twitter
    For Quick Alerts
    ALLOW NOTIFICATIONS  
    For Daily Alerts

    ತೆರಿಗೆದಾರರ ಹಣವನ್ನು ಚಿತ್ರೋದ್ಯಮದ ಮೇಲೆ ಸುರಿಯಬೇಕೇ? ಫಿಲಂ ಸಿಟಿ ಘೋಷಣೆಗೆ ಅಸಮಾಧಾನ

    |

    ಕನ್ನಡ ಚಿತ್ರೋದ್ಯಮಕ್ಕೆ ನೆರವಾಗಲು ಫಿಲಂ ಸಿಟಿ ನಿರ್ಮಾಣಕ್ಕೆ 500 ಕೋಟಿ ರೂ. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಬಜೆಟ್ ಮಂಡನೆ ವೇಳೆ ಘೋಷಿಸಿದ್ದರು. ರಾಜ್ಯದಲ್ಲಿ ಸಿನಿಮ ಶೂಟಿಂಗ್‌ಗೆ ಅನುಕೂಲಕರವಾದ ಫಿಲಂ ಸಿಟಿ ಇಲ್ಲದ ಕಾರಣ ಹೊರ ರಾಜ್ಯಗಳ ಫಿಲಂ ಸಿಟಿಯನ್ನು ಅವಲಂಬಿಸಬೇಕಿದೆ.

    ಬೆಂಗಳೂರು, ಮೈಸೂರು, ರಾಮನಗರ ಹೀಗೆ ಪ್ರತಿ ಬಾರಿಯೂ ಬೇರೆ ಬೇರೆ ಸರ್ಕಾರಗಳ ಮುಖ್ಯಮಂತ್ರಿಗಳು ಬಜೆಟ್ ಮಂಡನೆ ವೇಳೆ ಫಿಲಂ ಸಿಟಿ ನಿರ್ಮಾಣದ ಸ್ಥಳ ಬದಲಾಗುತ್ತಿದೆ. ಹತ್ತು ಹದಿನೈದು ವರ್ಷಗಳಿಂದ ಫಿಲಂ ಸಿಟಿ ನಿರ್ಮಾಣದ ಘೋಷಣೆ ಕೇಳಿಬಂದಿದ್ದರೂ ಸ್ಥಳದ ಗೊಂದಲದಿಂದ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಈಗ ಪುನಃ ಬಜೆಟ್ ವೇಳೆ 500 ಕೋಟಿ ರೂ.ಅನುದಾನ ಘೋಷಣೆಯ ಹಿನ್ನೆಲೆಯಲ್ಲಿ ಈ ಸಂಗತಿ ಮತ್ತೆ ಚರ್ಚೆಗೆ ಬಂದಿದೆ.

    ರಾಜ್ಯ ಬಜೆಟ್ ನಲ್ಲಿ ಚಿತ್ರರಂಗಕ್ಕೆ ಖುಷಿ ಸುದ್ದಿ ನೀಡಿದ ಯಡಿಯೂರಪ್ಪರಾಜ್ಯ ಬಜೆಟ್ ನಲ್ಲಿ ಚಿತ್ರರಂಗಕ್ಕೆ ಖುಷಿ ಸುದ್ದಿ ನೀಡಿದ ಯಡಿಯೂರಪ್ಪ

    ಚಿತ್ರರಂಗದ ಅನೇಕರು ಈ ನಿರ್ಧಾರವನ್ನು ಸ್ವಾಗತಿಸಿದ್ದರೆ, ಇನ್ನು ಅನೇಕರು ಖಾಸಗಿ ವ್ಯಾಪಾರ ಚಟುವಟಿಕೆಗೆ ಸರ್ಕಾರ ಏಕೆ ಸಹಾಯ ಮಾಡಬೇಕು? ಇದೇ ಹಣವನ್ನು ಭಾಷೆಯ ಬೆಳವಣಿಗೆಗೆ ಬಳಸಿ ಎಂದು ಆಗ್ರಹಿಸಿದ್ದಾರೆ. ಈ ಕುರಿತು ಯಾರು ಏನು ಹೇಳಿದ್ದಾರೆ? ಮುಂದೆ ಓದಿ...

    ಹಣ ವ್ಯರ್ಥ ಮಾಡುವ ಪ್ರಯತ್ನ

    ಹಣ ವ್ಯರ್ಥ ಮಾಡುವ ಪ್ರಯತ್ನ

    ನಿಮ್ಮ ಚಿತ್ರರಂಗ ಇಷ್ಟು ದುರ್ಬಲವಾಗಿರುವಾಗ ಫಿಲಂ ಸಿಟಿಯೊಂದನ್ನು ನಿರ್ಮಿಸುವುದರ ಬಗ್ಗೆ ಯಾಕೆ ಯಾರಾದರೂ ಆಸಕ್ತಿ ಹೊಂದುತ್ತಾರೆ? ಚಿತ್ರರಂಗವನ್ನು ಬಲಪಡಿಸದೆ ಇದ್ದರೆ ಈ ಎಲ್ಲವೂ ಹಣವನ್ನು ವ್ಯರ್ಥ ಮಾಡುವ ಪ್ರಯತ್ನವಷ್ಟೇ. ಈ ಗುತ್ತಿಗೆ ಪಡೆಯುವ ಸರ್ಕಾರಿ ಅಧಿಕಾರಿಗಳಿಗಷ್ಟೇ ಇದರಿಂದ ಲಾಭ ಎಂದು ಗಣೇಶ್ ಚೇತನ್ ಟೀಕಿಸಿದ್ದಾರೆ.

    50 ಕೋಟಿ ಭಾಷೆ ಮೇಲೆ ವಿನಿಯೋಗಿಸಿ

    50 ಕೋಟಿ ಭಾಷೆ ಮೇಲೆ ವಿನಿಯೋಗಿಸಿ

    ಕರ್ನಾಟಕ ಸರ್ಕಾರವು ಫಿಲಂ ಸಿಟಿ ಮೇಲೆ 500 ಕೋಟಿ ರೂ ವೆಚ್ಚ ಮಾಡುವ ಬಗ್ಗೆ ಹೇಳುತ್ತಿದೆ. ಕನ್ನಡ ಸಿನಿಮಾ ಉದ್ಯಮವು ವಾಣಿಜ್ಯ ಉದ್ಯಮ. ಅದಕ್ಕೆ ಈ ರೀತಿ ಸರ್ಕಾರದಿಂದ ಸಹಾಯದ ಅಗತ್ಯವಿಲ್ಲ. ಇದರ ಬದಲು ರಾಜ್ಯ ಸರ್ಕಾರ 50 ಕೋಟಿ ರೂ. ಹಣವನ್ನು ಕನ್ನಡ ಭಾಷೆಯ ಮೇಲೆ ವಿನಿಯೋಗಿಸಿದರೆ 6 ಕೋಟಿ ಕನ್ನಡಿಗರಿಗೆ ಸಹಾಯವಾಗುತ್ತಿತ್ತು ಎಂದು ಹೇಳಿದ್ದಾರೆ.

    ಫಿಲ್ಮ್ ಸಿಟಿ ಮೈಸೂರಿನಲ್ಲಿ ಆದರೆ ಒಳ್ಳೆಯದು: ನಟ ಯಶ್ಫಿಲ್ಮ್ ಸಿಟಿ ಮೈಸೂರಿನಲ್ಲಿ ಆದರೆ ಒಳ್ಳೆಯದು: ನಟ ಯಶ್

    ಸಿನಿಮಾ ಮಂದಿ ಮೇಲೆ ಒಲವೇಕೆ?

    ಸಿನಿಮಾ ಮಂದಿ ಮೇಲೆ ಒಲವೇಕೆ?

    ರಾಜ್ಯ ಸರಕಾರ ಹೆಚ್ಚಿನ ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಕೋಟಿಗಟ್ಟಲೆ ಹಣವನ್ನು ಫಿಲ್ಮ್ ಸಿಟಿಗಾಗಿ ಬಳಸುವುದು ಜುಟ್ಟಿನ ಮಲ್ಲಿಗೆ ಹೂಗಿಂತಲೂ ಕಡೆ. ಸಿನಿಮಾದವರು ಖಾಸಗಿ ಉದ್ಯಮ ನಡೆಸುವವವರು, ಕನ್ನಡ-ಕರ್ನಾಟಕದ ಹಿತದೃಷ್ಟಿಗೆ ವಿರುದ್ದವಾಗಿ ಕೆಲಸ ಮಾಡುವವರು. ಸರಕಾರಕ್ಕೆ ಇನ್ಯಾರ ಪರವಾಗಿಯೂ ಇಲ್ಲದ ಒಲವು ಸಿನಿಮಾ ಮಂದಿಗೇಕೆ ? ಎಂದು ಶ್ರುತಿ ಎಚ್ ಎಂ ಎಂಬುವವರು ಪ್ರಶ್ನಿಸಿದ್ದಾರೆ.

    ಉನ್ನತ ಶಿಕ್ಷಣಕ್ಕೆ ಕೊಡಬೇಕಿತ್ತು

    ಉನ್ನತ ಶಿಕ್ಷಣಕ್ಕೆ ಕೊಡಬೇಕಿತ್ತು

    ನೂರಾರು ಕೋಟಿ ರೂಪಾಯಿ ದುಡ್ಡನ್ನು ಕನ್ನಡ ಚಿತ್ರರಂಗಕ್ಕೆ ಕೊಡುವ ಬದಲು ಅದೇ ದುಡ್ಡನ್ನು ಕನ್ನಡದಲ್ಲಿ ಉನ್ನತ ಶಿಕ್ಷಣ ರೂಪಿಸಲು ಕೊಟ್ಟಿದ್ದರೆ ಹೆಚ್ಚು ಸೂಕ್ತವಾಗಿತ್ತು.. ಎಂದು ಅರುಣ್ ಜಾವಗಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ತೆರಿಗೆದಾರರ ಹಣವೇಕೆ?

    ತೆರಿಗೆದಾರರ ಹಣವೇಕೆ?

    ಕನ್ನಡ ಚಿತ್ರೋದ್ಯಮ ಒಂದು ಲಾಭದಾಯಕ ಖಾಸಗಿ ಸಂಸ್ಥೆ. ಒಂದು ಖಾಸಗಿ ಸಂಸ್ಥೆಯ ಮೇಲೆ ಕರ್ನಾಟಕ ಸರ್ಕಾರ ತೆರಿಗೆದಾರರ ಹಣವನ್ನೇಕೆ ಸುರಿಯಬೇಕು? ಚಿತ್ರರಂಗ ಕನ್ನಡ ಅಥವಾ ಕನ್ನಡಿಗರನ್ನು ಪ್ರತಿನಿಧಿಸುವುದಿಲ್ಲ. ಅವರ ಸಿನಿಮಾಗಳನ್ನು ನೋಡಲು ಜನರು ಹಣ ವ್ಯಯಿಸುತ್ತಾರೆ. ಅದು ಒಂದು ಬಿಜಿನೆಸ್ ಅಷ್ಟೇ ಎಂದು ರಾಮಚಂದ್ರ ಎಂ. ಹೇಳಿದ್ದಾರೆ.

    ಫಿಲಂ ಸಿಟಿ ಅನಿವಾರ್ಯವಾಗಿತ್ತು

    ಫಿಲಂ ಸಿಟಿ ಅನಿವಾರ್ಯವಾಗಿತ್ತು

    ಸಿನಿಮಾ ನಿರ್ಮಾಣಕ್ಕೆ ಫಿಲಂಸಿಟಿ ತುಂಬ ಅನಿವಾರ್ಯವಾಗಿತ್ತು! ಆಂಧ್ರದಲ್ಲಿ ರಾಮೋಜಿರಾವ್ ಫಿಲಂಸಿಟಿ! ದೇಶದ ಅನೇಕ ಭಾಷೆ ತನ್ನತ್ತ ಸೆಳೆದಿತ್ತು! ಇಂದು ಕನ್ನಡನಾಡಲ್ಲಿ ಅಂಥ ಸ್ಟುಡಿಯೋಗೆ 500 ಕೋಟಿ ಮೀಸಲಿಟ್ಟ ಹೆಮ್ಮೆಯ ಕನ್ನಡಿಗ ಯಡಿಯೂರಪ್ಪ ಅವರಿಗೆ ಚಿತ್ರರಂಗದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. ಚಿತ್ರರಂಗ ಇರುವವರೆಗು ನೀವು ಅಜರಾಮರ ಶರಣು ಶರಣಾರ್ಥಿ ಎಂದು ನಟ ಜಗ್ಗೇಶ್ ಸ್ವಾಗತಿಸಿದ್ದರು.

    ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ...

    ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ...

    ಅಂಧ ಭಕ್ತರ ಭಕುತಿಗೆ ಮೆಚ್ಚಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬಂತೆ ಜನತೆಯ ಕಷ್ಟಕ್ಕೆ ಆಗದಿದ್ದರೂ ಸಿನಿಮಾ ನಟರಿಗಾಗಿ ಸಿಎಂ ನಟಿಸುತ್ತಿರುವುದು ಅಸಮಂಜಸ. ಕೋಟಿ ಕೋಟಿ ಸಂಭಾವನೆ ಪಡೆಯುವ ನಟರಿಗೆ ಮಾಡಬಹುದು ಫಿಲಂ ಸಿಟಿ. ಜನಸಾಮಾನ್ಯರ ತೆರಿಗೆ ಹಣ ಬೇಕಿತ್ತಾ ಇದಕ್ಕೆಲ್ಲ? ಎಂದ ಜಗ್ಗೇಶ್ ಟ್ವೀಟ್‌ಗೆ ನಿತಿನ್ ಬೆಳವಾಯಿ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

    English summary
    People in social media slams governement for announcing Rs 500 crore for KFI Film City in state budget.
    Tuesday, June 30, 2020, 11:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X