ಚಲನಚಿತ್ರ ಅಕಾಡೆಮಿಗೆ ನೂತನ ಸದಸ್ಯರನ್ನು ಆಯ್ಕೆ ಮಾಡಿದ ಸರ್ಕಾರ
ಕನ್ನಡ ಕನ್ನಡ ಚಲನಚಿತ್ರ ಅಕಾಡೆಮಿಗೆ ಏಳು ಗಣ್ಯರನ್ನು ನೂತನ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವ್ಯಾಪ್ತಿಯಲ್ಲಿರುವ ಬರುವ ಚಲನಚಿತ್ರ ಅಕಾಡೆಮಿಗೆ ಸೆಪ್ಟೆಂಬರ್ 9ರಿಂದ ಜಾರಿಗೆ ಬರುವಂತೆ ಏಳು ಜನರನ್ನು ಸದಸ್ಯರಾಗಿ ನೇಮಕ ಮಾಡಿ ಆದೇಶಿಸಿದೆ.
ಅಶೋಕ್ ಕಶ್ಯಪ್, ಉಮೇಶ್ ನಾಯಕ್, ಎಸ್ ಜಿ ತುಂಗಾ ರೇಣುಕಾ, ಪಾಲ್ ಸುದರ್ಶನ್, ಕುಮಾರಿ ಸೋನು ಗೌಡ, ಪ್ರದೀಪ್ ಕುಮಾರ್ ಶೆಟ್ಟಿ, ಶ್ರೀರಾಜ್ ಗುಡಿ ನೂತನವಾಗಿ ಆಯ್ಕೆಯಾಗಿರುವ ಸದಸ್ಯರು.

ಪ್ರಸ್ತುತ ಸುನೀಲ್ ಪುರಾಣಿಕ್ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನುಳಿದಂತೆ ಕೊರೊನಾ ವೈರಸ್‌ನಿಂದ ಕನ್ನಡ ಚಿತ್ರರಂಗ ಬಹಳ ಸಂಕಷ್ಟದಲ್ಲಿದ್ದು, ಸಿನಿಮಾ ಇಂಡಸ್ಟ್ರಿಗೆ ನೆರವು ನೀಡಿ ಹಾಗೂ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಕೊಡಿ ಎಂದು ವಿನಂತಿಸಿ ನಟ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ ಇತ್ತೀಚಿಗಷ್ಟೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು.
Recommended Video
Sanjjana ಗೊಳಾಟಕ್ಕೆ full stop | Filmibeat Kannada
More from Filmibeat
English summary
Here are the list of new members appointed for karnataka chalanachitra academy. Take a look.


Click it and Unblock the Notifications











