ಮೊದಲ ಹೆಜ್ಜೆಯಲ್ಲಿ ವಿರೋಧ ಎದುರಿಸಬೇಕಾಗಿದೆ 'ಬಿಗ್ ಬಾಸ್' ಪ್ರೇಮ ಪಕ್ಷಿಗಳು

Recommended Video

ದಯವಿಟ್ಟು ನನ್ನನ್ನು ಕ್ಷಮಿಸಿ ಎಂದ ಚಂದನ್ ಶೆಟ್ಟಿ. | Chandan Shetty

'ಬಿಗ್ ಬಾಸ್ ಕನ್ನಡ' ಸೀಸನ್ 5 ಕಾರ್ಯಕ್ರಮದ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇದೀಗ ನಿಜ ಜೀವನದಲ್ಲಿ ಒಂದಾಗಿದ್ದಾರೆ. ಪರಸ್ಪರ ಪ್ರೀತಿಸುತ್ತಿರುವ ಈ ಜೋಡಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.

ನಿವೇದಿತಾರನ್ನು ಪ್ರೀತಿಸುತ್ತಿರುವ ವಿಷಯವನ್ನು ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದಾರೆ. ಯುವ ದಸರಾ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಬೆರಳಿಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದ್ದಾರೆ. ನಿವೇದಿತಾ ಕೂಡ ಚಂದನ್ ಪ್ರೇಮ ನಿವೇದನೆಯನ್ನು ಆಶ್ಚರ್ಯ ಹಾಗೂ ಖುಷಿಯಿಂದ ಒಪ್ಪಿಕೊಂಡಿದ್ದಾರೆ.

ಲವ್ ಎಂದ ಮೇಲೆ ನೋವು ಇರಲೇ ಬೇಕು. ಇದನ್ನು ಸಾಕಷ್ಟು ಪ್ರೇಮಿಗಳು ತಮ್ಮ ಬದುಕಿನಲ್ಲಿ ಅನುಭವಿಸಿರುತ್ತಾರೆ. ಅದೇ ರೀತಿಯಲ್ಲಿ ಚಂದನ್ ಹಾಗೂ ನಿವೇದಿತಾ ಜೋಡಿ ಈಗ ವಿರೋಧವನ್ನು ಎದುರಿಸಬೇಕಾಗಿದೆ. ಮೊದಲ ಹೆಜ್ಜೆಯಲ್ಲಿಯೇ ಈ ಜೋಡಿಗೆ ವಿಗ್ನ ಎದುರಾಗಿದೆ. ಏನಿದು ಕಥೆ ಮುಂದೆ ಓದಿ..

'ಯುವ ದಸರಾ' ಪ್ರೇಮ ನಿವೇದನೆ ಜಾಗನಾ?

'ಯುವ ದಸರಾ' ಪ್ರೇಮ ನಿವೇದನೆ ಜಾಗನಾ?

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪ್ರೇಮಕ್ಕೆ ಯಾರ ಅಡ್ಡಿಯೂ ಇಲ್ಲ. ಆದರೆ, ಚಂದನ್ ತಮ್ಮ ಪ್ರೇಮ ನಿವೇದನೆಗೆ ಆರಿಸಿಕೊಂಡ ಜಾಗ ಈಗ ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. 'ಯುವ ದಸರಾ' ವೇದಿಕೆ ಮೇಲೆ ನಿವೇದಿತಾಗೆ ಉಂಗುರ ಹಾಕಿ ಪ್ರಪೋಸ್ ಮಾಡಿದ್ದರು ಚಂದನ್. ಹೀಗಾಗಿ, 'ಯುವ ದಸರಾ' ನಿಮಗೆ ಪ್ರೇಮ ನಿವೇದನೆ ಜಾಗನಾ? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ದಸರಾ ಹಬ್ಬದಲ್ಲಿ ಇದೆಲ್ಲ ಬೇಕಿತ್ತಾ?

ದಸರಾ ಹಬ್ಬದಲ್ಲಿ ಇದೆಲ್ಲ ಬೇಕಿತ್ತಾ?

''ನಾನು ಚಂದನ್ ಶೆಟ್ಟಿ ಅಭಿಮಾನಿ. ಆದರೆ, ದಸರಾ ಹಬ್ಬದಲ್ಲಿ ಇದೆಲ್ಲ ಬೇಕಿತ್ತಾ'' ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ''ದೊಡ್ಡ ಕಾರ್ಯಕ್ರಮದಲ್ಲಿ ಎಂಗೇಜ್ ಆಗಿ ದುಡ್ಡು ಉಳಿಸಿದರು, ಅರಮನೆಯಲ್ಲಿ ಮದುವೆ ಮಾಡಿಸಿ, ಮುಂದಿನ ವರ್ಷ ಯುವ ದಸರಾದಲ್ಲಿ ಬೀಗರ ಊಟ ಹಾಕಿಸಿ'' ಎನ್ನುವ ಕಾಮೆಂಟ್ಸ್ ಗಳ ಮೂಲಕ ಇನ್ನು ಕೆಲವರು ನವ ಜೋಡಿಗೆ ಗೇಲಿ ಮಾಡಿದ್ದಾರೆ.

ನೆಗೆಟಿವ್ ಕಾಮೆಂಟ್ಸ್ ಗಳು ಹೆಚ್ಚಿವೆ

ನೆಗೆಟಿವ್ ಕಾಮೆಂಟ್ಸ್ ಗಳು ಹೆಚ್ಚಿವೆ

ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಿಶ್ಚಿತಾರ್ಥಕ್ಕೆ ಅನೇಕರು ಶುಭ ಹಾರೈಸಿದ್ದಾರೆ. ಆದರೆ, ಪಾಸಿಟಿವ್ ಕಾಮೆಂಟ್ಸ್ ಗಿಂತ ಹೆಚ್ಚಾಗಿ ನೆಗೆಟಿವ್ ಮಾತುಗಳು ಕೇಳಿ ಬಂದಿವೆ. ಚಂದನ್ ತಮ್ಮ ಪ್ರಿಯತಮೆ ಸರ್ ಪ್ರೈಸ್ ನೀಡಲು ಯುವ ದಸರಾದಲ್ಲಿ ಪ್ರಪೋಸ್ ಮಾಡಿದರು. ಆದರೆ, ಇದೇ ಈಗ ಅವರನ್ನು ಇಕ್ಕಟ್ಟಿಗೆ ಸಿಗಿಸಿದೆ.

ಸದ್ಯದಲ್ಲಿಯೇ ಮದುವೆ

ಸದ್ಯದಲ್ಲಿಯೇ ಮದುವೆ

ವೇದಿಕೆ ಮೇಲೆ ನಿವೇದಿತಾಗೆ ರಿಂಗ್ ಹಾಕಿದ ಚಂದನ್ ನಂತರ ತಮ್ಮ ಅಭಿಮಾನಿಗಳ ಜೊತೆಗೆ ಮಾತನಾಡಿದರು. ''ಈ ದಿನ ನಾನು ಪ್ರಪೋಸ್ ಮಾಡುತ್ತಾನೆ ಎಂದು ತಿಳಿದಿರಲಿಲ್ಲ. ಆದರೆ, ನಿಮ್ಮೆಲ್ಲರ ಮುಂದೆ ನಿವೇದಿತಾಗೆ ಪ್ರಪೋಸ್ ಮಾಡಿದ್ದೇನೆ. ಸದ್ಯದಲ್ಲಿಯೇ ನಾವು ಮದುವೆ ಆಗುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ.'' ಎಂದು ಹೇಳಿದ್ದಾರೆ.

ಗೆಳೆತನ ಪ್ರೀತಿಗೆ ತಿರುಗಿದೆ

ಗೆಳೆತನ ಪ್ರೀತಿಗೆ ತಿರುಗಿದೆ

''ನನಗೆ ತುಂಬ ಶಾಕ್ ಆಗುತ್ತಿದೆ. ಐ ಲವ್ ಯೂ ಸೋ ಮಚ್. ಬಿಗ್ ಬಾಸ್ ಮನೆಯಲ್ಲಿ ನಾವು 105 ದಿನ ಜೊತೆಯಲಿ ಇದ್ವಿ. ಹೊರಗೆ ಬಂದ ಮೇಲೆ ಒಳ್ಳೆಯ ಫ್ರೆಂಡ್ಸ್ ಆದ್ವಿ. ನಂತರ ಬೆಸ್ಟ್ ಫ್ರೆಂಡ್ಸ್ ಆದ್ವಿ. ಆಮೇಲೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ್ವಿ. ಈ ತರ ಪ್ರಪೋಸ್ ಬಂದರೆ, ಓ ಮೈ ಗಾಡ್.'' ಎಂದು ನಿವೇದಿತಾ ಸಂತಸ ಹಂಚಿಕೊಂಡರು

More from Filmibeat

English summary
Netizens unhappy with Chandan Shetty and Niveditha Gowda. Bigg Boss 5 winner, kannada rapper Chandan Shetty got engaged with Niveditha Gowda. ಕನ್ನಡ Rapper,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X