For Quick Alerts
  ALLOW NOTIFICATIONS  
  For Daily Alerts

  ನೋಡಿದ್ರು ಕಷ್ಟ, ನೋಡದೇ ಇದ್ರು ಕಷ್ಟ...ಯಾರಿಗೆ ಹೇಳೋಣ ಈ ಪ್ರಾಬ್ಲಂ

  |

  ಕೋವಿಡ್ ಲಸಿಕೆ ಹಾಕಿಸುವಾಗ ಫೋಟೋನಾ ಯಾರು ಕ್ಲಿಕ್ ಮಾಡೋದು? ಫೋಟೋ ತೆಗೆಯುವುದಕ್ಕೆ ಒಬ್ಬರನಾ ಕರೆದುಕೊಂಡು ಹೋಗ್ಬೇಕಾ ಅಥವಾ ಲಸಿಕೆ ಕೇಂದ್ರದಲ್ಲಿಯೇ ಫೋಟೋಗ್ರಾಫರ್ ಇರ್ತಾರಾ ಎಂದು ಲಸಿಕೆ ಹಾಕಿಸಿಕೊಳ್ಳದವರು ಕೇಳ್ತಿದ್ದಾರೆ.

  ಏಕಂದ್ರೆ, ಕೋವಿಡ್ ಲಸಿಕೆ ಪಡೆಯುತ್ತಿರುವ ವೇಳೆ ಕ್ಲಿಕ್ ಮಾಡಲಾಗಿರುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಾಟ್‌ ಟಾಪಿಕ್ ಆಗಿವೆ. ಇತ್ತೀಚಿಗಷ್ಟೆ ಯುವಕನೊಬ್ಬ ಲಸಿಕೆ ಪಡೆಯುತ್ತಿರುವ ವೇಳೆ ಇಂಜೆಕ್ಷನ್ ಹಾಕುತ್ತಿರುವ ನರ್ಸ್‌ ಕಡೆ ಬಹಳ ಇಷ್ಟಪಟ್ಟು ನೋಡುವಂತೆ ನೋಟ ಬೀರಿದ್ದ. ಆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಅದೇಷ್ಟೋ ಕವನಗಳ ಸೃಷ್ಟಿಗೆ ಕಾರಣ ಆಗಿತ್ತು.

  ಲಸಿಕೆ ಪಡೆದ ಪ್ರಶಾಂತ್ ನೀಲ್: ಫೋಟೋಗೆ ಬರ್ತಿದೆ ಮಜವಾದ ಕಾಮೆಂಟ್ಸ್ಲಸಿಕೆ ಪಡೆದ ಪ್ರಶಾಂತ್ ನೀಲ್: ಫೋಟೋಗೆ ಬರ್ತಿದೆ ಮಜವಾದ ಕಾಮೆಂಟ್ಸ್

  ಇದೀಗ, ಕೆಜಿಎಫ್, ಸಲಾರ್ ಅಂತಹ ದೊಡ್ಡ ಚಿತ್ರಗಳನ್ನು ನಿರ್ದೇಶನ ಮಾಡುತ್ತಿರುವ ಪ್ರಶಾಂತ್ ನೀಲ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದು, ಸಣ್ಣ ಮಕ್ಕಳಂತೆ ಭಯ ಪಡುತ್ತಿರುವ ಫೋಟೋ ಟ್ರೆಂಡ್ ಆಗಿದೆ. ಈ ಫೋಟೋ ಮತ್ತು ಆ ಯುವಕನ ಫೋಟೋ ಹೋಲಿಕೆ ಮಾಡಿರುವ ನೆಟ್ಟಿಗರು ಸಖತ್ ಎಂಜಾಯ್ ಮಾಡ್ತಿದ್ದಾರೆ. ಮುಂದೆ ಓದಿ...

  ನೋಡೋದೆ ಬೇಡ ನಿರ್ಧರಿಸಿರಬೇಕು

  ನೋಡೋದೆ ಬೇಡ ನಿರ್ಧರಿಸಿರಬೇಕು

  ಯುವಕ ನರ್ಸ್ ಕಡೆ ನೋಡುತ್ತಿದ್ದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಯಿತು. ಈ ಪೋಸ್ಟ್ ನೋಡಿದ್ಮೇಲೆ ಬಹುಶಃ ನರ್ಸ್‌ ಮುಖ ನೋಡೋದೆ ಬೇಡ ಅಂತ ನೀಲ್ ನಿರ್ಧರಿಸಿ ಹೋದಂತಿದೆ ಎಂದು ನೆಟ್ಟಿಗರು ಟ್ರೋಲ್ ಮಾಡ್ತಿದ್ದಾರೆ.

  ಸಿನಿಮಾ ನೋಡಿದ್ರೆ ಭಯ ಆಗುತ್ತೆ, ನೀವು ನೋಡಿದ್ರೆ....

  ಸಿನಿಮಾ ನೋಡಿದ್ರೆ ಭಯ ಆಗುತ್ತೆ, ನೀವು ನೋಡಿದ್ರೆ....

  'ಉಗ್ರಂ', 'ಕೆಜಿಎಫ್' ಅಂತಹ ಚಿತ್ರಗಳಲ್ಲಿ ರೌಡಿಗಳನ್ನು, ಖಳನಾಯಕರನ್ನು ಎಷ್ಟು ಭಯಾನಕವಾಗಿ ತೋರಿಸಿದ್ದೀರಾ. ಇಂತಹ ಚಿತ್ರಗಳನ್ನು ಮಾಡಿರುವ ನಿರ್ದೇಶಕ ಕೇವಲ ಇಂಜೆಕ್ಷನ್‌ಗೆ ಹೆದರುವುದಾ? ಎಂದು ನೆಟ್ಟಿಗರು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ.

  ಸಿನಿಮಾದಲ್ಲಿ ವೈಲೆಂಟ್, ಹೊರಗೆ ಸೈಲೆಂಟ್

  ಸಿನಿಮಾದಲ್ಲಿ ವೈಲೆಂಟ್, ಹೊರಗೆ ಸೈಲೆಂಟ್

  ಪ್ರಶಾಂತ್ ನೀಲ್ ಸಿನಿಮಾಗಳನ್ನು ನೋಡಿದ್ರೆ ಇವರು ತುಂಬಾ ಸಿರೀಯಸ್ ವ್ಯಕ್ತಿ. ಬಹಳ ಗಂಭೀರವಾಗಿ ಇರಬಹುದು, ಯಾವುದಕ್ಕೂ ಅಂಜದ ಮನುಷ್ಯ ಎಂಬ ಭಾವನೆ ಮೂಡುತ್ತದೆ. ಆದರೆ, ಇಂಜೆಕ್ಷನ್ ಕಂಡ್ರೆ ಇಷ್ಟೊಂದು ಭಯ ಪಡ್ತಾರೆ ಅಂದ್ರೆ ಇವರು ಸಖತ್ ಸೈಲೆಂಟ್. ಸಿನಿಮಾದಲ್ಲಿ ಮಾತ್ರ ವೈಲೆಂಟ್ ಎಂಬ ಮೇಮ್ಸ್ ಹರಿದಾಡುತ್ತಿದೆ.

  ಸಿಎಂ ಸಾಹೇಬ್ರು ರಾಜೀನಾಮೆ ಕೊಡಬೇಕಂತೆ-ಮಠ ಡೈರೆಕ್ಟರ್ ರಿಂದ ಬಿಎಸ್ ವೈಗೆ ಫುಲ್ ಕ್ಲಾಸ್ | Guru prasad | Filmibeat Kannada
  ನೀನು ಚುಚ್ಚಿದ್ದು ತೋಳಿಗೋ, ಹೃದಯಕ್ಕೋ

  ನೀನು ಚುಚ್ಚಿದ್ದು ತೋಳಿಗೋ, ಹೃದಯಕ್ಕೋ

  ಲಸಿಕೆ ಹಾಕುವ ವೇಳೆ ಯುವಕ ನರ್ಸ್ ಮುಖ ನೋಡುತ್ತಿದ್ದ ಫೋಟೋಗೆ ಬಹಳ ಕಾಮೆಂಟ್‌ಗಳು ಬಂದಿದ್ದವು. ಕವನಗಳೇ ಸೃಷ್ಟಿಯಾದವು. ನೋಡಿದವರೆಲ್ಲಾ ಎರಡೆರಡು ಸಾಲು ಗೀಚಿ ಹೋಗಿದ್ದರು. ಒಬ್ಬಾಕೆ, ನಾನೇ ಆ ನರ್ಸ್ ಆಗಬಾರದಿತ್ತೇ'' ಎಂದು ಕಾಮೆಂಟ್ ಮಾಡಿದ್ದರು. ಮತ್ತೊಬ್ಬರು ''ನೀನು ಚುಚ್ಚಿದ್ದು ತೋಳಿಗೋ ಅಥವಾ ಹೃದಯಕ್ಕೋ'' ಎಂದಿದ್ದರು.

  English summary
  Netizens share hilarious memes on KGF Director Prashant Neel gets his first dose of Covid-19 vaccine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X