ದರ್ಶನ್ ಸಿನಿಮಾ ನೋಡಿ 'ಪುಷ್ಪ'- 2 ಆಕ್ಷನ್ ಸೀನ್ ಕಾಪಿ ಮಾಡಿದ್ದಾರಾ?

ಸುಕುಮಾರ್ ನಿರ್ದೇಶದನದ 'ಪುಷ್ಪ'-2 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಎಲ್ಲರ ಹುಬ್ಬೇರಿಸಿದೆ. ಅಲ್ಲು ಅರ್ಜುನ್ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ. ವೀಕೆಂಡ್‌ನಲ್ಲಿ ಸಿನಿಮಾ ಗಳಿಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಕಾದು ನೋಡಬೇಕಿದೆ.

'ಪುಷ್ಪ'-2 ಚಿತ್ರದಲ್ಲಿ ಸರಿಯಾದ ಕತೆಯೇ ಇಲ್ಲ, ಬರೀ ಎಲಿವೇಷನ್ ಸೀನ್ಸ್ ಸೇರಿಸಿ ಸಿನಿಮಾ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಕೆಲವರು ಚಿತ್ರವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಆದರೂ ಜನ ಸಿನಿಮಾ ನೋಡಲು ಹಾತೊರೆಯುತ್ತಿದ್ದಾರೆ. ಮತ್ತೊಂದು ಕಡೆ ಟಿಕೆಟ್ ದರ ಹೆಚ್ಚಿಸಿ ಭರ್ಜರಿ ಕಲೆಕ್ಷನ್ ಮಾಡಲಾಗುತ್ತಿದೆ.

Netizens claim Allu Arjun s Pushpa-2 climax fight scene copied from Darshan movie

ಈಗಾಗಲೇ 'ಪುಷ್ಪ'-2 ಚಿತ್ರದ ಥಿಯೇಟರ್ ಪ್ರಿಂಟ್ ಲೀಕ್ ಆಗಿ ವೈರಲ್ ಆಗುತ್ತಿದೆ. ಚಿತ್ರದಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಇದೆ. ಆರಂಭದಲ್ಲಿ ಜಪಾನ್‌ ಬಂದರಿನಲ್ಲಿ ಒಂದು ಆಕ್ಷನ್ ಎಪಿಸೋಡ್ ಇದೆ. ಗಂಗಮ್ಮ ಜಾತ್ರೆ ಸಮಯದಲ್ಲಿ ಮತ್ತೊಂದು ಜಬರ್ದಸ್ತ್ ಆಕ್ಷನ್ ಸನ್ನಿವೇಶ ಇದೆ. ಇದೆಲ್ಲದರ ಜೊತೆಗೆ ಕ್ಲೈಮ್ಯಾಕ್ಸ್ ಫೈಟ್ ಬಗ್ಗೆ ಭಾರೀ ಚರ್ಚೆ ನಡೀತಿದೆ.

ಚಿತ್ರದಲ್ಲಿ ಪುಷ್ಪರಾಜ್ ಪಾತ್ರಕ್ಕೆ ಬಹಳ ಬಿಲ್ಡಪ್ ಇದೆ. ಆತನ ಮ್ಯಾನರಿಂಸಂ, ಸ್ಟೈಲ್, ಸ್ವ್ಯಾಗ್, ಡೈಲಾಗ್ ಡೆಲಿವರಿ ಎಲ್ಲರೂ ಮೊದಲ ಚಿತ್ರಕ್ಕಿಂತ ಹೆಚ್ಚೇಯಿದೆ. ಅದೇ ರೀತಿ ಆಕ್ಷನ್ ಸನ್ನಿವೇಶಗಳನ್ನು ಕೂಡ ಪ್ರೀಕ್ವೆಲ್‌ಗಿಂತ ರಂಜನೀಯವಾಗಿ ಕಟ್ಟಿಕೊಟ್ಟಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ತಂಗಿಗೆ ಕಾಟ ಕೊಟ್ಟವರನ್ನು ಪುಷ್ಪರಾಜ್ ಹೊಡೆದು ಸಾಯಿಸುತ್ತಾನೆ. ಆಗ ಖಡಕ್ ಆಕ್ಷನ್ ಸನ್ನಿವೇಶ ನೋಡಬಹುದು. ಆದರೆ ಇದು ದರ್ಶನ್ ನಟನೆಯ 'ಕಾಟೇರ' ಚಿತ್ರದಿಂದ ಕಾಪಿ ಮಾಡಿರೋದು ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.

ದರ್ಶನ್ ಅಭಿನಯದ 'ಕಾಟೇರ' ಸಿನಿಮಾ ಕಳೆದ ವರ್ಷ ಕೊನೆಗೆ ತೆರೆಗೆ ಬಂದು ಗೆದ್ದಿತ್ತು. ಬಾಕ್ಸಾಫೀಸ್ ಶೇಕ್ ಮಾಡಿ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಚಿತ್ರದಲ್ಲಿ ಭರ್ಜರಿ ಆಕ್ಷನ್ ಸನ್ನಿವೇಶಗಳಿದ್ದವು. ಅದರಲ್ಲಿ ಆರಂಭದಲ್ಲಿ ಬರುವ ಫೈಟ್ ಹೈಲೆಟ್ ಆಗಿತ್ತು. ಕಾಟೇರನ ಎರಡೂ ಕೈಗಳನ್ನು ಹಿಂದಕ್ಕೆ ಕೋಳ ಹಾಕಿ ಬಂಧಿಸಲಾಗಿರುತ್ತದೆ. ಕೈಗಳನ್ನು ಬಳಸದೇ ಮಾಡುವ ಫೈಟ್ ಅದು.

Netizens claim Allu Arjun s Pushpa-2 climax fight scene copied from Darshan movie

'ಪುಷ್ಪ'-2 ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಕೂಡ ಪುಷ್ಪರಾಜ್ ಕೈಗಳನ್ನು ಹಿಂದಕ್ಕೆ ಕಟ್ಟಿರುತ್ತಾರೆ. ಕಾಲುಗಳನ್ನು ಕೂಡ ಕಟ್ಟಿರುತ್ತಾರೆ. ಆದರೂ ಎಲ್ಲರನ್ನು ಹೊಡೆದು ಮಟ್ಟಹಾಕಿ ತಂಗಿಯನ್ನು ಕಾಪಾಡಿಕೊಳ್ಳುತ್ತಾನೆ. ಅದರ ಸ್ಟೈಲ್ ಹಾಗೂ ಕೆಲ ಫ್ರೇಮ್‌ಗಳು 'ಕಾಟೇರ' ಚಿತ್ರದ ಫೈಟ್ ಅನ್ನು ನೆನೆಪಿಸುತ್ತಿದೆ ಎಂದು ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.

ಕನ್ನಡದ 'ಕೆಜಿಎಫ್-2' ಹಾಗೂ 'ಕಾಂತಾರ' ಚಿತ್ರಗಳನ್ನು ಮಿಕ್ಸ್ ಮಾಡಿ 'ಪುಷ್ಪ'- 2 ಸಿನಿಮಾ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಹಾಕುತ್ತಿದ್ದಾರೆ. ಯಾವುದೇ ಸಿನಿಮಾ ಬಂದರೂ ಇಂತಹ ಹೋಲಿಕೆಗಳು ಸರ್ವೇ ಸಾಧಾರಣ. ಸದ್ಯ 'ಪುಷ್ಪ'-2 ಕ್ಲೈಮ್ಯಾಕ್ಸ್ ಫೈಟ್ ಕಾಪಿ ಎನ್ನುವುದನ್ನು ಅಲ್ಲು ಅರ್ಜುನ್ ಫ್ಯಾನ್ಸ್ ಒಪ್ಪಲು ಸಿದ್ಧರಿಲ್ಲ. ಯಾಕಂದ್ರೆ 'ಪುಷ್ಪ'-1 ಚಿತ್ರದಲ್ಲೂ ಹೆಚ್ಚು ಕಮ್ಮಿ ಇಂಥದ್ದೇ ಫೈಟ್ ಇತ್ತು. ಅದನ್ನು ನೋಡಿ 'ಕಾಟೇರ'ದಲ್ಲಿ ಕಾಪಿ ಮಾಡಿದ್ದರು ಎಂದು ತಿರುಗೇಟು ನೀಡುತ್ತಿದ್ದಾರೆ.

ಅಂದಹಾಗೆ ಸ್ಟಂಟ್ ಡೈರೆಕ್ಟರ್ ಮೈಬಂ ನಬಕಾಂತ 'ಪುಷ್ಪ'-2 ಚಿತ್ರದ ಕ್ಲೈಮ್ಯಾಕ್ಸ್ ಫೈಟ್ ಡಿಸೈನ್ ಮಾಡಿದ್ದಾರೆ. ಭಾರೀ ಸೆಟ್‌ನಲ್ಲಿ ಆಕ್ಷನ್ ಸೀಕ್ವೆನ್ಸ್ ಸೆರೆಹಿಡಿಯಲಾಗಿದೆ. ಚಿತ್ರದ ಈಗಾಗಲೇ 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಶೀಘ್ರದಲ್ಲೇ 1000 ಕೋಟಿ ರೂ. ಗಡಿ ದಾಟುವ ಲೆಕ್ಕಾಚಾರ ಶುರುವಾಗಿದೆ.

More from Filmibeat

English summary
Netizens troll Pushpa-2 fight, say copied from kannada movie
Read more about: pushpa darshan kaatera
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X