡಿಲೀಟ್ ಮಾಡಿದ್ದಾರೆ. ಅಂದಿನಿಂದ ಸಾಮಾಜಿಕ ಜಾಲತಾಣದಲ್ಲಿಯೂ ಸಹ ಅವರು ಸಕ್ರಿಯರಾಗಿಲ್ಲ.

  ರಾಜಕೀಯದಿಂದಲೂ ದೂರಾಗಿದ್ದಾರೆ ರಮ್ಯಾ

  ರಾಜಕೀಯದಿಂದಲೂ ದೂರಾಗಿದ್ದಾರೆ ರಮ್ಯಾ

  ಕಾಂಗ್ರೆಸ್‌ ನ ಸಾಮಾಜಿಕ ಜಾಲತಾಣ ಮುಖ್ಯಸ್ಥ ಸ್ಥಾನವನ್ನೂ ರಮ್ಯಾ ತ್ಯಜಿಸಿದ್ದಾರೆ ಎನ್ನಲಾಗಿದ್ದು, ರಾಜಕೀಯದಿಂದಲೂ ದೂರವೇ ಉಳಿದಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗದೇ ಇದ್ದುದಕ್ಕೆ ಅವರು ಕಾಂಗ್ರೆಸ್ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಾಗುತ್ತಿದೆ.

  ರಂಗಭೂಮಿ ಕಲಾವಿದೆಗೆ ಸಹಾಯ ಮಾಡಿದ ರಮ್ಯಾ ತಾಯಿ

  ರಂಗಭೂಮಿ ಕಲಾವಿದೆಗೆ ಸಹಾಯ ಮಾಡಿದ ರಮ್ಯಾ ತಾಯಿ

  ಕೆಲವೇ ದಿನಗಳ ಹಿಂದೆ ರಮ್ಯಾ ಅವರ ತಾಯಿ ರಂಜಿತಾ ಅವರು ಇತ್ತೀಚೆಗಷ್ಟೆ ರಂಗಭೂಮಿ ಕಲಾವಿದರಿಗೆ ಸಹಾಯ ಮಾಡಿದ್ದರು. ರಂಗಭೂಮಿ ಕಲಾವಿದೆ ಆಶಾರಾಣಿ ಅವರಿಗೆ 50,000 ಚೆಕ್ ಅನ್ನು ಅವರು ನೀಡಿದ್ದರು.

  English summary
  Netizens asking where is actor, politician Ramya when Karnataka facing problems due to coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X