Raya vs Rumi: ತಂದೆ- ಮಗನ ನಡುವೆ ಯುದ್ಧಾನಾ? ಅರೇ, ಯಶ್ 'ಟಾಕ್ಸಿಕ್' ಸಿನಿಮಾ ಕಥೆ ಇದೇನಾ?

'ಟಾಕ್ಸಿಕ್' ಟೀಸರ್ ಸಂಚಲನ ಸೃಷ್ಟಿಸಿದೆ. ಪ್ರತಿಫ್ರೇಮ್ ಬಗ್ಗೆ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ. ರಾಯನಾಗಿ ಯಶ್ ಅರ್ಭಟಕ್ಕೆ ಫಿದಾ ಆಗಿದ್ದಾರೆ. ಅದ್ಧೂರಿ ಮೇಕಿಂಗ್, ಅದ್ಭುತ ಛಾಯಾಗ್ರಹಣ, ಜಬರ್ದಸ್ತ್‌ ಬಿಜಿಎಂ, ಯಶ್ ಪವರ್‌ಫುಲ್ ಪರ್ಫಾರ್ಮೆನ್ಸ್ ಹೈಲೆಟ್ ಆಗಿದೆ. ಹೊಸ ಟೀಸರ್‌ನಲ್ಲಿ ಕೂಡ ಬೇರೆ ಪಾತ್ರಗಳನ್ನು ಪರಿಚಯಿಸದೇ ಇರುವುದು ಕೆಲವರು ಬೇಸರಕ್ಕೆ ಕಾರಣವಾಗಿದೆ.

ಮೊದಲ ನೋಟದಲ್ಲೇ 'ಟಾಕ್ಸಿಕ್' ಟೀಸರ್ ಹಿಟ್ ಆಗಿದೆ. ಯಶ್ ಅಂಡ್ ಟೀಂ ಹೊಸದಾಗಿ ಏನೋ ಹೇಳಲು ಬರ್ತಿದ್ದಾರೆ. ಅದಕ್ಕೆ ಅದ್ಭುತ ತಂತ್ರಜ್ಞರ ಬಲ ಸಿಕ್ಕಿದೆ. ಮಾರ್ಚ್ 19ಕ್ಕೆ ಬಾಕ್ಸಾಫೀಸ್ ಶೇಕ್ ಆಗುವ ಸುಳಿವು ಸಿಕ್ಕಿದೆ. ಈವರೆಗೆ ಸಿನಿಮಾ ಕಥೆ ಬಗ್ಗೆ ಹೆಚ್ಚಿನ ಸುಳಿವು ಸಿಕ್ಕಿರಲಿಲ್ಲ. ಆದರೆ ಟೀಸರ್ ನೋಡಿದ ಮೇಲೆ ಕೆಲವರು ಕಥೆಯನ್ಮು ಊಹಿಸಲು ಆರಂಭಿಸಿದ್ದಾರೆ.

Netizens Decode Yash s Toxic Teaser Father-Son Faceoff Angle Trends Online

ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ದ್ವಿಪಾತ್ರದಲ್ಲಿ ತಂದೆ, ಮಗನಾಗಿ ನಟಿಸಿದ್ದಾರೆ ಎನ್ನುವುದು ಸಾಕಷ್ಟು ಜನರ ಲೆಕ್ಕಾಚಾರ. ತಂದೆ ರಾಯ ಹಾಗೂ ಮಗ ರೂಮಿ ಎನ್ನುವ ಪಾತ್ರಗಳಲ್ಲಿ ಪ್ರೇಕ್ಷಕರಿಗೆ ಥ್ರಿಲ್ ಕೊಡುವ ಸಾಧ್ಯತೆ ದಟ್ಟವಾಗಿದೆ ಎಂದು ಭಾವಿಸಿದ್ದಾರೆ. ಉದ್ದನೆಯ ಕೂದಲು, ಗಡ್ಡ ಬಿಟ್ಟು ಖಡಕ್ ಲುಕ್‌ನಲ್ಲಿ ರಾಯ ಆಗಿ ಯಶ್ ಕಾಣಿಸಿಕೊಂಡಿದ್ದಾರೆ. ಆದರೆ ಟೀಸರ್ ಕೊನೆಯಲ್ಲಿ ಕ್ಲೀನ್ ಶೇವ್, ಶಾಟ್ ಹೇರ್‌ಸ್ಟೈಲ್‌ನಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್ ಹಾಗೂ ಅಷ್ಟೇ ವೈಲೆಂಟ್ ಆಗಿ ಮತ್ತೊಮ್ಮೆ ದರ್ಶನ ಕೊಟ್ಟು ಹುಬ್ಬೇರಿಸಿದ್ದಾರೆ.

ಚಿತ್ರದಲ್ಲಿ ರಾಯ ಆಗಿ ಮಾತ್ರ ಯಶ್ ನಟಿಸಿದ್ದಾರೆ ಎನ್ನುವುದು ಮತ್ತೆ ಕೆಲವರ ಊಹೆ. ಟೀಸರ್ ಕೊನೆಯಲ್ಲಿ ಇರುವುದು ರಾಯನ ಯಂಗ್ ಲುಕ್ ಇರಬಹುದು ಎನ್ನುವುದು ಅವರ ವಾದ. ಆದರೆ ಟೀಸರ್‌ನಲ್ಲಿರುವ ಡೈಲಾಗ್ ಕೂಡ ಇದು ತಂದೆ ಮಗನ ಕಥೆ ಎನ್ನುವುದನ್ನು ಸಾರಿ ಹೇಳುವಂತಿದೆ. 50-60ರ ಕಾಲಘಟ್ಟದ ಕಥೆ ಚಿತ್ರದಲ್ಲಿದೆ. ಚಿತ್ರದ ಸ್ಯಾಂಪಲ್‌ಗಳು ಅದಕ್ಕೆ ಪುಷ್ಟಿ ನೀಡುತ್ತಿವೆ. ಇನ್ನು ಗೋವಾಗದ ಕಡಲ ಕಿನಾರೆಯ ಸ್ಲಗ್ಲಿಂಗ್ ಲೋಕದ ಗ್ಯಾಂಗ್‌ಸ್ಟರ್ ಕಥೆ ಚಿತ್ರದಲ್ಲಿರುವಂತೆ ಕಾಣ್ತಿದೆ. ಆ ಕತ್ತಲ ಸಾಮ್ರಾಜ್ಯದಲ್ಲಿ ರಕ್ತಪಾತ ನಡೆಸುತ್ತಾ ಮೇಲೇರುವ ರಾಯನ ಕಥೆ ಚಿತ್ರದಲ್ಲಿದೆ ಎನ್ನಲಾಗ್ತಿದೆ.

Netizens Decode Yash s Toxic Teaser Father-Son Faceoff Angle Trends Online

ಅಧಿಕಾರವನ್ನು ಕೈವಶ ಮಾಡಿಕೊಂಡ ರಾಯ ಮುಂದೆ ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾನೆ ಎನ್ನುವುದನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿರುವ ಸಾಧ್ಯತೆಯಿದೆ. ಹೀಗೆ ಮೇಲೇರಿದವನು ಕೆಳಗಿಳಿಯಲೇಬೇಕು, ಅದಕ್ಕೆ ಮಗ ರೂಮಿ ಕಾರಣವಾಗುತ್ತಾನಾ? ತಂದೆ- ಮಗನ ನಡುವೆಯೇ ಕದನ ಶುರುವಾಗುತ್ತಾ? ಅದೇ ಸಿನಿಮಾ ಕಥೆ ತಿರುಳಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ರಾಯನ ಪಾತ್ರ ಪರಿಚಯದ ಟೀಸರ್‌ನಲ್ಲಿ 'ಡ್ಯಾಡಿ ಈಸ್ ಹೋಮ್' ಎನ್ನುವ ಡೈಲಾಗ್ ಇತ್ತು. ಅಂದರೆ ರಾಯ ಮರಳಿ ಬಂದಿದ್ದೀನಿ ಎಂದು ಸವಾಲು ಹಾಕುವ ಸನ್ನಿವೇಶ. ಆದರೆ ಹೊಸ ಟೀಸರ್‌ ಕೊನೆಯಲ್ಲಿ ಅಬ್ಬರಿಸಿರುವ ಯಶ್ 'ಐಹ್ಯಾಮ್ ಹೋಮ್' ಎನ್ನುವುದನ್ನು ನೋಡಬಹುದು.

"ಈ ಸಲ ಯುದ್ಧನೇ ಬೇರೆ" ಅಂದರೆ ಯಾರೊಟ್ಟಿಗೆ ಯುದ್ಧ? "ಅವರುಗಳ ಕುತಂತ್ರನೇ ಬೇರೆ" ಅಂದರೆ ರಾಯನ ವಿರುದ್ಧ ಯಾರು ಯಾವ ತರಹದ ಕುತಂತ್ರ ಮಾಡಿದ್ದಾರೆ? "ಎಲ್ಲರನ್ನು ಎದುರಾಕಿಕೊಂಡು ಬದುಕೋಕೆ ಆಗಲ್ಲ" ಹಾಗಿದ್ದರೆ ರಾಯ ಯಾರನ್ನು ಎದುರು ಹಾಕಿಕೊಂಡಿದ್ದಾನೆ? "ಹಠ ಬಿಟ್ಟುಬಿಡು, ಬಿಟ್ಟುಕೊಟ್ಟುಬಿಡು ರಾಯ" ಅಂದರೆ ಯಾಕೆ, ಯಾರಿಗಾಗಿ ಬಿಟ್ಟುಕೊಡಬೇಕು? ಹೀಗೆ ಡೈಲಾಗ್ ಸಾಕಷ್ಟು ಕುತೂಹಲ ಮೂಡಿಸುತ್ತದೆ. ತಂದೆ- ಮಗನ ಮಾರಾಮಾರಿ, ಅವರಿಬ್ಬರ ಭಾವೋದ್ವೇಗವೇ ಚಿತ್ರದ ಹೈಲೆಟ್ ಎನ್ನುವಂತೆ ಕಾಣ್ತಿದೆ.

ಟೀಸರ್ ಕೊನೆಗೆ ಹೊಸ ನಟನನ್ನು ಪರಿಚಯಿಸಿದ್ದಾರೆ ಎನ್ನುವ ಅನುಮಾನ ಮೂಡುವಂತೆ ಯಶ್ ಲುಕ್ ತೋರಿಸುತ್ತಾ ಬಂದು ಕೊನೆಗೆ ಮುಖ ರಿವೀಲ್ ಮಾಡಿ ಶಾಕ್ ಕೊಟ್ಟಿದ್ದಾರೆ. ಸದಾ ಗಡ್ಡ, ಲಾಂಗ್ ಹೇರ್‌ಸ್ಟೈಲ್‌ನಲ್ಲಿ ಮಿಂಚುತ್ತಿದ್ದ ಯಶ್ ಹೀಗೆ ಕ್ಲೀನ್‌ಶೇವ್‌ ಗೆಟಪ್ ಯಾವಾಗ ಹಾಕಿದ್ರಪ್ಪ ಎನ್ನುವ ಕುತೂಹಲ ಮೂಡಿಸಿದೆ. ಇನ್ನು ರಾಯಲ್ ಸರ್ಕಸ್ ಕಥೆಯೇನು? ರಾಯನ ಮೈಮೇಲಿರುವ ಟ್ಯಾಟೂಗಳ ಅರ್ಥ ಏನು? ಎಂದು ಹುಡುಕಲು ಆರಂಭಿಸಿದ್ದಾರೆ. ಹಾಲಿವುಡ್ 'ಪೀಕಿ ಬ್ಲೈಂಡರ್ಸ್‌' ವೆಬ್ ಸೀರಿಸ್‌ನಿಂದ ಪ್ರೇರಣೆಗೊಂಡು ಸ್ಟೈಲಿಶ್ ಆಗಿ ಸಿನಿಮಾ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ವೈಲೆನ್ಸ್ ಕೂಡ ಕೊಂಚ ಜಾಸ್ತಿನೇ ಇದೆ.

More from Filmibeat

Read more about: yash toxic rukmini vasanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X