For Quick Alerts
  ALLOW NOTIFICATIONS  
  For Daily Alerts

  'ನ್ಯಾಷನಲ್ ಸ್ಟಾರ್ ಆದ್ಮೇಲೆ ಕನ್ನಡ ಮರೆತ್ರಾ?: ನೆಟ್ಟಿಗರಿಂದ ಯಶ್ ಗೆ ಕ್ಲಾಸ್

  |
  ಅಭಿಮಾನಿಗಳ ಮಾತನ್ನು ಕೇಳ್ತಾರಾ ಯಶ್..? | Yash | FILMIBEAT KANNADA

  ನ್ಯಾಷನಲ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ರಾಕಿಂಗ್ ದಂಪತಿಗೆ ಸಿಕ್ಕ ವಿಶೇಷವಾದ ಉಡುಗೊರೆಯ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

  ಯಶ್ ದಂಪತಿಗೆ ಒಲವಿನ ಉಡುಗೊರೆ ನೀಡಿದ ಮೇಕಪ್ ಮ್ಯಾನ್ಯಶ್ ದಂಪತಿಗೆ ಒಲವಿನ ಉಡುಗೊರೆ ನೀಡಿದ ಮೇಕಪ್ ಮ್ಯಾನ್

  ಅಂದ್ಹಾಗೆ ಯಶ್ ಮತ್ತು ರಾಧಿಕಾ ದಂಪತಿಗೆ ಮಗಳು ಆಯಿರಾಳ ಹೆಜ್ಜೆ ಗುರುತಿನ ಆರ್ಟ್ ಉಡುಗೊರೆಯಾಗಿ ಸಿಕ್ಕಿದೆ. ಈ ಗಿಫ್ಟ್ ನೋಡಿದ ರಾಕಿಂಗ್ ದಂಪತಿ ಫುಲ್ ಖುಷ್ ಆಗಿದ್ದಾರೆ. ಅದೇ ಸಂತಸದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಗಳಿಗೆ ಸಿಕ್ಕ ಉಡುಗೊರೆ ನೋಡಿ ಯಶ್ ದಂಪತಿ ಕನ್ನಡ ಮಾತನಾಡುವುದನ್ನೆ ಮರೆತಿದ್ದಾರೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

  ನಿಮ್ಮ ಅಣ್ತಮ್ಮಂದಿರು ನಿಮ್ಮಷ್ಟು ಇಂಗ್ಲಿಷ್ ಪಂಡಿತರಲ್ಲ

  ನಿಮ್ಮ ಅಣ್ತಮ್ಮಂದಿರು ನಿಮ್ಮಷ್ಟು ಇಂಗ್ಲಿಷ್ ಪಂಡಿತರಲ್ಲ

  "ಅಣ್ತಮ್ಮ ಅಂತ ಯಾವುದೇ ಸ್ಟೇಜ್ ಮೇಲೆ ಮಾತು ಶುರು ಮಾಡೋ ನೀವು ಇವತ್ತು ಏನು, ವಿಡಿಯೋ ದಲ್ಲಿ ಕನ್ನಡದ ಅಣ್ತಮ್ಮ ಯಾರು ನಿಮಗೆ ನೆನಪು ಆಗ್ಲಿಲ್ಲ ಅಲ್ವಾ, ನಿಮ್ಮ ಅಣ್ತಮ್ಮರು ಎಲ್ಲರೂ ನಿಮ್ಮಷ್ಟು ಇಂಗ್ಲಿಷ್ ಪಂಡಿತರಲ್ಲ ಸ್ವಾಮಿ. ಅವರಿಗೆಲ್ಲ ಆಸೆ ಇರಲ್ವ ನಮ್ಮ ಹೀರೋ ಏನೋ ಹೇಳ್ತಾ ಇದ್ದಾರೆ ಅದು ನಮಗೂ ಗೊತ್ತಾಗಬೇಕು ಖುಷಿ ಪಡಬೇಕು ಅಂತ. ನೀವೇ ಒಂದು ಸಾರಿ ಯೋಚ್ನೆ ಮಾಡಿ ಈ ವಿಡಿಯೋ ನಮ್ಮ ಕನ್ನಡದ ಅಭಿಮಾನಿಗಳಿಗೆ ಇಷ್ಟ ಆಯ್ತಾ ಆಗಿಲ್ವ ಅನ್ನೋದು" ಎಂದು ನೆಟ್ಟಿಗರು ಕೇಳುತ್ತಿದ್ದಾರೆ.

  'ಕೆಜಿಎಫ್ ಚಾಪ್ಟರ್-2' ರಿಲೀಸ್ ಡೇಟ್ ಬಹಿರಂಗ'ಕೆಜಿಎಫ್ ಚಾಪ್ಟರ್-2' ರಿಲೀಸ್ ಡೇಟ್ ಬಹಿರಂಗ

  ಕನ್ನಡನೂ ಸ್ವಲ್ಪ ಬಳಸಿ ಸರ್

  ಕನ್ನಡನೂ ಸ್ವಲ್ಪ ಬಳಸಿ ಸರ್

  "ಮೇಡಂ ಕನ್ನಡದಲ್ಲೇ ಮಾತಾಡಿ ಅಂತ ಯಾರು ಕೇಳ್ತಿಲ್ಲ, ಕನ್ನಡದಲ್ಲೂ ಮಾತಾಡಿ ಅಂತ ಕೇಳ್ಕೊತ್ತಿದ್ದೀವಿ. ಸರ್ ಈಗ ನಿಮಗೆ ಎಲ್ಲ ರಾಜ್ಯದಲ್ಲೂ ಅಭಿಮಾನಿಗಳನ್ನ ಸಂಪಾದಿಸಿದ್ದಿರ ಖುಷಿ ವಿಚಾರ, ಇದರ ಮಧ್ಯೆ ನೀವು ಯಾವುದೇ ಮೆಸೇಜ್ ಕೊಡೋದು ಇರ್ಬವುದು, ಲೈವ್ ಬರೋದು ಇರ್ಬವುದು ಏನೇ ಇದ್ರು ಕನ್ನಡನೂ ಸ್ವಲ್ಪ ಬಳಸಿ ಬೇರೆಯವರು ಪ್ರಯತ್ನ ಪಡ್ತಾರೆ ನಮ್ ಭಾಷೆ ಕಲಿಯೋಕೆ" ಎಂದು ಹೇಳುತ್ತಿದ್ದಾರೆ.

  ತಿಳಿದು ತಿಳಿದು ನಿಮ್ಮಂತವರೆ ಈ ರೀತಿ ಮಾಡಬಾರದು

  ತಿಳಿದು ತಿಳಿದು ನಿಮ್ಮಂತವರೆ ಈ ರೀತಿ ಮಾಡಬಾರದು

  "ಕನ್ನಡ ಜೊತೆಗೆ ಇಂಗ್ಗೀಷ್ ಬಳಸಿ ಸಲ್ಪ ಅದುನ್ನಾ ಬಿಟ್ಟು ಬರಿ ಇಂಗ್ಗಿಷ್ ನಲ್ಲಿ ಮಾತ್ ಆಡುವುದು ಎಷ್ಟು ಸರಿ ನಿಮಗೆ ಹೊರರಾಜ್ಯದಲ್ಲಿ ಅಭಿಮಾನಿಗಳು ಇರಬಹುದು ಆಗಂತ ಕನ್ನಡನ ಕಡೆಗಣಿಸುದು ತಪ್ಪು. ನಿಮ್ಮ ಬೇರೆ ಭಾಷೆಯ ಅಭಿಮಾನಿಗಳಿಗೆ ಕನ್ನಡ ಅರ್ಥ ಆಗಲ್ಲ ಅಂತ ಬರಿ ಇಂಗ್ಗೀಷ್ ಬಳಸುವುದು ತಪ್ಪಾಗುತ್ತೆ. ತಿಳಿದು ತಿಳಿದು ನಿಮ್ಮಂತವರೆ ಈ ರೀತಿ ಮಾಡಬಾರದು. ಅದಷ್ಟು ಕನ್ನಡ ಬಳಸಿ ಕನ್ನಡ ಬೆಳಸಿ"

  ಕನ್ನಡದಲ್ಲಿ ಸೈರಾ ಟೀಸರ್ ಅಬ್ಬರ: ನಿರಾಸೆಯಾದ ಯಶ್ ಅಭಿಮಾನಿಗಳುಕನ್ನಡದಲ್ಲಿ ಸೈರಾ ಟೀಸರ್ ಅಬ್ಬರ: ನಿರಾಸೆಯಾದ ಯಶ್ ಅಭಿಮಾನಿಗಳು

  ಅಭಿಮಾನ ಕಡಿಮೆ ಆಗೋ ಹಾಗೆ ಮಾಡ್ಕೋಬೇಡಿ

  ಅಭಿಮಾನ ಕಡಿಮೆ ಆಗೋ ಹಾಗೆ ಮಾಡ್ಕೋಬೇಡಿ

  "ಸಾರ್ ಕನ್ನಡಿಗರಿಗೆ ಹೇಳ್ತಾ ಇದ್ದೀರಾ ಈ ಖುಷಿ ಸಮಾಚಾರ ನಾ, ಇಲ್ಲ ಪರಭಾಷಿಕರ ಓಲೈಕೆಗೆ ನಾ ಈ ಇಂಗ್ಲಿಷ್. ನಿಮ್ಮ ಮೇಲೆ ಇರೋ ಅಭಿಮಾನ ಕಡಿಮೆ ಆಗೋ ಹಾಗೆ ಮಾಡ್ಕೋಬೇಡಿ. ಯಾಕೋ ಕನ್ನಡ ಭಾಷೆ ಒಂದೇ ಚಿತ್ರಕ್ಕೆ ಮರೆತು ಹೋಯ್ತಾ ಹೇಗೆ"

  English summary
  Netizens outraged against Kannada actor Yash for he is fully speak in English.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X