For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ವಿವಾದದಲ್ಲಿ 'ಕಾಲಾ': ವರ್ಲ್ಡ್ ವೈಡ್ ಬಿಡುಗಡೆಗೆ ಸಂಕಷ್ಟ.!

  By Bharath Kumar
  |
  ಕಾಲ ಸಿನಿಮಾ ದೇಶದಲ್ಲೇ ರಿಲೀಸ್ ಆಗೋದು ಡೌಟ್ ..!! | Filmibeat kannada

  ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರವನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

  ಕಾವೇರಿ ವಿವಾದದ ವಿಚಾರದಲ್ಲಿ ಕರ್ನಾಟಕದ ವಿರುದ್ಧವಾಗಿ ಹೇಳಿಕೆ ನೀಡಿರುವ ರಜನಿಕಾಂತ್ ಅವರನ್ನ ಖಂಡಿಸಿ, ಅವರ ಚಿತ್ರವನ್ನ ನಿಷೇಧ ಮಾಡಲು ನಿರ್ಧರಿಸಲಾಗಿದೆ. ಇದು ಕರ್ನಾಟಕದಲ್ಲಿ ಎದುರಾಗಿರುವ ಸಮಸ್ಯೆ.

  'ಕಾಲಾ' ವಿವಾದ: ಅವರು ಮಾಡಿದ್ರೆ ಸರಿ, ನಾವ್ ಮಾಡಿದ್ರೆ ತಪ್ಪಾ.?'ಕಾಲಾ' ವಿವಾದ: ಅವರು ಮಾಡಿದ್ರೆ ಸರಿ, ನಾವ್ ಮಾಡಿದ್ರೆ ತಪ್ಪಾ.?

  ಆದ್ರೀಗ, 'ಕಾಲಾ' ಚಿತ್ರಕ್ಕೆ ಹೊಸ ವಿವಾದ ಅಂಟಿಕೊಂಡಿದ್ದು, ವರ್ಲ್ಡ್ ವೈಡ್ ಬಿಡುಗಡೆಗೆ ಸಂಕಷ್ಟಕ್ಕೆ ಎದುರಾಗಿದೆ. ಸುಮಾರು 101 ಕೋಟಿ ಮಾನನಷ್ಟ ಹೂಡಲು ಪತ್ರಕರ್ತರೊಬ್ಬರು ಮುಂದಾಗಿದ್ದಾರೆ. ಅಷ್ಟಕ್ಕೂ, ಏನಿದು 'ಕಾಲಾ'ನ ಹೊಸ ಸಮಸ್ಯೆ ಎಂದು ತಿಳಿಯಲು ಮುಂದೆ ಓದಿ......

  101 ಕೋಟಿ ಮಾನನಷ್ಟ.!

  101 ಕೋಟಿ ಮಾನನಷ್ಟ.!

  ತಮಿಳುನಾಡಿನ ನಾಡಾರ್ ಸಮುದಾಯದ ಬಗ್ಗೆ 'ಕಾಲಾ' ಚಿತ್ರದಲ್ಲಿ ಅವಹೇಳನ ತೋರಿಸಲಾಗಿದೆ ಎಂದು ಪತ್ರಕರ್ತರೊಬ್ಬರು ನೋಟಿಸ್ ನೀಡಿದ್ದಾರೆ. ಮುಂಬಯಿಯ ಧಾರಾವಿ ಸ್ಲಂನ ಗಾಡ್‌ ಫಾದರ್‌ ಎಂದೇ ಹೆಸರಾಗಿದ್ದ ತಿರವಿಯಮ್ ನಾಡಾರ್ ಅವರ ಸ್ಪೂರ್ತಿ ಪಡೆದು, ಕಥೆ ಮಾಡಿ, ಅವರ ಹೆಸರಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿದೆ.

  'ಕಾಲಾ' ವಿವಾದ ಬಗ್ಗೆ ಪ್ರಕಾಶ್ ರೈ ಕೊಟ್ಟ ಹೇಳಿಕೆ'ಕಾಲಾ' ವಿವಾದ ಬಗ್ಗೆ ಪ್ರಕಾಶ್ ರೈ ಕೊಟ್ಟ ಹೇಳಿಕೆ

  ಯಾರು ಈ ತಿರವಿಯಮ್ ನಾಡಾರ್.?

  ಯಾರು ಈ ತಿರವಿಯಮ್ ನಾಡಾರ್.?

  'ಕಾಲಾ' ಚಿತ್ರದಲ್ಲಿ ರಜನಿಕಾಂತ್ ಅಭಿನಯಿಸಿರುವ ಪಾತ್ರಕ್ಕೆ ಮೂಲ ಈ ತಿರವಿಯಮ್ ನಾಡಾರ್ ಎಂಬುದು ಹೊಸ ಆರೋಪ. ತಿರವಿಯಮ್ ನಾಡಾರ್ ಮುಂಬೈನಲ್ಲಿ ನೆಲೆಸಿದ್ದ ತಮಿಳು ಕುಟುಂಬಗಳ ಪಾಲಿಗೆ ಜನನಾಯಕರಾಗಿದ್ದರು. ಆದ್ರೆ, ಸಿನಿಮಾದಲ್ಲಿ ಅವರನ್ನ ಮತ್ತು ಸಮುದಾಯವನ್ನ ಕೀಳಾಗಿ ಬಿಂಬಿಸಲಾಗಿದೆ ಎಂದು ಅವರ ಮಗ ಮಗ ಜವಾಹರ್‌ ನಡಾರ್ ದೂರಿದ್ದಾರೆ.

  ತಂದೆ ಬಗ್ಗೆ ಮಗ ಹೇಳಿದ್ದೇನು.?

  ತಂದೆ ಬಗ್ಗೆ ಮಗ ಹೇಳಿದ್ದೇನು.?

  ''ನಮ್ಮ ತಂದೆ ತಿರವಿಯಮ್ ನಾಡಾರ್ ಸಕ್ಕರೆ ಮತ್ತು ಬೆಲ್ಲ ಮಾರಾಟಗಾರರಾಗಿದ್ದರು. 1957ರಲ್ಲಿ ಕೆಲಸಕ್ಕಾಗಿ ಮುಂಬೈನ ಧಾರಾವಿಗೆ ಬಂದು ನೆಲೆಸಿದರು. ಅಲ್ಲಿ ಅವರನ್ನ ಕಾಲಾ ಸೇಠ್ ಮತ್ತು ಗುಡ್ವಾಲಾ ಸೇಠ್ ಎಂದು ಕರೆಯುತ್ತಿದ್ದರು. ಬಡ ಕುಟುಂಬಗಳ ಕಷ್ಟಕ್ಕೆ ನೆರವಾಗಿ ಗಾಡ್‌ ಫಾದರ್‌ ಆಗಿದ್ದರು. ಯಾವುದೇ ರೀತಿಯ ಕಾನೂನುಬಾಹಿರ ಕೃತ್ಯಗಳನ್ನು ಮಾಡಿಲ್ಲ'' ಎಂದು ಮಗ ಜವಾಹರ್‌ ನಡಾರ್ ಹೇಳಿದ್ದಾರೆ.

  ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ತಮಿಳು ಚಿತ್ರಗಳುಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ತಮಿಳು ಚಿತ್ರಗಳು

  ಕ್ಷಮೆ ಕೇಳಿ ಅಥವಾ ಪರಿಹಾರ ನೀಡಬೇಕು

  ಕ್ಷಮೆ ಕೇಳಿ ಅಥವಾ ಪರಿಹಾರ ನೀಡಬೇಕು

  ''ಕಾಲಾ ಚಿತ್ರದಲ್ಲಿ ನನ್ನ ತಂದೆಯವರನ್ನು ಒಳ್ಳೆಯವರಾಗಿ ಬಿಂಬಿಸಿದ್ದರೇ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಒಂದು ವೇಳೆ ಕೆಟ್ಟ ರೀತಿಯಲ್ಲಿ ತೋರಿಸಿದ್ದರೇ ಕ್ಷಮೆ ಕೇಳುವುದರ ಜೊತೆ 101 ಕೋಟಿ ಪರಿಹಾರವನ್ನೂ ನೀಡಬೇಕು'' ಎಂದು ಜವಾಹರ್‌ ನಡಾರ್ ನೋಟಿಸ್ ನೀಡಿದ್ದಾರೆ.

  ಕಾಲಾ ಮುಂದಿನ ನಡೆ ಏನು.?

  ಕಾಲಾ ಮುಂದಿನ ನಡೆ ಏನು.?

  ಚಿತ್ರದ ನಿರ್ದೇಶಕರು ಈ ಹಿಂದೆ ಹೇಳಿರುವ ಪ್ರಕಾರ'' ಇದು ಮುಂಬೈನಲ್ಲಿ ನಡೆದ ನೈಜ ಕಥೆ ಎಂದಿದ್ದಾರೆ. ಆದ್ರೆ, ಯಾರ ಕಥೆ ಎಂದು ಹೇಳಿಲ್ಲ. ಮತ್ತೊಂದೆಡೆ ಮೂರು ದಿನಗಳಲ್ಲಿ ಉತ್ತರ ನೀಡುವಂತೆ ಚಿತ್ರತಂಡಕ್ಕೆ ನೋಟಿಸ್ ನೀಡಲಾಗಿದೆ. ಇಲ್ಲವಾದಲ್ಲಿ, ಬಿಡುಗಡೆಗೆ ಏನಾದರೂ ಅಡ್ಡಿಯಾಗಬಹುದಾ ಎಂಬ ಅನುಮಾನ ಕಾಡುತ್ತಿದೆ.

  English summary
  A Mumbai-based journalist has claimed that Kaala's story is based on his father Thiraviam Nadar. He has also threatened the makers of the Rajinikanth starrer with a defamation suit in the absence of an apology.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X