twitter
    For Quick Alerts
    ALLOW NOTIFICATIONS  
    For Daily Alerts

    ಈ ಸಿನಿಮಾದಲ್ಲಿ ಬೆಳಕೇ ಹೀರೊ.. ಕತ್ತಲೆನೇ ವಿಲನ್!

    |

    ಸಿನಿಮಾ ಅಂದರೆ ಪ್ರಯೋಗ. ಹಳೆ ಸಿದ್ಧ ಸೂತ್ರಗಳಿಗೆ ಅಂಟಿಕೊಂಡಿದ್ದರೆ, ಆ ಸಿನಿಮಾವನ್ನು ಜನರು ಇಷ್ಟ ಪಡೋದಿಲ್ಲ. ಅದಕ್ಕೆ ಪ್ರತಿಬಾರಿನೂ ಸಿನಿಮಾಗಳಲ್ಲಿ ಪ್ರಯೋಗ ಮಾಡುವುದಕ್ಕೆ ನಿರ್ದೇಶಕರು ಸದಾ ಮುಂದಿರುತ್ತಾರೆ.

    ಇಲ್ಲೊಂದು ಹೊಸಬರ ತಂಡ ಇಂತಹದ್ದೇ ಒಂದು ಪ್ರಯತ್ನಕ್ಕೆ ಮುಂದಾಗಿದೆ. ಇಲ್ಲಿ ಬೆಳಕೇ ಹೀರೊ.. ಕತ್ತಲೆನೇ ವಿಲನ್. ಇಂತಹದ್ದೊಂದು ಕಲ್ಪನೆಯಲ್ಲಿ ಸಿನಿಮಾ ಬಂದರೆ ಹೇಗಿರುತ್ತೆ? ಇಂತಹ ಕಲ್ಪನೆ ಬಗ್ಗೆ ಕೇಳಿದರೆ ಮೈ ಜುಂ ಅನ್ನುತ್ತೆ. ಅಂದ್ಹಾಗೆ ಆ ಸಿನಿಮಾನೇ 'ಜೋರು'.

    ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ

    'ಜೋರು' ಸಿನಿಮಾ ಟೈಟಲ್‌ನಲ್ಲೇ ಒಂದು ಖದರ್ ಇದೆ. ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ ಸಹಾಯಕರಾಗಿ ದುಡಿದಿರೋ ನಾಗಭೂಷಣ್ ಇದೇ ಮೊದಲ ಬಾರಿಗೆ ಈ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈ ಕತ್ತಲು-ಬೆಳಕಿನ ಕಲ್ಪನೆ ಇವರದ್ದೇ.

    New Comers Kannada Movie Jooru Will Have Light And Dark Theme

    'ಜೋರು' ಒಂದು ಗ್ಯಾಂಗ್‌ಸ್ಟರ್ ಸಿನಿಮಾ. ಈ ಸಿನಿಮಾದಲ್ಲಿ ಬರುವ ಪ್ರಮುಖ ಕಲಾವಿದರೆಲ್ಲರೂ ಹೊಸಬರು. ಆದರೂ, ಸಿನಿಮಾ ಮೇಕಿಂಗ್‌ನಲ್ಲಿ ಇಡೀ ಚಿತ್ರತಂಡ ವಿಶಿಷ್ಠ ಪ್ರಯೋಗವನ್ನು ಮಾಡಿದೆ. ಅಷ್ಟಕ್ಕೂ ಬೆಳಕು ಹೀರೊ.. ಕತ್ತಲೆ ವಿಲನ್ ಹೇಗೆ? ಅನ್ನೋ ಪ್ರಶ್ನೆ ಮೂಡೋದು ಸಹಜ. ಆದರೆ, ಅದನ್ನು ವಿವರಿಸುವುದಕ್ಕಿಂತ ಸಿನಿಮಾ ನೋಡಿದರೆನೇ ಅರ್ಥ ಆಗುತ್ತೆ.

    ಸದ್ಯ ಮ್ಯೂಸಿಕ್ ಕೆಲಸದಲ್ಲಿ ಬ್ಯುಸಿ

    ನಿರ್ದೇಶಕ ನಾಗಭೂಷಣ್ ಹಾಗೂ ತಂಡ ಚಿತ್ರದ ಹಾಡುಗಳನ್ನು ಕಂಪೋಸ್ ಮಾಡುವುದರಲ್ಲಿ ಬ್ಯುಸಿಯಾಗಿದೆ. ರಥಾವರ, ಸಿಂಗ ಸಿನಿಮಾ ಸೂಪರ್ ಹಿಟ್ ಸಾಂಗ್ "ಶಾನೆ ಟಾಪ್‌ ಆಗವ್ಳೆ.." ಅಂತ ಹಾಡುಗಳನ್ನು ನೀಡಿರುವ ಧರ್ಮ ವಿಶ್ ಈ ಸಿನಿಮಾಗೆ ಮ್ಯೂಸಿಕ್ ಕಪೋಸ್ ಮಾಡುತ್ತಿದ್ದಾರೆ.

    ಅಂದ್ಹಾಗೆ ಈ ಸಿನಿಮಾದಲ್ಲಿ ಧನುಷ್ ಕುಮಾರ್ ಹೀರೊ. ಸರಸ್ವತಿ ಆರ್ ನಾಗೇಶ್ ಎಂಬುವವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ನಿರ್ದೇಶಿಸಿದ್ದ ಚೇತನ್ ಕುಮಾರ್ ಸಾಹಿತ್ಯವನ್ನು ರಚಿಸಿದ್ದಾರೆ.

    New Comers Kannada Movie Jooru Will Have Light And Dark Theme

    ಈ ಸಿನಿಮಾವನ್ನು ಬೆಂಗಳೂರು, ಉತ್ತರ ಕರ್ನಾಟಕ, ಕೋಲಾರದಲ್ಲಿ ಶೂಟಿಂಗ್ ಮಾಡಲಿದ್ದು, ಸಿನಿಮಾದಲ್ಲಿ 5 ಹಾಡುಗಳು ಮತ್ತು 4 ಫೈಟ್ಸ್ ಸೀಕ್ವೆನ್ಸ್ ಇರಲಿದೆ. ಚಿತ್ರತಂಡ ಸದ್ಯ ಹೀರೊಯಿನ್ ಹುಡುಕಾಟದಲ್ಲಿದ್ದು, ಸದ್ಯದ್ಯಲೇ ಫೈನಲ್ ಮಾಡಿಕೊಂಡು ಡಿಸೆಂಬರ್‌ನಲ್ಲಿ ಶೂಟಿಂಗ್ ಶುರು ಮಾಡಲಿದೆ.

    English summary
    New Comers Kannada Movie Jooru Will Have Light And Dark Theme, Know More.
    Wednesday, September 28, 2022, 23:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X