ಹೊಸಬರ 'ಲವ್ ಸೀಸನ್ಸ್'; ಟ್ರೆಂಡಿಂಗ್‌ನಲ್ಲಿದೆ ಹೊಸ ಲಿರಿಕಲ್ ವೀಡಿಯೋ ಸಾಂಗ್

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ ಹೊಸಬರ ತಂಡ ಬರೋದು ಹೊಸದೇನು ಅಲ್ಲ. ಹೊಸ ಹೊಸ ಕಾನ್ಸೆಪಟ್‌ ಅನ್ನು ಇಟ್ಕೊಂಡು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಮತ್ತೊಂದು ಹೊಸ ತಂಡ ಇಂತಹದ್ದೇ ಒಂದು ಹೊಸ ಪ್ರಯತ್ನದೊಂದಿಗೆ ಥಿಯೇಟರ್‌ಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಅದುವೇ 'ಲವ್ ಸೀಸನ್ಸ್'.

ಈ ಹೊಸಬರ ತಂಡ ಈಗಾಗಲೇ ಸಿನಿಮಾದ ಶೂಟಿಂಗ್ ಅನ್ನು ಮುಗಿಸಿ, ಪ್ರಚಾರಕ್ಕೆ ಮುಂದಾಗಿದೆ. ಕೆಲವು ದಿನಗಳ ಹಿಂದಷ್ಟೇ 'ಲವ್ ಸೀಸನ್ಸ್' ಸಿನಿಮಾದ ಟೀಸರ್‌ ಅನ್ನು ರಿಲೀಸ್ ಮಾಡಲಾಗಿತ್ತು. ಅದಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಅನಾವಣ ಮಾಡಿತ್ತು. ಈಗ ಸಿನಿಮಾದ ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ.

New comers Love Scenes Kannada movie lyrical song hosadondu preetiyana trending

ಟೀಸರ್ ಬಿಡುಗಡೆ ವೇಳೆ 'ಲವ್ ಸೀಸನ್ಸ್' ಸಿನಿಮಾ ತಂಡ ಜೂನ್ ತಿಂಗಳಲ್ಲಿ ರಿಲೀಸ್ ಮಾಡುವ ಸುಳಿವು ಸಿಕ್ಕಿತ್ತು. ಟೀಸರ್ ರಿಲೀಸ್ ಮಾಡಿ ಸಿನಿಮಾ ಭರ್ಜರಿ ಪ್ರಚಾರವನ್ನು ಆರಂಭಿಸಿದ್ದರು. ಈಗ ಒಂದೊಂದೇ ಹಂತವಾಗಿ ಹಾಡುಗಳು ಹಾಗೂ ಟ್ರೈಲರ್‌ಗಳನ್ನು ರಿಲೀಸ್ ಮಾಡುವುದಕ್ಕೆ ಸ್ಕೆಚ್ ಹಾಕಿಕೊಂಡಿತ್ತು. ಅಂದ್ಹಾಗೆ ಟೈಟಲ್ ಹೇಳುವಂತೆ ಇದೊಂದು ಪಕ್ಕಾ ಲವ್ ಸ್ಟೋರಿ. ಹಾಗಾಗಿ ಪ್ರೀತಿಯ ಕುರಿತ ಹಾಡೊಂದನ್ನು ರಿಲೀಸ್ ಮಾಡಿದೆ ಚಿತ್ರತಂಡ.

ಹೌದು ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ 'ಲವ್ ಸೀಸನ್ಸ್' ಸಿನಿಮಾದ ಹಾಡೊಂದು ಸಂಗೀತ ಪ್ರಿಯರ ಮೆಚ್ಚುಗೆ ವ್ಯಕ್ತವಾಗಿತ್ತು. ಸಂಗೀತ ಪ್ರೇಮಿಗಳೆಲ್ಲ 'ಲವ್‌ ಸೀನ್ಸ್' ಸಿನಿಮಾದ ಮೊದಲ ಹಾಡಿನ ಗುಂಗಿನಲ್ಲಿ ಇರುವಾಗಲೇ ಚಿತ್ರತಂಡ ಎರಡನೇ ಹಾಡನ್ನು ರಿಲೀಸ್ ಮಾಡಿದೆ. ಅಂದ್ಹಾಗೆ "ಹೊಸದೊಂದು ಪ್ರೀತಿಯಾನ.." ಎಂಬ ಈ ಲಿರಿಕಲ್ ವೀಡಿಯೋ ಸಾಂಗ್ ಕೂಡ ಕಿಕ್ ಕೊಡುವುದಕ್ಕೆ ಶುರು ಮಾಡಿದೆ.

'ಲವ್ ಸೀಸನ್ಸ್' ಸಿನಿಮಾದ ಈ ಹೊಸ ಹಾಡನ್ನು ಎನ್.ಆರ್ ಸ್ಟುಡಿಯೋಸ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಟೀಸರ್‌ಗೆ ಸುಮಾರು 3 ಲಕ್ಷಕ್ಕೂ ಅಧಿಕ ವೀವ್ಸ್ ಸಿಕ್ಕಿತ್ತು. ಏಳು ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ "ಹೊಸದೊಂದು ಪ್ರೀತಿ ಯಾನ.." ಹಾಡು ಸುಮಾರು ಐದು ಲಕ್ಷಕ್ಕೂ ಅಧಿಕ ವೀವ್ಸ್ ಅನ್ನು ಪಡೆದುಕೊಂಡಿದೆ. ಇನ್ನು ಮೊದಲನೇ ಹಾಡು ಈಗಾಗಲೇ ಒಂದು ಮಿಲಿಯನ್ ಕ್ರಾಸ್ ಮಾಡಿದೆ.

ಹೊಸದೊಂದು ಪ್ರೀತಿ ಯಾನ ಏನೆಂದರು ಚೆನ್ನ. ದಿನವೆಲ್ಲ ಮಾಡುತೀನಿ ನಾ ನಿನ್ನದೆ ಧ್ಯಾನ... ಎಂಬ ಈ ಹಾಡನ್ನು ಧನಂಜಯ್ ರಂಜನ್ ರಚಿಸಿದ್ದಾರೆ. ವೀರ್ ಸಮರ್ಥ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. 'ಲವ್ ಸೀನ್ಸ್‌'ನ 2ನೇ ಹಾಡನ್ನು ಕೇಶವ್ ಆನಂದ್ ಹಾಡಿದ್ದಾರೆ. ಇನ್ನು ಈ ಹಾಡಿನಲ್ಲಿ ಮುಕುಂದ ರಾಮಸ್ವಾಮಿ ಮತ್ತು ಶ್ವೇತಾ ಕೊಗ್ಲೂರು ಈ ಹಾಡಿನಲ್ಲಿ ಮನ ಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಲವಲವಿಕೆಯ ಧಾಟಿಯಲ್ಲಿ ಪ್ರೇಮದ ಭಾವಗಳನ್ನು ಕಟ್ಟಿ ಕೊಟ್ಟಂತಿರುವ ಈ ಹಾಡೂ ಮೊದಲ ಹಾಡಿನಂತೆಯೇ ಟ್ರೆಂಡ್ ಹುಟ್ಟಾಕಿದೆ.

ಇನ್ನು ಈ ಸಿನಿಮಾವನ್ನು ಎನ್.ಆರ್ ಸ್ಟುಡಿಯೋಸ್ ಬ್ಯಾನರ್‌ ಮೂಲಕ ಎನ್.ಆರ್ ಮಂಜುನಾಥ (ನೀಲೇರಿ) ನಿರ್ಮಾಣ ಮಾಡಿದ್ದಾರೆ. ಕೃತ್ವಿಕ್ ನಿರ್ದೇಶನ ಮಾಡುತ್ತಿದ್ದರೆ, ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ. ಈ ಚಿತ್ರಕ್ಕಿದೆ. ಹಾಗೇ ಪ್ರೇಮಕವಿ ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಸೇರಿದಂತೆ ಹಲವರು ಸಾಹಿತ್ಯವನ್ನು ರಚಿಸಿದ್ದಾರೆ. ಈ ಸಿನಿಮಾಗೆ ಅವಿನಾಶ ಶಾಸ್ತ್ರಿ ಕ್ಯಾಮರಾವರ್ಕ್ ಇದ್ದು, ಮಧು ತುಂಬಕೆರೆ ಸಂಕಲನ, ಭಜರಂಗಿ ಮೋಹನ್ ನೃತ್ಯ ಸಂಯೋಜನೆಯಿದೆ. ಈ ಸಿನಿಮಾದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದರೆ, ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಜೊತೆಯಾಗಿದ್ದಾರೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರೀತು ಸಿಂಗ್ ಸೇರಿದಂತೆ ಜನಪ್ರಿಯ ಕಲಾವಿದರು ನಟಿಸಿದ್ದಾರೆ.

English summary
New comers Love Scenes Kannada movie lyrical song hosadondu preetiyana trending
Read more about: kannada movie sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X