ಸ್ವಲ್ಪನು ಕಾಮನ್ ಸೆನ್ಸ್ ಇಲ್ವಾ..?, ನಟಿ ರಚಿತಾ ವಿರುದ್ಧ ನೆಟ್ಟಿಗರ ಕಿಡಿ
ನಟ ಅಜಯ್ ರಾವ್ ನಟನೆಯ 'ಐ ಲವ್ ಯೂ ರಚ್ಚು' ಸಿನಿಮಾದ ಚಿತ್ರೀಕರಣ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ ಮೃತಪಟ್ಟಿದ್ದಾರೆ ಘಟನೆ ಇಡೀ ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ. ಈ ಸಂಬಂಧ ಈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ಇನ್ನು ನಿರ್ಮಾಪಕ ಗುರುದೇಶಪಾಂಡೆ ಪರಾರಿಯಾಗಿದ್ದು, ಇದುವರೆಗೂ ಪೊಲೀಸರ ಸಂಪರ್ಕಕ್ಕೆ ಸಿಕ್ಕಿಲ್ಲ. ಆದರೆ ಮೃತ ವಿವೇಕ್ ಕುಟುಂಬದ ಜೊತೆ ಮಾತನಾಡಿದ್ದು, 10 ಲಕ್ಷ ಪರಿಹಾರ ಕೊಡುವುದಾಗಿ ಹೇಳಿರುವ ಮಾಹಿತಿ ತಿಳಿದುಬಂದಿದೆ.
Recommended Video
ಇನ್ನು ಈ ಬಗ್ಗೆ ನಟ ಅಜಯ್ ರಾವ್ ಮಾತನಾಡಿ ಕುಟುಂಬದ ಜೊತೆ ಮಾತನಾಡುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದ್ದರು. ಅಲ್ಲದೆ ಘಟನೆ ನಡೆದ ಸ್ಥಳದಲ್ಲಿ ನಟ ಅಜಯ್ ರಾವ್ ಕೂಡ ಇದ್ದರು. ಆದರೆ ತನ್ನದೆ ಸಿನಿಮಾದ ಚಿತ್ರೀಕರಣ ವೇಳೆ ಇಂಥ ದುರಂತ ನಡೆದರೂ ನಟಿ ರಚಿತಾ ರಾಮ್ ಯಾವುದೇ ಪ್ರತಿಕ್ರಿಯೆ ನೀಡರಲಿಲ್ಲ. ಆದರೆ ಇಂಥ ಸಮಯದಲ್ಲೂ ರಚಿತಾ ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋ ಶೇರ್ ಮಾಡಿದ್ದರು. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದ್ದು, ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಳಿಕ ವಿವೇಕ್ ಸಾವಿಗೆ ಶ್ರದ್ಧಾಂಜಲಿ ಕೋರಿ ರಚಿತಾ ಟ್ವೀಟ್ ಮಾಡಿದರು. ಮುಂದೆ ಓದಿ..

ರಚಿತಾ ವಿರುದ್ಧ ನೆಟ್ಟಿಗರು ಕಿಡಿ
ನಟಿ ರಚಿತಾ ರಾಮ್ ತನ್ನದೆ ಸೆಟ್ ನಲ್ಲಿದ್ದ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ವಿವೇಕ್ ಸಾವಿನ ಕುರಿತು ಪೋಸ್ಟ್ ಮಾಡುವ ಬದಲು ರಚಿತಾ, ಇಂದು ಬೆಳಗ್ಗೆ ತನ್ನ ಫೋಟೋ ಶೇರ್ ಮಾಡಿದ್ದರು. ರಚಿತಾ ಫೋಟೋ ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ಸರಿಯಾಗಿ ತರಾಟೆ ತೆಗೆದುಕೊಂಡಿದ್ದಾರೆ.

ನೆಟ್ಟಿರ ಕಾಮೆಂಟ್
ನಿಮ್ಮದೇ ಚಿತ್ರೀಕರಣ ಸೆಟ್ ನಲ್ಲಿ ಒಂದು ಜೀವ ಹೋಗಿದೆ. ಹೀಗಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿದೆ ನಿಮ್ಮ ಫೋಟೋ ಶೇರ್ ಮಾಡುತ್ತಿದ್ದೀರಾಲ್ಲಾ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಫೈಟರ್ ಸಾವಿನ ಬಗ್ಗೆ ರಚಿತಾ ಯಾವುದೇ ಪೋಸ್ಟ್ ಮಾಡಿರಲಿಲ್ಲ. 'ಲವ್ ಯು ರಚ್ಚು' ಸಿನಿಮಾದ ದುರ್ಘಟನೆ ಇಡೀ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ್ದರೂ ರಚಿತಾ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ.

'ಸ್ವಲ್ಪನು ಕಾಮನ್ ಸೆನ್ಸ್ ಇಲ್ವಾ..'
ರಚಿತಾ ನಡೆಯನ್ನು ಟೀಕಿಸಿರುವ ನೆಟ್ಟಿಗರು ಬಿಸಿ ಮುಟ್ಟಿಸಿದ್ದಾರೆ. 'ಸ್ವಲ್ಪನು ಕಾಮನ್ ಸೆನ್ಸ್ ಇಲ್ವಾ ಮೇಡಂ ನಿಮಗೆ ಅಲ್ಲಿ ಒಂದು ಜೀವ ಹೋಗಿದೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ ಮತ್ತೊಬ್ಬ ವ್ಯಕ್ತಿ, 'ತಾವೇ ನಟಿಸಿರುವ ಚಿತ್ರತಂಡದಿಂದ ಅವಗಡವಾಗಿದೆ. ಅದರ ಬಗ್ಗೆ ಯೋಚಿಸೋದು ಬಿಟ್ಟು...... ಇ ತರ' ಎಂದು ಹೇಳಿದ್ದಾರೆ.

ಯಾವಾಗ ಫೋಟೋ ಹಾಕಬೇಕು ಎನ್ನುವುದನ್ನು ತಿಳಿದುಕೊಳ್ಳಿ
'ಫೋಟೋ ಹಾಕೋದು ತಪ್ಪಲ್ಲ ಆದರೆ ಈ ಸಮಯದಲ್ಲಿ ಅಪ್ ಲೋಡ್ ಮಾಡುತ್ತಿರುವುದು ದೊಡ್ಡ ತಪ್ಪು. ಒಬ್ಬ ಫೈಟರ್ ನ ಪ್ರಾಣ ಹೋಗಿದೆ. ಈ ರೀತಿ ಚೈಲ್ಡ್ ತರ ಫೋಟೋ ಹಾಕೋದು ಈ ಸಮಯದಲ್ಲಿ ಸರಿಯಲ್ಲ' ಎಂದು ಬುದ್ದಿವಾದ ಹೇಳುತ್ತಿದ್ದಾರೆ.

ನೆಟ್ಟಿಗರ ತರಾಟೆ ಬಳಿಕ ರಚಿತಾ ಟ್ವೀಟ್
ನೆಟ್ಟಿಗರು ಸರಿಯಾಗಿ ಕ್ಲಾಸ್ ತೆಗೆದುಕೊಂಡ ಬಳಿಕ ರಚಿತಾ ರಾಮ್ ಫೈಟರ್ ವಿವೇಕ್ ಸಾವಿನ ಬಗ್ಗೆ ಟ್ವೀಟ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದರು. ರಚಿತಾ ರಾಮ್ ಟ್ವೀಟ್ ಗೆ ನೆಟ್ಟಿಗರು ಕಾಮೆಂಟ್ ಮಾಡಿ 'ಟ್ವೀಟ್ ಮಾತ್ರನಾ ಅಥವಾ ಅವರ ಕುಟುಂಬಕ್ಕೆ ಏನಾದರು ಸಹಾಯ ಮಾಡುತ್ತೀರಾ' ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ನಟ-ನಟಿಯರಿಗೆ ಕೊಡುವ ರಕ್ಷಣೆ ಉಳಿದವರಿಗೂ ಸಿಗಲಿ ಎಂದು ಹೇಳಿದ್ದಾರೆ.

ವಿವೇಕ್ ಕುಟುಂಬಕ್ಕೆ ಸಹಾಯ ಮಾಡಿ ಎಂದ ಅಭಿಮಾನಿಗಳು
ರಚಿತಾ ರಾಮ್ ಟ್ವೀಟ್ ಗೆ ನೆಟ್ಟಿಗರು ಕಾಮೆಂಟ್ ಮಾಡಿ 'ಟ್ವೀಟ್ ಮಾತ್ರನಾ ಅಥವಾ ಅವರ ಕುಟುಂಬಕ್ಕೆ ಏನಾದರು ಸಹಾಯ ಮಾಡುತ್ತೀರಾ' ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಕಾಮೆಂಟ್ ಮಾಡಿ ನಟ-ನಟಿಯರಿಗೆ ಕೊಡುವ ರಕ್ಷಣೆ, ಸುರಕ್ಷತೆಯನ್ನು ಉಳಿದವರಿಗೂ ಕೊಡಿ ಎಂದು ಹೇಳುತ್ತಿದ್ದಾರೆ.


Click it and Unblock the Notifications











