»   » ರಾಜ್ ಹುಟ್ಟುಹಬ್ಬದಂದು ರಾಜ್ ಕುಟುಂಬದ 3 ಚಿತ್ರ

ರಾಜ್ ಹುಟ್ಟುಹಬ್ಬದಂದು ರಾಜ್ ಕುಟುಂಬದ 3 ಚಿತ್ರ

By: ಜೀವನರಸಿಕ
Subscribe to Filmibeat Kannada

ಕನ್ನಡ ಚಿತ್ರರಂಗದ ಆರಾಧ್ಯ ದೈವ ಡಾ.ರಾಜ್ ಹುಟ್ಟುಹಬ್ಬ (ಏ.24) ಬಂತೂ ಅಂದ್ರೆ ಚಿತ್ರಪ್ರೇಮಿಗಳಿಗೆ ಹಬ್ಬವಿದ್ದಂತೆ. ಕಂಠೀರವ ಸ್ಟುಡಿಯೋದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತೆ. ಪ್ರತೀವರ್ಷದಂತೆ ಈ ವರ್ಷವೂ ರಕ್ತದಾನ, ಅನ್ನದಾನ, ಆರೋಗ್ಯ ತಪಾಸಣೆ ಎಲ್ಲವೂ ಇರುತ್ತೆ. ಆದ್ರೆ ಈ ಬಾರಿ ಇದೆಲ್ಲವನ್ನೂ ಮೀರಿಸಿದ ಅಟ್ರ್ಯಾಕ್ಷನ್ ಕಂಠೀರವ ಸ್ಟುಡಿಯೋದಲ್ಲಿದೆ.

ಏಪ್ರಿಲ್ 24 ಲಕ್ಕಿ ಡೇ ಅಂತ ಹಲವು ಸಿನಿಮಾಗಳು ಮುಹೂರ್ತ ಮಾಡಿಕೊಳ್ತವೆ. ಕಳೆದ ವರ್ಷ ಶಿವಣ್ಣ ರಮ್ಯಾ ಅಭಿನಯದ 'ಆರ್ಯನ್' ಸಿನಿಮಾದ ಮುಹೂರ್ತ ನಡೆದಿತ್ತು. 'ಆರ್ಯನ್' ಈಗ ರಿಲೀಸ್ಗೂ ರೆಡಿಯಿದೆ. ಅಪ್ಪಾಜಿಯ ಹುಟ್ಟುಹಬ್ಬದ ದಿನ ಮುಹೂರ್ತ ಮಾಡಿದ್ರೆ ಯಶಸ್ಸು ಗ್ಯಾರಂಟಿ ಅನ್ನೋ ನಂಬಿಕೆ ಹಾಗಾಗೀನೇ ಅವತ್ತು ರಾಜ್ ಸಮಾಧಿಯಲ್ಲಿ ಕನ್ನಡದ ಸಿನಿಮಾ ದೇವ್ರು ಅಣ್ಣಾವ್ರ ಆಶೀರ್ವಾದ ತೆಗೆದುಕೊಂಡು ಅದೆಷ್ಟೋ ಸಿನಿಮಾಗಳು ಓಪನಿಂಗ್ ಪಡ್ಕೋತವೆ.

'ಆರ್ಯನ್' ವಿಷಯದಲ್ಲಂತೂ ನಿರ್ದೇಶಕ ರಾಜೇಂದ್ರಬಾಬು ಅಕಾಲಿಕ ಮರಣದ ನಂತ್ರ ಸಿನಿಮಾ ನಿಂತೇ ಹೋಗುತ್ತೆ ಅಂತ ಅಂದುಕೊಂಡ್ರೆ ಅಪ್ಪಾಜಿಯವ್ರ ಆಶೀರ್ವಾದದಿಂದಲೋ ಏನೋ ಸ್ಯಾಂಡಲ್ವುಡ್ ಕಿಂಗ್-ಸ್ಯಾಂಡಲ್ವುಡ್ ಕ್ವೀನ್ ಜೋಡಿಯನ್ನು ನೋಡ್ಲೇಬೇಕು ಅನ್ನೋ ಕ್ಯೂರಿಯಾಸಿಟಿಗೆ ಮೇ ತಿಂಗಳಲ್ಲಿ ಬ್ರೇಕ್ ಬೀಳಲಿದೆ.

ಆದರೆ ಈ ವರ್ಷ ಏಪ್ರಿಲ್ 24ಕ್ಕೆ ನೀವು ಇನ್ನಷ್ಟು ಅಚ್ಚರಿಪಡುವ ಘಟನೆಗಳು ಜರುಗಲಿವೆ. ಈ ಬಾರಿಯ ಹುಟ್ಟುಹಬ್ಬಕ್ಕೆ ರಾಜ್ ಕುಟುಂಬದ ಮೂರು ಮಕ್ಕಳ ಒಂದೊಂದು ಸಿನಿಮಾ ಓಪನಿಂಗ್ ಪಡ್ಕೊಳ್ಳಲಿವೆ. ಅದರ ಡಿಟೈಲ್ಸ್ ಇಲ್ಲಿದೆ ನೋಡಿ. [ಪವರ್ ಸ್ಟಾರ್ ಬಿಟ್ಟ ಸಿನೆಮಾ ಗೋಲ್ಡನ್ ಸ್ಟಾರ್ ಪಾಲು]

'ದೊಡ್ಮನೆ ಹುಡುಗ'ನಾಗಿ ಪವರ್ ಸ್ಟಾರ್

ಪವರ್ ಸ್ಟಾರ್ ಪುನೀತ್ 'ದೊಡ್ಮನೆ ಹುಡುಗ'ನಾಗಿ ಕಾಣಿಸಿಕೊಳ್ಳೊ ಸಿನಿಮಾ ಈ ಬಾರಿ ರಾಜ್ ಹುಟ್ಟುಹಬ್ಬಕ್ಕೆ ಸೆಟ್ಟೇರೋ ಸಾಧ್ಯತೆಯಿದೆ. ಸೂರಿ ಕಡ್ಡಿಪುಡಿ ಸಿನಿಮಾದ ನಂತರ ಎರಡ್ಮೂರು ಬಾರಿ ಸಬ್ಜೆಕ್ಟ್ ಚೇಂಜ್ ಮಾಡಿ 'ದೊಡ್ಮನೆ ಹುಡುಗ' ಅನ್ನೋ ಟೈಟಲ್ಗೆ ತಕ್ಕ ಕಥೆ ಮಾಡಿಕೊಂಡಿದ್ದಾರೆ. ಸಿನಿಮಾ ಸೆಟ್ಟೇರದಿದ್ರೆ ಆಡಿಯೋ ರೆಕಾರ್ಡಿಂಗ್ ಶುರುವಾಗೋದು ಗ್ಯಾರಂಟಿ

ರಾಘಣ್ಣನ ಮಗ ವಿನಯ್ ರಾಜ್ ಸಿನಿಮಾ 'ವಿನು'

ರಾಜ್ ಕುಟುಂಬದ ಮೂರನೇ ತಲೆಮಾರಿನ ಏಕೈಕ ಗಂಡು ಕುಡಿ ವಿನಯ್ ರಾಜ್ ಸಿನಿಮಾ 'ವಿನು' ಈ ಬಾರಿ ರಾಜ್ ಹುಟ್ಟುಹಬ್ಬಕ್ಕೆ ಮುಹೂರ್ತ ಮಾಡಿಕೊಳ್ಳೋ ಸಾಧ್ಯತೆಯಿದೆ.

'ಮುತ್ತುರಾಜ'ನ ಮುಹೂರ್ತಕ್ಕೆ ಭರದ ತಯಾರಿ

ರಾಜ್ ಕುಟುಂಬದ ಹಿರಿಯ ಪುತ್ರ ಶಿವಣ್ಣನ 'ಭಜರಂಗಿ' ಶತದಿನದ ಸಂಭ್ರಮದಲ್ಲಿ 'ಮುತ್ತುರಾಜ' ಟೈಟಲ್ನಲ್ಲಿ ಸಿನಿಮಾ ಏಪ್ರಿಲ್ 24ಕ್ಕೆ ಸಿನಿಮಾ ಶುರುವಾಗುತ್ತೆ ಅಂದಿದ್ದಾರೆ ನಿರ್ದೇಶಕ ಹರ್ಷ.

ಹುಟ್ಟಹಬ್ಬದಂದು ಆರ್ಯನ್ ಆಡಿಯೋ ರಿಲೀಸ್

ರಮ್ಯಾ ಶಿವಣ್ಣ ಅಭಿನಯದ 'ಆರ್ಯನ್' ಚಿತ್ರದ ಆಡಿಯೋ ರಿಲೀಸ್ ಕೂಡ ರಾಜ್ ಹುಟ್ಟುಹಬ್ಬಕ್ಕೆ ನಡೆಯಲಿದೆ. ಆರ್ಯನ್ ಹಾಡುಗಳು ಹೇಗಿರ್ತವೆ ಅನ್ನೋದನ್ನ ರಾಜ್ ಹುಟ್ಟುಹಬ್ಬದಂದು ಕೇಳಿ ಆನಂದಿಸಬಹುದು.

ಚಿತ್ರಪ್ರೇಮಿಗಳು ಕಂಠೀರವಕ್ಕೆ ಲಗ್ಗೆ ಗ್ಯಾರಂಟಿ

'ಮುತ್ತುರಾಜ' ಅನ್ನೋ ಟೈಟಲ್ಲೇ ಥ್ರಿಲ್ಲಿಂಗ್ ಈ ಟೈಟಲ್ನಲ್ಲಿ ಶುರುವಾಗೋ ಸಿನಿಮಾ ಹೇಗಿರುತ್ತೆ ಅನ್ನೋ ಕ್ಯೂರಿಯಾಸಿಟಿ ಚಿತ್ರಪ್ರೇಮಿಗಳಿಗಿದೆ. 'ಮುತ್ತುರಾಜ'ನಾಗಿ ಶಿವಣ್ಣ ಹೇಗಿರ್ಬಹುದು ಅನ್ನೋದ್ರ ಸಣ್ಣ ಡೀಟೈಲ್ಸ್ ಸಿಕ್ಕೋದಾದ್ರೆ ಚಿತ್ರಪ್ರೇಮಿಗಳು ಏಪ್ರಿಲ್ 24ಕ್ಕೆ ಕಂಠೀರವ ಸ್ಟುಡಿಯೋಗೆ ಲಗ್ಗೆ ಇಡ್ತಾರೆ.

English summary
Film producers believe Rajkumar birthday (April 24) as lucky day. There is belief that films do well if launched on Raj birthday. Surprisingly Raj family itself will likely announce 3 movies on that day at Kanteerava Studio.
Please Wait while comments are loading...