ಅನುಷ್ಕಾ ಶೆಟ್ಟಿ ಕನ್ನಡ ಪ್ರೇಮ ಕಂಡು ರಶ್ಮಿಕಾ ವಿರುದ್ಧ ಕೆಂಡಕಾರುತ್ತಿರುವ ನೆಟ್ಟಿಗರು
Recommended Video
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮತ್ತು ಸದ್ಯ ಸಂಚಲನ ಮೂಡಿಸುತ್ತಿರುವ ನಟಿ ರಶ್ಮಿಕಾ ಮಂದಣ್ಣ. ಈ ಇಬ್ಬರು ನಟಿಯರು ಕರ್ನಾಟಕ ಮೂಲದವರು. ಕನ್ನಡ ನೆಲದಲ್ಲೆ ಹುಟ್ಟಿ ಬೆಳೆದು ತೆಲುಗು ಚಿತ್ರರಂಗ ಆಳುತ್ತಿರುವವರು. 'ಬಾಹುಬಲಿ' ಚಿತ್ರದ ನಂತರ ಅನುಷ್ಕಾ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದರು.
ಕಿರಿಕ್ ಪಾರ್ಟಿ ಸಿನಿಮಾ ನಂತರ ರಶ್ಮಿಕಾ ತೆಲುಗು ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತ ಟಾಪ್ ನಟಿಯರ ಸಾಲಲ್ಲಿ ಸದ್ದು ಮಾಡುತ್ತಿರುವ ರಶ್ಮಿಕಾ, ವಿವಾದದ ಮೂಲಕವೂ ಅಷ್ಟೆ ಸುದ್ದಿಯಾಗುತ್ತಿದ್ದಾರೆ.
ಇತ್ತೀಚಿಗಷ್ಟೆ ನಟಿ ಅನುಷ್ಕಾ ಶೆಟ್ಟಿ ಅಮ್ಮನಿಗೆ ವಿಶ್ ಮಾಡಿ ಒಂದು ಪೋಸ್ಟ್ ಹಾಕಿದ್ದರು. ಅಮ್ಮನಿಗೆ ವಿಶ್ ಮಾಡಿರೋದ್ರಲ್ಲಿ ಏನು ವಿಶೇಷತೆ ಇರಲಿಲ್ಲ. ಆದ್ರೆ ಕನ್ನಡದಲ್ಲಿ ಶುಭಾಶಯ ಕೋರಿ ಕನ್ನಡ ಪ್ರೇಮ ಮೆರೆದಿದ್ದರು ಅನುಷ್ಕಾ. ಆದ್ರೆ ಅನುಷ್ಕಾ ಹಾಕಿದ ಪೋಸ್ಟ್ ಈಗ ರಶ್ಮಿಕಾಗೆ ದೊಡ್ಡ ತಲೆನೋವು ಆಗಿದೆ. ಇದೊಂತರ "ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳೆದ್ರು" ಅಂತಾರಲ್ಲ ಹಾಗಾಗಿದೆ.

'ರಶ್ಮಿಕಾ ಮಂಗಣ್ಣಗೆ ಬುದ್ಧಿ ಹೇಳಿ ಅನುಷ್ಕಾ'
ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಅಮ್ಮನಿಗೆ ಶುಭಾಶಯ ಕೋರುತ್ತಿದಂತೆ ನೆಟ್ಟಿಗರು ರಶ್ಮಿಕಾ ವಿರುದ್ಧ ಮತ್ತಷ್ಟು ಕೆಂಡಕಾರುತ್ತಿದ್ದಾರೆ. ರಶ್ಮಿಕಾ ವಿರುದ್ಧ ತರಹೇವಾರಿ ಕಮೆಂಟ್ ಗಳು ಹರಿದಾಡುತ್ತಿವೆ. ಇದರ ಒಂದು ಸ್ಯಾಂಪಲ್ ಹೀಗಿದೆ. "ರಶ್ಮಿಕಾ ಮಂಗಣ್ಣ ಅಂತ ಒಬ್ರು Serial ActoR ಇದ್ದಾರೆ, ನಿಮಗೆ ಅವರು ಗೊತ್ತಿದ್ದರೆ ಸ್ವಲ್ಪ ಬುದ್ಧಿ ಹೇಳಿ ಅನುಷ್ಕಾ" ಎಂದು ಹೇಳುತ್ತಿದ್ದಾರೆ.

'ಇಲ್ಲೆ ಹುಟ್ಟಿ ಬೆಳೆದವರಿಗೆ ಕನ್ನಡ ಬರಲ್ಲ"
"ಕನ್ನಡತಿ ಅನುಷ್ಕಾ ಶೆಟ್ಟಿ ನಿಮಗೆ ತುಂಬು ಹೃದಯದ ಗೌರವ ಸಲ್ಲಿಸುತ್ತೇವೆ. ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಬೇರೆ ಕಡೆ ಆಫರ್ ಬಂದ್ಮೇಲೆ ಕನ್ನಡ ಬರಲ್ಲ, ಕನ್ನಡ ಕಷ್ಟ, ಕನ್ನಡ ಇಷ್ಟ ಇಲ್ಲ ಅನ್ನೋರ ನಡುವೆ. ಬೇರೆ ಕಡೆ ಇದ್ದು, ಬೇರೆ ಕಡೆ ಮಿಂಚಿ ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಸಾರಾಂಶ ಸಾರಿದ ಮಹಾನ್ ವ್ಯಕ್ತಿ ನೀವು" ಅನುಷ್ಕಾ ಅವರನ್ನು ಹಾಡಿಹೊಗಳಿ ರಶ್ಮಿಕಾಗೆ ಸರಿಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

"ಅಕ್ಕನ ಕಾಲು ತೊಳೆದು ನೀರು ಕುಡಿ"
"ಎಲ್ಲಿದ್ದೀಯಾ ರಶ್ಮಿಕಾ ಮುದ್ದಣ್ಣ ಅಕ್ಕನ ಕಾಲು ತೊಳೆದು ನೀರು ಕುಡಿ, ನಿಮಗೆ ಬುದ್ದಿ ಬರತ್ತೆ. ದಕ್ಷಿಣ ಭಾರತ ಚಿತ್ರರಂಗದ ನಂಬರ್ ಒನ್ ನಟಿ ಅನುಷ್ಕಾ ಶೆಟ್ಟಿ ಕನ್ನಡ ಪ್ರೀತಿಗೆ ಎಲ್ಲರೂ ಕನ್ನಡಿಗರು ಸಂತೋಷ ಪಡುವ ವಿಷಯ"

ಇದಕ್ಕೆ ಬೆಲೆ ತೆರುವ ಕಾಲ ಬಂದೇ ಬರುತ್ತೆ
"ಇದೇ ಶುಭ ಸಂದರ್ಭದಲ್ಲಿ ಹಂಗೇ ರಶ್ಮಿಕಾ ಮಂಗಣ್ಣನ ಬಾಯಿಗೆ ಒಂಚೂರು ತುಪುಕ್ ಅಂತ ಉಗ್ದು ಹೋಗು ಆವಾಗಾದರೂ ರಶ್ಮಿಕಾ ಮಂಗಣ್ಣ ಕನ್ನಡ ಕಲೀತಾಳೇನೋ ನೋಡಣ". "ಹೋಗ್ಲಿ ಬಿಡಿ ಕತ್ತೆಗೆ ಏನು ಗೊತ್ತು ಕಸ್ತೂರಿ ಪರಿಮಳ ಊರಿಗೆ ಬಂದವಳು ನೀರಿಗೆ ಬರಲೇ ಬೇಕು ಅಲ್ವಾ. ಕನ್ನಡ ನುಡಿ ನಮ್ಮ ಉರಿಸು ಒಂದಿನ ಅದಕ್ಕೆ ಬೆಲೆ ತೆರುವ ಕಾಲ ಬಂದೇ ಬರುತ್ತೆ ಬಿಡಿ"

ಕನ್ನಡ ಸಿನಿಮಾ ಬಗ್ಗೆ ಎಲ್ಲಿಯೂ ಹೇಳಿಲ್ಲ ದೀಪಿಕಾ
ಕರ್ನಾಟಕದಲ್ಲಿ ಹುಟ್ಟಿ, ಬೆಳೆದು ಕನ್ನಡ ಮಾತಾಡೋದು ಕಷ್ಟ ಅನ್ನುವ ಕೆಲವು ಅಹಂಕಾರಿಗಳು ಇದನ್ನು ನೋಡಿ ಕಲಿಯಲಿ. ಹಾಗೂ ಕನ್ನಡ ಭಾಷೆಯ ಮೂಲಕ ಚಿತ್ರರಂಗ ಪ್ರವೇಶಿಸಿ ಈಗ ಬಾಲಿವುಡ್ ನಲ್ಲಿ ಫೇಮಸ್ ಆದ ತಕ್ಷಣ ತಮ್ಮ ಹೆಸರನ್ನು ಪಡುಕೋಣೆ ಇಂದ ಪಡುಕೋನ್ ಅಂತ ಮಾಡಿಕೊಂಡು, ತಮ್ಮ ಮೊದಲ ಚಿತ್ರ ಕನ್ನಡದ್ದು ಅಂತ ಎಲ್ಲಿಯೂ ಹೇಳಿಕೊಳ್ಳದೆ ತಮಗೂ ಕನ್ನಡಕ್ಕೂ ಸಂಬಂಧ ಇಲ್ಲ ಎಂದು ವರ್ತಿಸುತ್ತಿರುವವರೂ ಕೂಡ ನಿಮ್ಮಿಂದ ಕಲಿಯಬೇಕು.


Click it and Unblock the Notifications











