ಟಿಕೆಟ್ ದರ ₹200 ನಿಗದಿ; "ಪಾಪ್‌ಕಾರ್ನ್ ರೇಟ್ ಜಾಸ್ತಿ ಮಾಡ್ತಾರೆ".. "KGF-2 ರೆಕಾರ್ಡ್ ಸೇಫ್"

ಕರ್ನಾಟಕ ಸರ್ಕಾರ ಸಿನಿರಸಿಕರಿಗೆ ಸಿಹಿಸುದ್ದಿ ಕೊಟ್ಟಿದೆ. ಸಿನಿಮಾಗಳಿಗೆ ಏಕರೂಪ ಟಿಕೆಟ್ ದರ ನಿಗದಿಗೆ ಮುಂದಾಗಿದೆ. ಏಕರೂಪ ಸಿನಿಮಾ ಟಿಕೆಟ್ ದರಕ್ಕೆ ಸರ್ಕಾರ ಆದೇಶ ಹೊರಡಿಸಿದ್ದು ಮಲ್ಟಿಪ್ಲೆಕ್ಸ್‌ಗಳಲ್ಲಿ ಕೂಡ ಇದು ಜಾರಿಯಾಗಲಿದೆ. ಸಿನಿರಸಿಕರು ಈ ನಡೆಯನ್ನು ಸ್ವಾಗತಿಸಿದ್ದಾರೆ. ಆದರೆ ಮಲ್ಟಿಪ್ಲೆಕ್ಸ್ ಚೈನ್‌ಗಳು ಹಾಗೂ ಬಿಗ್ ಬಜೆಟ್ ಸಿನಿಮಾ ನಿರ್ಮಾಪಕರಿಗೆ ಇದು ಕಹಿ ಸುದ್ದಿ ಎನ್ನುವಂತಾಗಿದೆ.

ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ. ನಿಗದಿ ಮಾಡಿರುವ ಸರ್ಕಾರದ ನಡೆ ಬಗ್ಗೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಇದರಿಂದ ಮಲ್ಟಿಪ್ಲೆಕ್ಸ್ ಹಗಲು ದರೋಡೆಗೆ ಬ್ರೇಕ್ ಬೀಳುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ ಹೆಚ್ಚಿತ್ತು.

Netizens react on Karnataka Government Proposes 200 Cap On Movie Tickets

ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾದಾಗ ದಿಢೀರನೆ ಟಿಕೆಟ್ ದರ ಹೆಚ್ಚಿಸುತ್ತಿದ್ದರು. ಬೇಡಿಕೆಗೆ ತಕ್ಕಂತೆ 5 ಪಟ್ಟು ಟಿಕೆಟ್ ದರ ಹೆಚ್ಚಿಸಿರುವ ಉದಾಹರಣೆ ಕೂಡ ಇದೆ. 'ಪುಷ್ಪ'-2 ಸಿನಿಮಾ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಇದೇ ಕಾರಣಕ್ಕೆ ಸಿನಿಮಾ ಟಿಕೆಟ್ ದರ ಏರಿಕೆಗೆ ಸಿನಿರಸಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಸಿನಿಮಾ ಟಿಕೆಟ್ ದರ ನಿಗದಿ ಬಗ್ಗೆ ಬಜೆಟ್‌ನಲ್ಲಿ ಕೂಡ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದರು. ಅದನ್ನು ಈಗ ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ.

ಕರ್ನಾಟಕ ಸಿನಿಮಾ ನಿಯಂತ್ರಣ (ತಿದ್ದುಪಡಿ) ನಿಯಮ 2025 ಕರಡು ಅಧಿಸೂಚನೆ ಹೊರಡಿಸಿದ ಸರ್ಕಾರ ಯಾವುದೇ ಸಾರ್ವಜನಿಕ ಆಕ್ಷೇಪ, ಸಲಹೆ ಸೂಚನೆಗಳಿಗೆ 15 ದಿನಗಳ ಕಾಲಾವಕಾಶ ಮಾಡಿಕೊಟ್ಟಿದೆ. ಈಗಾಗಲೇ ಕರ್ನಾಟಕದಲ್ಲಿ ಅರ್ಲಿ ಮಾರ್ನಿಂಗ್ ಶೋಗಳಿಗೆ ಕೂಡ ಬ್ರೇಕ್ ಬಿದ್ದಿದೆ. ಇದೀಗ ಏಕರೂಪ ಟಿಕೆಟ್ ದರ ನಿಗದಿಯಾಗಿದೆ. ಹೀಗಾಗಿ 'ಕೆಜಿಎಫ್-2' ಚಿತ್ರದ ಫಸ್ಟ್ ಡೇ ಬಾಕ್ಸಾಫೀಸ್ ರೆಕಾರ್ಟ್ ಸೇಫ್ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

'KGF- 2' ಸಿನಿಮಾ ಕರ್ನಾಟಕದಲ್ಲಿ ಮೊದಲ ದಿನ 30 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಆ ದಾಖಲೆಯನ್ನು ಮತ್ಯಾವುದೇ ಕನ್ನಡ ಸಿನಿಮಾ ಮೀರಿಸಲು ಸಾಧ್ಯವಾಗಲಿಲ್ಲ. ಸದ್ಯ ಟಿಕೆಟ್ ದರ ಕಮ್ಮಿ ಮಾಡಿರುವುದರಿಂದ 'KGF- 2' ಚಿತ್ರದ ಮೊದಲ ದಿನದ ಕಲೆಕ್ಷನ್ ದಾಖಲೆಯನ್ನು ಸದ್ಯಕ್ಕೆ ಯಾವುದೇ ಸಿನಿಮಾ ಮೀರಿಸಲು ಆಗಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. 'ಟಾಕ್ಸಿಕ್' ಸಿನಿಮಾ ಖಂಡಿತ ಈ ಸಾಧನೆ ಮಾಡುತ್ತದೆ ಎಂದು ಕೆಲವರು ರಿಪ್ಲೇ ಮಾಡಿದ್ದಾರೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಮಾತ್ರವಲ್ಲ ಪಾಪ್‌ಕಾರ್ನ್, ತಂಪುಪಾನೀಯದ ದರ ಕೂಡ ದುಬಾರಿಯಾಗಿರುತ್ತದೆ. ಈ ಬಗ್ಗೆ ಕೂಡ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿರುತ್ತಾರೆ. ಇದೀಗ ಸರ್ಕಾರ 200 ರೂಪಾಯಿಗೆ ಟಿಕೆಟ್ ದರ ನಿಗದಿಪಡಿಸಿದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಪಾಪ್‌ಕಾರ್ನ್ ಹಾಗೂ ಪಾರ್ಕಿಂಗ್ ಚಾರ್ಜ್ ಜಾಸ್ತಿ ಮಾಡ್ತಾರೆ ನೋಡ್ತಿರಿ ಎಂದು ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ.

"ಕೊನೆಗೂ ಸರ್ಕಾರ ಸಿನಿರಸಿಕರ ಬಗ್ಗೆ ಯೋಚಿಸಿ ಒಳ್ಳೆ ಕೆಲಸ ಮಾಡಿದೆ" ಎಂದು ಮತ್ತೊಬ್ಬ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ. "ತೆಲಂಗಾಣ, ಆಂಧ್ರ ಸರ್ಕಾರಗಳು ಇದೇ ನಿಮಯ ಜಾರಿಗೆ ತರಬೇಕು" ಮತ್ತೊಬ್ಬರು ಬರೆದುಕೊಂಡಿದ್ದಾರೆ. "ಬೆಂಗಳೂರಿನ ಜನರಿಗೆ ಒಳ್ಳೆಯದಾಯಿತು" ಎಂದು ಮತ್ತೊಬ್ಬರು ಟ್ವೀಟ್ ಮಾಡಿರುವುದನ್ನು ನೋಡಬಹುದು.

ಕರ್ನಾಟಕ ಸರ್ಕಾರದ ನಡೆಗೆ ಮಲ್ಟಿಪ್ಲೆಕ್ಸ್‌ ಚೈನ್‌ಗಳು ಹೇಗೆ ಪ್ರತಿಕ್ರಿಯಿಸುತ್ತವೆ ನೋಡಬೇಕಿದೆ. ಇನ್ನು ಆಂಧ್ರ, ತೆಲಂಗಾಣದಲ್ಲಿ ಕೂಡ ಇದೇ ರೀತಿ ಸಿನಿಮಾ ಟಿಕೆಟ್ ದರ ನಿಗದಿಯಾಗಿದೆ. ಆದರೆ ಬಿಗ್ ಬಜೆಟ್ ಸಿನಿಮಾಗಳ ಬಿಡುಗಡೆ ವೇಳೆ ಸರ್ಕಾರದ ಅನುಮತಿ ಪಡೆದು ಟಿಕೆಟ್ ದರ ಹೆಚ್ಚಿಸಿಕೊಳ್ಳುತ್ತಾರೆ. ಮುಂದೆ ಕರ್ನಾಟಕದಲ್ಲಿ ಕೂಡ ಇದೇ ರೀತಿ ಆಗುವ ಸಾಧ್ಯತೆಯಿದೆ.

More from Filmibeat

English summary
ticket prices at Rs 200; Netizens interesting comments on govt decision goes viral
Read more about: kgf theater sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X