TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ದರ್ಶನ್, ಸುದೀಪ್ ಹೆಸರಲ್ಲಿ ಸೆಟ್ಟೇರಿತು ಹೊಸ ಸಿನಿಮಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದ್ದಂತ ವಿಚಾರ. ಆದರೆ ಈಗ ಅವರಿಬ್ಬರು ಸ್ನೇಹಿತರಲ್ಲ.. ಆದರೆ ಅಭಿಮಾನಿಗಳು ಮಾತ್ರ ಇವರಿಬ್ಬರು ಮತ್ತೆ ಒಂದಾಗಲಿ ಎಂದು ಕಾಯುತ್ತಿದ್ದಾರೆ.
ಸ್ನೇಹದ ಬಗ್ಗೆ ಇತ್ತೀಚಿಗೆ ಎಲ್ಲಿಯೂ ಮಾತನಾಡದ ಈ ಇಬ್ಬರು ಸ್ಟಾರ್ ಗಳ ಹೆಸರಿನಲ್ಲಿ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರರಲು ಸಿದ್ದವಾಗಿದೆ. ಟೈಟಲ್ ನೋಡಿದ ತಕ್ಷಣವೇ ಅಭಿಮಾನಿಗಳ ಗಮನ ಈ ಸಿನಿಮಾ ಕಡೆ ಹೋಗುತ್ತಿದೆ.
'ಮರಿ ಟೈಗರ್' ಚಿತ್ರಗಳಿಗೆ ದರ್ಶನ್ ಕ್ಲಾಪ್ ಮಾಡೋದರ ಗುಟ್ಟು ರಟ್ಟು
ದರ್ಶನ್ ಹಾಗೂ ಸುದೀಪ್ ಹೆಸರಿನಲ್ಲಿ ಸೆಟ್ಟೇರುತ್ತಿರುವ ಸಿನಿಮಾಗೂ ಚಾಲೆಂಜಿಂಗ್ ಸ್ಟಾರ್ ಹಾಗೂ ಅಭಿನಯ ಚಕ್ರವರ್ತಿಗೂ ಸಂಬಂಧ ಇದ್ಯಾ? ಅಥವಾ ಟೈಟಲ್ ಮಾತ್ರ ಇವರ ಹೆಸರಿನಲ್ಲಿದ್ಯಾ? ಇಂತಹ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಮುಂದೆ ಓದಿ ...
ದಚ್ಚು-ದೀಪು ಸಿನಿಮಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಹೆಸರಿನಲ್ಲಿ ಹೊಸ ಸಿನಿಮಾ ಸೆಟ್ಟೇರಲು ತಯಾರಾಗಿದೆ. ಚಿತ್ರಕ್ಕೆ 'ದಚ್ಚು-ದೀಪು' ಎಂದು ಟೈಟಲ್ ಇಡಲಾಗಿದೆ.
ಫ್ಯಾನ್ಸ್ ನೀವ್ ಅನ್ಕಂಡಗಲ್ಲ ನಾವು
'ದಚ್ಚು-ದೀಪು' ಎಂದು ಟೈಟಲ್ ಇಟ್ಟಿರುವ ನಿರ್ದೆಶಕರು ಸಿನಿಮಾಗೆ 'ಫ್ಯಾನ್ಸ್ ನೀವ್ ಅನ್ಕಂಡಗಲ್ಲ ನಾವು' ಎನ್ನುವ ಉಪ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಶೀರ್ಷಿಕೆ ಹಾಗೂ ಟ್ಯಾಗ್ ಲೈನ್ ಎರಡು ಸುದೀಪ್ ಹಾಗೂ ದರ್ಶನ್ ಅವರನ್ನೇ ಬಿಂಬಿಸುವಂತಿದೆ.
ದರ್ಶನ್ ಜೊತೆ ಕೆಲಸ ಮಾಡಿದ ನಿರ್ದೇಶಕ
'ದಚ್ಚು-ದೀಪು' ಎನ್ನುವ ಸಿನಿಮಾಗೆ ನವ ನಿರ್ದೇಶಕ ರಂಜಿತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ದರ್ಶನ್ ಅವರ ಚಕ್ರವರ್ತಿ ಹಾಗೂ ಜಗ್ಗುದಾದ ಸಿನಿಮಾದಲ್ಲಿ ರಂಜಿತ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಹೊಸ ಕಲಾವಿದರ ಅಭಿನಯ
'ದಚ್ಚು-ದೀಪು' ಸಿನಿಮಾದಲ್ಲಿ ಆನಂದ್ ಹಾಗೂ ಚಂದು ನಾಯಕರಾಗಿ ಅಭಿನಯ ಮಾಡುತ್ತಿದ್ದಾರೆ. ಇನ್ನು ನಾಯಕಿಯರ ಪಾತ್ರದಲ್ಲಿ ನಿಶ್ಕಲ ಮತ್ತು ಅರ್ಚನಾ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ. ನವರಸ ನಾಯಕ ಜಗ್ಗೇಶ್ ಹಾಗೂ ಅಜಯ್ ರಾವ್ ಮಹೂರ್ತದಲಲಿ ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಲಿದ್ದಾರೆ.