For Quick Alerts
  ALLOW NOTIFICATIONS  
  For Daily Alerts

  'ಅಮಾಯಕ ಗೋಪಿ' ಅವತಾರದಲ್ಲಿ ಬೆಳ್ಳಿತೆರೆಗೆ ಬರಲಿರುವ ದಾನಿಶ್ ಸೇಠ್

  |

  ಬಹುಮುಖ ಪ್ರತಿಭೆಯ, 'ಮ್ಯಾನ್ ಆಫ್ ಡಿಫರೆಂಟ್ ವಾಯ್ಸಸ್' ಖ್ಯಾತಿಯ ದಾನಿಶ್ ಸೇಠ್ ಅವರು ಮತ್ತೊಮ್ಮೆ ಬೆಳ್ಳಿ ತೆರೆ ಮೇಲೆ ಮಿಂಚಲಿದ್ದಾರೆ.

  ಈ ಹಿಂದೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಸಿದ್ದ ಪಾತ್ರ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಬೆಳ್ಳಿತೆರೆ ಮೇಲೆ ಅದೇ ಹೆಸರಿನ ಸಿನಿಮಾ ಆಗಿ ಮಿಂಚಿತ್ತು. ಈಗ ದಾನಿಶ್ ಸೇಠ್ ಸೃಷ್ಟಿಸಿರುವ ಮತ್ತೊಂದು ಪಾತ್ರ ಸಹ ಬೆಳ್ಳಿತೆರೆಗೆ ಬರುತ್ತಿದೆ.

  ಕೊರೊನಾ ಸಮಯದಲ್ಲಿ ದಾನಿಶ್ ಸೇಠ್ ಹಲವು ಪಾತ್ರಗಳನ್ನು ಸೃಷ್ಟಿಸಿದ್ದರು. ರಾಮ್ ಮೂರ್ತಿ, ಜಯಾ, ಬೇವರ್ಸಿ ಕುಡುಕ ಇನ್ನೂ ಹಲವು ಪಾತ್ರಗಳು ಸಖತ್ ಜನಪ್ರಿಯವಾಗಿದ್ದವು. ಜೊತೆಗೆ ಗೋಪಿ ಪಾತ್ರವೂ ಸಖತ್ ಹಿಟ್ ಆಗಿತ್ತು. ಈಗ ಇದೇ ಪಾತ್ರ ಆಧರಿಸಿ ಸಿನಿಮಾ ಒಂದು ತಯಾರಾಗುತ್ತಿದೆ.

  ಅಮಾಯಕ ಗೋಪಿ ಕುರಿತು ಸಿನಿಮಾ

  ಅಮಾಯಕ ಗೋಪಿ ಕುರಿತು ಸಿನಿಮಾ

  ಹೌದು, ದಾನಿಶ್ ಸೇಠ್ ಸೃಷ್ಟಿಸಿರುವ ಪಾತ್ರ ಗೋಪಿ ಸಖತ್ ಅಮಾಯಕ, ಆತನಿಗೆ ಅಶ್ಲೀಲ ಸಿನಿಮಾಕ್ಕೂ ಸಾಮಾನ್ಯ ಸಿನಿಮಾಕ್ಕೂ ವ್ಯತ್ಯಾಸ ಸಹ ಗೊತ್ತಿಲ್ಲ. ಈ ಹಿಂದೆ ಬಂದಿದ್ದ 'ಫರ್ಸ್ಟ್ ರ್ಯಾಂಕ್ ರಾಜು' ಮಾದರಿಯಲ್ಲಿಯೇ ಇದ್ದಾನೆ ಈ ಗೋಪಿ ಸಹ.

  ಪಿಆರ್‌ಕೆ ಪ್ರೊಡಕ್ಷನ್‌ನಿಂದ ಸಿನಿಮಾ

  ಪಿಆರ್‌ಕೆ ಪ್ರೊಡಕ್ಷನ್‌ನಿಂದ ಸಿನಿಮಾ

  'ಗೋಪಿ' ಯನ್ನು ಸಿನಿಮಾ ಮಾಡುವ ಜವಾಬ್ದಾರಿ ಹೊತ್ತಿರುವುದು ನಟ ಪುನೀತ್ ರಾಜ್‌ಕುಮಾರ್ ಅವರ ನಿರ್ಮಾಣ ಸಂಸ್ಥೆ ಪಿಆರ್‌ಕೆ. ಸಿನಿಮಾದ ನಿರ್ದೇಶನ ಜವಾಬ್ದಾರಿ ಹೊತ್ತಿರುವುದು ವಮ್ಸಿಧರ ಭೋಗರಾಜು. ಸಿನಿಮಾಕ್ಕೆ 'ಒನ್ ಕಟ್, ಟೂ ಕಟ್' ಎಂದು ಹೆಸರಿಡಲಾಗಿದೆ.

  'ಫ್ರೆಂಚ್ ಬಿರಿಯಾನಿ' ನಿರ್ಮಿಸಿದ್ದ ಪಿಆರ್‌ಕೆ

  'ಫ್ರೆಂಚ್ ಬಿರಿಯಾನಿ' ನಿರ್ಮಿಸಿದ್ದ ಪಿಆರ್‌ಕೆ

  ಈ ಹಿಂದೆ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್‌ ನಿಂದಲೇ ದಾನಿಶ್ ಸೇಠ್ ನಟನೆಯ 'ಫ್ರೆಂಚ್ ಬಿರಿಯಾನಿ' ಸಿನಿಮಾವನ್ನು ನಿರ್ಮಿಸಲಾಗಿತ್ತು. ಅಮೆಜಾನ್‌ ನಲ್ಲಿ ಬಿಡುಗಡೆ ಆಗಿದ್ದ ಆ ಸಿನಿಮಾ ಗಮನ ಸೆಳೆದಿತ್ತು. ಫ್ರೆಂಚ್ ಬಿರಿಯಾನಿ ಸಿನಿಮಾವನ್ನು ಪನ್ನಗಾಭರಣ ನಿರ್ದೇಶಿಸಿದ್ದರು.

  Shivaraj Kumar and Rakshith Shetty awarded Dadasaheb Phalke Award south 2020 | Filmibeat kannada
  ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಸಹ ನಟನೆ

  ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಸಹ ನಟನೆ

  ದಾನಿಶ್ ಸೇಠ್ ನಾಯಕನಾಗಿ ನಟಿಸುತ್ತಿರುವ ಮೂರನೇ ಸಿನಿಮಾ 'ಒನ್ ಕಟ್, ಟೂ ಕಟ್'. ಹಾಸ್ಯ ಸಿನಿಮಾಗಳ ನಡುವೆ ದಾನಿಶ್ ಸೇಠ್ ಅವರು ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾದಲ್ಲಿಯೂ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮ ಪಯಣದ ಮಧ್ಯದಲ್ಲಿ ದಾನಿಶ್ ಶೆಟ್ಟಿಯನ್ನು ಭೇಟಿಯಾಗುವ ಸನ್ನಿವೇಶ ಸಿನಿಮಾದಲ್ಲಿದೆಯಂತೆ.

  English summary
  New movie slated based on Danish Sait's fictional character 'Gopi'. Movie named as 'One cut Two cut'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X