'ಮಗಳಿಗೆ ದಯವಿಟ್ಟು ಕನ್ನಡ ಕಲಿಸಿ': ಕೊಂಕಣಿ ಹೇಳಿಕೊಟ್ಟ ನಟಿ ರಾಧಿಕಾಗೆ ಅಭಿಮಾನಿಗಳ ಮನವಿ
ನಟಿ ರಾಧಿಕಾ ಪಂಡಿತ್ ಮತ್ತು ಯಶ್ ಪುತ್ರಿ ಆಯಿರಾ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ರಾಕಿಂಗ್ ದಂಪತಿ ಮಗಳ ಮುದ್ದು ಫೋಟೋವನ್ನು ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಮೆಂಟ್ ಹರಿದು ಬರುತ್ತೆ.
ಸದ್ಯ ರಾಧಿಕಾ ಪಂಡಿತ್ ಮಗಳ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಾಧಿಕಾ ಪುತ್ರಿಯ ಜೊತೆ ಮಾತನಾಡುತ್ತಿದ್ದಾರೆ. ರಾಧಿಕಾ ಮತ್ತು ಯಶ್ ಫೋಟೋವನ್ನು ಇಟ್ಟು ಅಪ್ಪ ಮತ್ತು ಅಮ್ಮನನ್ನು ಗುರುತಿಸುವಂತೆ ಹೇಳುತ್ತಿದ್ದಾರೆ. ಆದ್ರೆ ರಾಧಿಕಾ ಅವರ ಈ ವಿಡಿಯೋ ನೋಡಿ ಅಭಿಮಾನಿಗಳು ಗರಂ ಆಗಿದ್ದಾರೆ.

ಮಗಳ ಜೊತೆ ರಾಧಿಕ ಕೊಂಕಣಿಯಲ್ಲಿ ಮಾತು
ರಾಧಿಕಾ ಶೇರ್ ಮಾಡಿರುವ ವಿಡಿಯೋದಲ್ಲಿ ಮಗಳ ಜೊತೆ ಕೊಂಕಣಿ ಮಾತನಾಡುತ್ತಿದ್ದಾರೆ. ಕೊಂಕಣಿಯಲ್ಲೆ ಮಗಳಿಗೆ ಡಾಡ ಎಲ್ಲಿದ್ದಾರೆ ಮತ್ತು ಮಮ್ಮ ಎಲ್ಲಿದ್ದಾರೆ ಎಂದು ಕೇಳುತ್ತಿದ್ದಾರೆ. ಅಮ್ಮನ ಪ್ರಶ್ನೆಗೆ ಮದ್ದು ಮಗಳು ಫೋಟೋದಲ್ಲಿರುವ ಅಪ್ಪ ಮತ್ತು ಅಮ್ಮನನ್ನು ಗುರುತಿಸಿ ತೋರಿಸುತ್ತೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.

ಮಗಳಿಗೆ ಮೊದಲು ಕನ್ನಡ ಕಲಿಸಿ
"ರಾಧಿಕಾ ಮೇಡಂ ನಿಮ್ಮ ಮಗಳಿಗೆ ಮೊದಲು ಕನ್ನಡ ಹೇಳಿಕೊಡಿ" ಎಂದು ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಮೊದಲು ಕನ್ನಡ ಭಾಷೆ ಕಲಿಸಿ ನಂತರ ಬೇರೆ ಭಾಷೆ ಹೇಳಿಕೊಡಿ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ. "ಬೆಳೆಯೋಕೆ ಕನ್ನಡ, ಕರ್ನಾಟಕ ಬೇಕು, ಆದರೆ ತಮ್ಮ ಮಕ್ಕಳಿಗೆ ಯಾಕೆ ಕನ್ನಡ ಕಲಿಸಿಕೊಡುತ್ತಿಲ್ಲ. ಕನ್ನಡ ಕಲಿಸಿ ಕನ್ನಡ ಮಾತಾನಾಡಿ" ಎಂದು ಕೇಳಿಕೊಳ್ಳುತ್ತಿದ್ದಾರೆ.

ಸಿನಿಮಾದಲ್ಲಿ ಮಾತ್ರ ಕನ್ನಡ ಅಂತ ಹೇಳುವುದಲ್ಲ
"ಸಿನಿಮಾದಲ್ಲಿ ಮಾತ್ರ ಕನ್ನಡ ಅಂತ ಹೇಳುವುದಲ್ಲ. ಮನೆಯಲ್ಲೂ ಅದನ್ನು ಪಾಲಿಸಬೇಕು. ಕನ್ನಡ ಕಲಿಸಿ ಮಕ್ಕಳಿಗೆ ಅಮ್ಮ ಅಪ್ಪ ಅಂತ ಹೇಳಿಕೊಡಿ" ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು "ಕನ್ನಡ ಕಲಿಸಿ ಇಲ್ಲ ಅಂದ್ರೆ ವಾಟಾಳ್ ನಾಗರಾಜ್ ಗೆ ಹೇಳಿ ಸ್ಟ್ರೈಕ್ ಮಾಡಿಸಬೇಕಾಗುತ್ತೆ" ಎಂದು ಹೇಳಿ ಕಾಲೆಳೆಯುತ್ತಿದ್ದಾರೆ.

ಇಂಗ್ಲೀಷ್ ನಲ್ಲಿ ಮಾತನಾಡಿದ್ದಕ್ಕೆ ಅಭಿಮಾನಿಗಳಿಂದ ಕ್ಲಾಸ್
ಇತ್ತೀಚಿಗಷ್ಟೆ ಮಗಳಿಗೆ ಸಿಕ್ಕ ವಿಶೇಷವಾದ ಉಡುಗೊರೆಯನ್ನು ಹಿಡಿದು ರಾಕಿಂಗ್ ಸ್ಟಾರ್ ದಂಪತಿ ಫುಲ್ ಇಂಗ್ಲೀಷ್ ನಲ್ಲಿ ವಿವರಣೆ ನೀಡಿದ್ದರು. ಇದನ್ನು ನೋಡಿ ಅಭಿಮಾನಿಗಳು ರಾಕಿಂಗ್ ದಂಪತಿ ವಿರುದ್ಧ ರೊಚ್ಚಿಗೆದ್ದಿದ್ದರು. ಒಂದೇ ಒಂದು ಪದವನ್ನು ಕನ್ನಡದಲ್ಲಿ ಮಾತನಾಡದೆ ವಿಡಿಯೋ ಪೂರ್ತಿ ಇಂಗ್ಲೀಷ್ ನಲ್ಲಿ ಮಾತನಾಡಿದ್ದರು ಯಶ್ ದಂಪತಿ. ಹಾಗಾಗಿ ನೀವೇನು ಇಂಗ್ಲೇಂಡ್ ಇಂದ ಬಂದಿದ್ದ. ನಿಮಗೆ ಕನ್ನಡ ಅಭಿಮಾನಿಗಳೆ ಜಾಸ್ತಿ ಇರುವುದು ಕನ್ನಡದಲ್ಲಿ ಹೇಳಿ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ದಾಡಿ ಇಲ್ಲದೆ ಅಪ್ಪನನ್ನು ಗುರುತು ಹಿಡಿದ ಆಯಿರಾ
"ಪರವಾಗಿಲ್ಲ ಆಯಿರಾ ದಾಡಿ ಇಲ್ಲದೆ ಅಪ್ಪನನ್ನು ಗುರುತಿಸುತ್ತಾಳೆ" ಎಂದು ರಾಧಿಕಾ ಸಂತಸಪಟ್ಟಿದ್ದಾರೆ. ಇನ್ನು "ಈ ವಿಡಿಯೋ ಮಾಡಿರುವುದು ಆಯಿರಾ 8 ತಿಂಗಳಿರುವಾಗ ಆದ್ರೀಗ ಆಯಿರಾಗೆ 10 ತಿಂಗಳಾಗಿದೆ. ಸಮಯ ಹೇಗೆ ಕಳೆಯುತ್ತಿದೆ ಅಲ್ಲವಾ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











