For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ-ರಕ್ಷಿತ್ ಟ್ವಿಟ್ಟರ್ ಲವ್ವು: 'ಏನೋ ಏನೋ ಆಗಿದೆ' ಅಂತಿದ್ದಾರೆ ನೆಟ್ಟಿಗರು

  |

  ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಸಜ್ಜಾಗಿದ್ದ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ವೈಯಕ್ತಿಕ ಕಾರಣಗಳಿಂದ ಬ್ರೇಕ್ ಅಪ್ ಮಾಡಿಕೊಂಡರು. ಅಲ್ಲಿಂದ ಇಬ್ಬರು ಮುಖಾಮುಖಿಯಾಗಿದ್ದು ಕಂಡಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರೊನ್ನಬ್ಬರು ಟ್ಯಾಗ್ ಮಾಡಿ ಅಥವಾ ಪರಸ್ಪರ ಚಿತ್ರಗಳ ಪೋಸ್ಟ್ ಮಾಡಿದ ಉದಾಹರಣೆಯೂ ಇಲ್ಲ.

  3 ವರ್ಷಗಳ ಬಳಿಕ ಮಾತನಾಡಿಕೊಂಡ ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ | Filmibeat Kannada

  ಆದ್ರೀಗ, ಮೂರು ವರ್ಷದ ಬಳಿಕ ರಕ್ಷಿತ್ ಮತ್ತು ರಶ್ಮಿಕಾ ಪರಸ್ಪರ ಒಬ್ಬರೊನ್ನಬ್ಬರು ನೆನಪಿಸಿಕೊಂಡಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಹಾಡು ಯ್ಯೂಟ್ಯೂಬ್‌ನಲ್ಲಿ ನೂರು ಮಿಲಿಯನ್ ವೀಕ್ಷಣೆ ಕಂಡಿರುವ ಹಿನ್ನೆಲೆ ಇವರಿಬ್ಬರ ನಡುವೆ ಟ್ವಿಟ್ಟರ್ ಶುಭಾಶಯ ವಿನಿಮಯವಾಗಿದೆ. ಇದನ್ನ ಕಂಡ ನೆಟ್ಟಿಗರು ಇವರಿಬ್ಬರ ಮಧ್ಯೆ ಸಂಥಿಂಗ್ ಏನೋ ಆಗಿದೆ ಎನ್ನುತ್ತಿದ್ದಾರೆ. ಈ ಕುರಿತು ನೆಟ್ಟಿಗರ ಕೆಲವು ಆಯ್ದು ಕಾಮೆಂಟ್‌ಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಮುಂದೆ ಓದಿ...

  ಮರಳಿ ಮನಸಾಗಿದೆ ಸಾಗಿದೆ

  ಮರಳಿ ಮನಸಾಗಿದೆ ಸಾಗಿದೆ

  ''ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ...ಅನ್ನೋ ಹಾಗೆ ನೀವಿಬ್ರೂ ಯಾವುದೋ ಷರತ್ತು (agreement) ಗಳಿಗೆ ಬದ್ಧರಾಗಿದ್ದೀರಿ ಅನ್ಸುತ್ತೆ. ಏನೇ ಆಗ್ಲಿ 5 ವರ್ಷ ಅಲ್ಲ 10 ವರ್ಷ ಆದ್ರೂ ನೀವು ರಶ್ಮಿಕ ಮಂದಣ್ಣ ಅವರನ್ನೇ ಅಥವಾ ಮಂದಣ್ಣ ಅವರು ರಕ್ಷಿತ್ ಸರ್ ಅವರನ್ನೇ ಮದುವೆ ಆಗಬೇಕೆಂದು ಅಭಿಮಾನಿಗಳು ಇಚ್ಚಿಸುತ್ತಾರೆ... ( ತಪ್ಪು ಮಾತಾಡಿದ್ರೆ)'' ಎಂದು ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಾನೆ.

  ಮೂರು ವರ್ಷದ ಬಳಿಕ ನೆನಪಿಸಿಕೊಂಡ ರಶ್ಮಿಕಾ: ಮನತುಂಬಿ ಹಾರೈಸಿದ ರಕ್ಷಿತ್ ಶೆಟ್ಟಿಮೂರು ವರ್ಷದ ಬಳಿಕ ನೆನಪಿಸಿಕೊಂಡ ರಶ್ಮಿಕಾ: ಮನತುಂಬಿ ಹಾರೈಸಿದ ರಕ್ಷಿತ್ ಶೆಟ್ಟಿ

  ನಾವು ಒಳ್ಳೆಯದನ್ನೇ ಬಯಸುತ್ತೇವೆ

  ನಾವು ಒಳ್ಳೆಯದನ್ನೇ ಬಯಸುತ್ತೇವೆ

  ''ನಾವ್ ಹುಡುಗ್ರೇ ‌ಹಾಗೆ ಒಂದು ಸಲ ಒಂದು ಹುಡುಗಿನ ಇಷ್ಟ ಪಟ್ಟರೆ ಮುಗಿತು ಅವಳುಸಿಗ್ಲಿ ಸಿಗ್ದೆ ಇರಲಿ. ನಮ್ಮ ಕೊನೆಉಸಿರಿನವರೆಗೂ ಅವಳಿಗೆ ಒಳ್ಳೆಯದೇ ಬಯಸುತ್ತೇವೆ.'' ಎಂದು ಮತ್ತೊಬ್ಬ ಅಭಿಮಾನಿ ಸಾಮಾನ್ಯ ಹುಡುಗರ ಬಗ್ಗೆ ಮಾತನಾಡಿದ್ದಾರೆ.

  ಬೇರೆ ಏನೂ ರೂಪಿಸುವುದು ಬೇಡ

  ಬೇರೆ ಏನೂ ರೂಪಿಸುವುದು ಬೇಡ

  ''ಸ್ನೇಹಿತರೆ ಬೇರೆ ಏನೋ ಅರ್ಥ ಕಲ್ಪಿಸುವುದು ಬೇಡ. ಅಭದ್ರತೆ ಇಲ್ಲದೇ ರಕ್ಷಿತ್ ಅವರನ್ನು ಡ್ಯಾಗ್ ಮಾಡಿದ್ದಾರೆ. ಒಬ್ಬ ಸಂಭಾವಿತ ವ್ಯಕ್ತಿಯಂತೆ ರಕ್ಷಿತ್ ಪ್ರತಿಕ್ರಿಯಿಸಿದ್ದಾರೆ. ಇಬ್ಬರು ವೃತ್ತಿಪರ ಜೀವನವನ್ನು ಉತ್ತಮವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಅವರನ್ನು ಗೌರವಿಸೋಣ. ರಶ್ಮಿಕಾ ಬಹಳಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ನಮಗೆ ಸರಿಯಾಗಿ ಗೊತ್ತಿಲ್ಲ ಅವರೊಬ್ಬರ ನಡುವೆ ಏನಾಗಿದೆ ಅಂತ'' ಎಂದು ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಾರೆ.

  100 ಮಿಲಿಯನ್ ಕಂಡ ಬೆಳಗೆದ್ದು ಹಾಡು: ರಶ್ಮಿಕಾ ಮಂದಣ್ಣ ಟ್ವೀಟ್100 ಮಿಲಿಯನ್ ಕಂಡ ಬೆಳಗೆದ್ದು ಹಾಡು: ರಶ್ಮಿಕಾ ಮಂದಣ್ಣ ಟ್ವೀಟ್

  ನೀವಿಬ್ರು ಒಂದಾದ್ರೆ ಖುಷಿಯಾಗುತ್ತೆ

  ನೀವಿಬ್ರು ಒಂದಾದ್ರೆ ಖುಷಿಯಾಗುತ್ತೆ

  - ಹುಡುಗ್ರು ಇಷ್ಟ ಪಟ್ಟ ಹುಡುಗಿಗೆ ಯಾವತ್ತೂ ಒಳ್ಳೆಯದನ್ನೆ ಬಯಸುತ್ತಾರೆ.ರಕ್ಷಿತಣ್ಣ ನೀ

  - ನಾವ್ ಹುಡುಗ್ರು ಪ್ರೀತಿನೆ ಹಾಗೆ ನಮ್ ಹುಡುಗಿ ಎಲ್ಲಿದ್ದರೂ ಚೆನ್ನಾಗಿರಲಿ ಅಂತ ಆಶಿಸುತ್ತೇವೆ

  - ಯಾಕೊ ಎಲ್ಲಾ ಕೂತ್ ಮಾತಾಡ್ಬೇಕ್ ಅನ್ಸಕತ್ತತ್ರೀ

  - ನೀವಿಬ್ರು ಒಂದಾದ್ರೆ ಇಡೀ ಕರ್ನಾಟಕಾನೇ ಖುಷಿಯಾಗುತ್ತೆ ರೀ...

  English summary
  Netizens reaction after Rashmika mandanna and Rakshith shetty tweet about belageddu song 100 million.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X