ಮನಸಿನೊಳಗೆ ಕಿರುಚಾಡುತ್ತಿದ್ದೇನೆ, ಡಾಲಿ ಧನಂಜಯ್ ಮದುವೆ ಬೆನ್ನಲ್ಲೇ ಅಮೃತಾ ಐಯ್ಯಂಗಾರ್ ಮಾತು..!
ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಎಂದು ಕೆಲವೊಮ್ಮೆ ಅನಿಸಿದಂತೆ ಪ್ರೀತಿಯಿಂದ ನೋವನ್ನು ಕೂಡ ಪದೇ ಪದೆ ಅನುಭವಿಸಬೇಕಾಗುತ್ತೆ. ಪ್ರೀತಿಯಲ್ಲಿ ಬೀಳುವುದು ಮತ್ತು ಪ್ರೀತಿಯಿಂದ ದೂರವಾಗುವುದು ಈಗೀಗ ತುಂಬಾನೇ ಕಾಮನ್ನು.
ಅನುಭವಗಳ ಮೂಲಕ ಹಲವು ವಿಚಾರ ಕಲಿತುಕೊಂಡರೂ, ಪ್ರೀತಿಯ ವಿಷಯದಲ್ಲಿ ಮಾತ್ರ ಅನೇಕ ಸಲ ತುಂಬಾ ಹರ್ಟ್ ಆಗುತ್ತೆ. ಕೆಲವೊಮ್ಮೆ ಜೀವನಪೂರ್ತಿ ಕಾಡುತ್ತೆ. ಅಮೃತಾ ಐಯ್ಯಂಗಾರ್‌ಗೆ ಕೂಡ ಈ ತರಹದ ನೋವು ಕಾಡುತ್ತಿದೆಯಾ ಎನ್ನುವ ಅನುಮಾನ ಸದ್ಯಕ್ಕೆ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಕಾರಣವಾಗಿರುವುದು ಖುದ್ದು ಅಮೃತಾ ಐಯ್ಯಂಗಾರ್ ಅವರ ನಡೆ ಮತ್ತು ಅವರು ಬರೆದುಕೊಂಡಿರುವ ಸಾಲುಗಳು.

ಹೌದು, ಅಸಲಿಗೆ ಈ ಹಿಂದೆ ಡಾಲಿ ಧನಂಜಯ್ ಮತ್ತು ಅಮೃತಾ ಐಯ್ಯಂಗಾರ್ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಅನುಮಾನ ಅನೇಕರಲ್ಲಿತ್ತು. ಯಾಕೆಂದರೆ.. ಇಬ್ಬರು ಒಂದಾದ ಮೇಲೊಂದು ಚಿತ್ರಗಳನ್ನು ಮಾಡಿದ್ದರು. ಎಲ್ಲೆಡೆ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಇನ್ನೂ ಎಲ್ಲಕ್ಕಿಂತ ಬಹೆಚ್ಚಾಗಿ ಗಣೇಶ್ ನಡೆಸಿಕೊಡ್ತಿದ್ದ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್, ಅಮೃತಾ ಐಯ್ಯಂಗಾರ್ ಅವರ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ''ಮಂಡಿಯೂರಿ ಬೇಡುವೆನು.. ಹೃದಯ ಕಾಲಡಿ ಇಡುವೆನು.. ತೆಗೆದು ಬಚ್ಚಿಟ್ಕೋ, ಇಲ್ಲ ತುಳಿದು ಕಾಲ್ ತೊಳೆದುಕೋ, ಬೇಡ ಈ ಮೌನ, ಮಾಡು ತೀರ್ಮಾನ'' ಎಂದೆಲ್ಲ ಕವಿತೆಯನ್ನು ಹೇಳಿದ್ದರು. ಧನಂಜಯ್ ನೀಡಿದ್ದ ಗುಲಾಬಿ ಹೂ ಪಡೆದು ಅಮೃತಾ ಐಯ್ಯಂಗಾರ್ ನಾಚಿ ನೀರಾಗಿದ್ದರು.
ಈ ಎಲ್ಲ ಕಾರಣಕ್ಕೆ ಡಾಲಿ ಧನಂಜಯ್ ಮತ್ತು ಅಮೃತಾ ಐಯ್ಯಂಗಾರ್ ಹೋದಲ್ಲಿ ಬಂದಲ್ಲಿ ಜನ ಇವರ ಕುರಿತು ಮಾತನಾಡಲು ಶುರುಮಾಡಿದ್ದರು. ಜೋಡಿ ಚೆನ್ನಾಗಿದೆ ಎನ್ನುತ್ತಿದ್ದರು. ಇನ್ನೂ ಕೆಲವರು ನಿಮ್ಮ ಇಬ್ಬರ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಕೂಡ ನೇರಾನೇರವಾಗಿಯೇ ಇಬ್ಬರ ಬಳಿ ಕೇಳಿದ್ದರು. ಇದಕ್ಕೆ ಇಬ್ಬರು ನಕ್ಕು ಸುಮ್ಮನಾಗುತ್ತಿದ್ದರು. ಡಾಲಿ ಧನಂಜಯ್ ಅವರಿಗೆ ಯಾರು ಹೆಣ್ಣೇ ಕೊಡ್ತಿಲ್ಲವಂತೆ ಎಂದು ತಮಾಷೆಯನ್ನು ಮಾಡಿದ್ದರು.
ಆದರೆ ಈಗ ಡಾಲಿ ಧನಂಜಯ್ ಮದುವೆ ಡಾಕ್ಟರ್ ಧನ್ಯತಾ ಅವರ ಜೊತೆ ನಡೆದಿದೆ. ಇಡೀ ಕನ್ನಡ ಚಿತ್ರರಂಗ ಬಂದು ಡಾಲಿ ಧನಂಜಯ್ ಮತ್ತು ಡಾಕ್ಟರ್ ಧನ್ಯತಾಗೆ ಶುಭಾಶಯವನ್ನು ಕೋರಿದೆ. ಆದರೆ ಒಂದು ಕಾಲದಲ್ಲಿ ಡಾಲಿ ಧನಂಜಯ್ ಅವರ ಆಪ್ತ ಗೆಳತಿಯಾಗಿದ್ದ ಅಮೃತಾ ಐಯ್ಯಂಗಾರ್ ಮಾತ್ರ ಮೈಸೂರಿನಲ್ಲಿಯೇ ಇದ್ದರೂ ಕೂಡ ಮದುವೆಗೆ ಹೋಗಿಲ್ಲ. ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಕೂಡ ನವ ಜೋಡಿಗೆ ಶುಭಾಶಯವನ್ನು ಕೋರಿಲ್ಲ.
ಅಮೃತಾ ಅವರ ಈ ನಡೆ ಈಗ ಅನೇಕರಲ್ಲಿನ ಅನುಮಾನವನ್ನು ಹೆಚ್ಚಿಸಿದೆ. ಡಾಲಿ ಧನಂಜಯ್ ಅವರ ಜೊತೆ ಬ್ರೇಕಪ್ ಆದ ನೋವಲ್ಲಿಯೇ ಅಮೃತಾ ಐಯ್ಯಂಗಾರ್ ಇದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಅಮೃತಾ ಐಯ್ಯಂಗಾರ್ ಆ ಕಡೆ ಡಾಲಿ ಧನಂಜಯ್ ಮದುವೆ ನಡೆಯುತ್ತಿದ್ದ ಸಮಯದಲ್ಲಿ ಈ ಕಡೆ ಡಾಲಿ ಮದುವೆಗೆ ತೆರಳಿದ್ದ ರಮ್ಯಾ ಅವರನ್ನು ಮೈಸೂರಿನಲ್ಲಿ ಭೇಟಿಯಾಗಿದ್ದಾರೆ. ತುಂಬಾ ಸಮಯದ ನಂತರ ನನ್ನ Qನ ಭೇಟಿ ಮಾಡಿದ್ದೀನಿ. 'ಮನಸ್ಸಿನೊಳಗೆ ಕಿರುಚಾಡುತ್ತಿದ್ದೀನಿ ಆದರೆ ಹೊರಗಡೆ ಶಾಂತವಾಗಿದ್ದೀನಿ' ಎಂದು ಬರೆದುಕೊಂಡಿದ್ದಾರೆ.

ಅಮೃತಾ ಐಯ್ಯಂಗಾರ್ ಬರೆದುಕೊಂಡ ಈ ಸಾಲುಗಳನ್ನು ಈಗ ಡಾಲಿ ಧನಂಜಯ್ ಅವರ ಮದುವೆ ಜೊತೆ ಕನೆಕ್ಟ್ ಮಾಡಿ ಮಾತನಾಡುತ್ತಿದ್ದಾರೆ. ಡಾಲಿ ಧನಂಜಯ್ ಮದುವೆಗೆ ಯಾಕೆ ಹೋಗಿಲ್ಲ ಎನ್ನುವ ಪ್ರಶ್ನೆಗಳನ್ನು ಅಮೃತಾಗೆ ಕೇಳುತ್ತಿದ್ದಾರೆ. ಬ್ರೇಕಪ್ ಆದ ನೋವು ಇನ್ನೂ ಮಾಸಿಲ್ವಾ ಎಂದು ಕೂಡ ಕಾಮೆಂಟ್ ಮಾಡುತ್ತಿದ್ದಾರೆ. ತಾವು ಬರೆದ ಸಾಲುಗಳ ಬಗ್ಗೆ ರಮ್ಯಾ ಅವರನ್ನು ನೋಡಿದ ಖುಷಿಯಲ್ಲಿ ಮನಸಿನಲ್ಲಿ ಕಿರುಚಾಡಿದ್ದು ಎನ್ನುವ ಸಬೂಬನ್ನು ಅಮೃತಾ ಐಯ್ಯಂಗಾರ್ ಹೇಳಿದರೂ ಕೂಡ ಈ ಮಾತನ್ನು ಯಾರು ಒಪ್ಪಲು ತಯಾರಿಲ್ಲ.


Click it and Unblock the Notifications











