ಕನ್ನಡ ತಪ್ಪಾಗಿ ಬರೆದ ನಿಖಿಲ್ ಕುಮಾರ್: ಕನ್ನಡ ಪಾಠ ಮಾಡಿದ ನೆಟ್ಟಿಗರು

ನಟ-ರಾಜಕಾರಣಿ ನಿಖಿಲ್ ಕುಮಾರ್ ತಮ್ಮ ಮುಂದಿನ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ. 'ರೈಡರ್' ಚಿತ್ರಕ್ಕಾಗಿ ಲೇಹ್ ಲಡಾಕ್‌ಗೆ ತೆರಳಿರುವ ನಿಖಿಲ್ ಫೇಸ್‌ಬುಕ್‌ನಲ್ಲಿ ಸುಂದರವಾದ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು.

ಆ ಪೋಸ್ಟ್‌ಗೆ ಟ್ರೋಲ್‌ಗೆ ಗುರಿಯಾಗಿತ್ತು. ಏಕಂದ್ರೆ, ಲೇಹ್ ಲಡಾಕ್‌ನ ಅದ್ಭುತ ಫೋಟೋ ಹಂಚಿಕೊಂಡಿದ್ದ ನಿಖಿಲ್ ಕನ್ನಡದಲ್ಲಿ ವರ್ಣನೆ ಮಾಡಿ ಬರೆದುಕೊಂಡಿದ್ದರು. ಆದರೆ, ಕನ್ನಡದ ಪದ ಬಳಕೆಯಲ್ಲಿ ತಪ್ಪಿದ್ದ ಕಾರಣ ನೆಟ್ಟಿಗರು ಟ್ರೋಲ್ ಮಾಡಿದರು.

''ರೈಡರ್ ಚಿತ್ರ ಚಿತ್ರೀಕರಣದ ವೇಳೆ ಲೇ ಲಡಾಖ್ ನಲ್ಲಿ ಕಂಡುಬಂದಂತಹ ಅದ್ಭುತ ದೃಶ್ಯ...'' ಎಂದು ಪೋಸ್ಟ್ ಹಾಕಲಾಗಿದೆ. ಆದರೆ, ಅದಕ್ಕೂ ಮುಂಚೆ ''ರೈಡರ ಚಿತ್ರ ಚಿತ್ರಿಕರಣ ವೇಳೆ ಲೇ ಲಡಾಕನಲ ಕಂಡು ಬಂದಂತ ಅದ್ಬುತ ಮನಕಲಕುವಾ ದೃಶ್ಯ'' ಎಂದು ಬರೆಯಲಾಗಿತ್ತು.

Netizens trolled Nikhil Kumaraswamy for using wrong Kannada word

ಸೆಲೆಬ್ರಿಟಿಗಳನ್ನು ಸದಾ ಫಾಲೋ ಮಾಡುವ ಅಭಿಮಾನಿಗಳು ಸಣ್ಣಪುಟ್ಟ ತಪ್ಪುಗಳಾದರೂ ಅದನ್ನು ಎತ್ತಿ ತೋರಿಸುತ್ತಾರೆ. ಅದರ ವಿರುದ್ಧ ಟೀಕೆ ಮಾಡ್ತಾರೆ. ಅದರಂತೆ ನಿಖಿಲ್ ಕುಮಾರ್ ಕನ್ನಡವನ್ನು ತಪ್ಪಾಗಿ ಬರೆದಿದ್ದಕ್ಕಾಗಿ ಟೀಕಿಸಿದ್ದಾರೆ.

ಕನ್ನಡವನ್ನು ಸರಿಯಾಗಿ ಬಳಸಿ ಎಂದು ಎಚ್ಚರಿಸಿದ್ದಾರೆ. ಜೊತೆಗೆ ವಾಕ್ಯ ಬಳಕೆ ಬಗ್ಗೆಯೂ ಪಾಠ ಮಾಡಿದ್ದಾರೆ. ''ಅದೊಂದು ಸುಂದರವಾದ ಸ್ಥಳ, ಮನಮೋಹಕವಾಗಿದೆ, ಅದ್ಭುತವಾಗಿದೆ ಅಂದ್ರೆ ಸರಿ. ಆದರೆ, ಮನಕಲುಕುವ ದೃಶ್ಯ ಏನಿದೆ'' ಎಂದು ಪ್ರಶ್ನಿಸಿದ್ದಾರೆ.

ಕೂಡಲೇ ಈ ಬಗ್ಗೆ ತಿಳಿದು ಎಚ್ಚೆತ್ತುಕೊಂಡ ನಿಖಿಲ್ ಕುಮಾರ್ ಹಳೆಯ ಕ್ಯಾಪ್ಷನ್ ತೆಗೆದು ಹಾಕಿ ಹೊಸದಾಗಿ ವಾಕ್ಯ ಬಳಸಿದ್ದಾರೆ. ಆದರೂ, ನಿಖಿಲ್ ಹಾಕಿದ್ದ ಹಳೇ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರೈಡರ್ ಸಿನಿಮಾ ಬಗ್ಗೆ....

ವಿಜಯ್ ಕುಮಾರ್ ಕೊಂಡಾ ನಿರ್ದೇಶನದ ರೈಡರ್ ಚಿತ್ರದಲ್ಲಿ ನಿಖಿಲ್ ಕುಮಾರ್ ಮತ್ತು ಕಾಶ್ಮೀರ ಪರದೇಶಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆಗೆ ದತ್ತಣ್ಣ, ಅಚ್ಯುತ್ ಕುಮಾರ್, ಶಿವರಾಜ್ ಕೆ ಆರ್ ಪೇಟೆ, ಅನುಷಾ ರೈ, ಸಂಪದ ಹುಲಿವನ, ರಾಜೇಶ್ ನಟರಂಗ, ಶೋಭರಾಜ್, ನಿಹಾರಿಕ ಸೇರಿದಂತೆ ಹಲವರು ತಾರಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

More from Filmibeat

English summary
Netizens trolled Actor-politician Nikhil Kumaraswamy for using wrong kannada word.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X