twitter
    For Quick Alerts
    ALLOW NOTIFICATIONS  
    For Daily Alerts

    'ಟಾಕ್ ಆಫ್ ದ ಟೌನ್' ಕಡೆಯಿಂದ ಚಿತ್ರಗೀತೆಗಳಿಗೊಂದು ಪಾಡ್ ‍ಕಾಸ್ಟ್

    |

    ಟಾಕ್ ಆಫ್ ದ ಟೌನ್ ಕಡೆಯಿಂದ "ಸುನಾದವಿನೋದಿನಿ" ಎಂಬ ಹೊಸ ಪಾಡ್ ‍ಕಾಸ್ಟ್ ಆರಂಭವಾಗಿದೆ. ಚಿತ್ರಗೀತೆಗಳಿಗೆಂದೇ ಮೀಸಲಾಗಿರುವ ಈ ಪಾಡ್ ‍ಕಾಸ್ಟಿನಲ್ಲಿ ಚಿತ್ರಗೀತೆಗಳನ್ನೇನೂ ಪ್ರಸಾರ ಮಾಡುವುದಿಲ್ಲ. ಬದಲಿಗೆ, ಹಳೆಯ - ಹೊಸ ಹಾಡುಗಳನ್ನು ಕುರಿತು ಚರ್ಚೆ ಮಾಡಲಾಗುತ್ತದೆ.

    ಸಂಗೀತ ಸಾಹಿತ್ಯ ವಿಮರ್ಶಕರಂತೆ ಆಳವಾಗಿ ಯಾವ ವಿಮರ್ಶೆಯನ್ನೂ ಮಾಡದೆ, ಸಾಮಾನ್ಯ ಕೇಳುಗರಿಗೆ ಚಿತ್ರಗೀತೆಗಳು ಬೀರಿರಬಹುದಾದ ಪ್ರಭಾವ ಮತ್ತು ಅವುಗಳು ಕೊಟ್ಟಿರುವ, ಕೊಡಬಲ್ಲ ಸಂತೋಷದ ಬಗ್ಗೆ ಚರ್ಚೆ ಮಾಡಲಿದ್ದಾರೆ ವೆಂಕಟೇಶ್ ವಿಠಲಾಚಾರ್ ಮತ್ತು ಅರುಣ್ ಮೇಷ್ಟ್ರು ಇಬ್ಬರೂ. ಪ್ರತಿಯೊಂದು ಎಪಿಸೋಡ್ ಕೂಡ ಒಂದು ವಿಷಯಕ್ಕೆ ಸಂಬಂಧಿಸಿದಂತಿರುತ್ತದೆ. ಒಂದು ಎಪಿಸೋಡ್ ಯೋಡೆಲ್ ಕುರಿತಾದದ್ದಾರೆ, ಇನ್ನೊಂದು ಯಾವುದೋ ರಾಗದ ಬಗ್ಗೆಯಿರುತ್ತದೆ, ಮತ್ತೊಂದು ನಾಯಕ - ಗಾಯಕ ಜೋಡಿಯ ಕುರಿತಾದದ್ದಾಗಿರುತ್ತದೆ.

    ಒಟ್ಟಿನಲ್ಲಿ ಮನರಂಜನೆಗೆ ಯಾವುದೇ ಕೊರತೆಯಿಲ್ಲ. ಚಿತ್ರಗೀತೆಗಳಿಗೆಂದೇ ಮೀಸಲಾಗಿರುವ ಪಾಡ್ ‍ಕಾಸ್ಟ್ ಇದೇ ಮೊದಲನೆಯದು ಎಂದು ಹೇಳಲು ಟಾಕ್ ಆಫ್ ದ ಟೌನ್ ತಂಡವು ಹೆಮ್ಮೆ ಪಡುತ್ತದೆ. ಕನ್ನಡ ಮತ್ತು ಕನ್ನಡೇತರ ಚಿತ್ರಗೀತೆಗಳ ಬಗ್ಗೆ ಚರ್ಚೆ ನಡೆಸಿದರೂ ನಿರೂಪಣೆಯು ಕನ್ನಡದಲ್ಲೇ ಇರುವುದರಿಂದ, ಮತ್ತು ವಿಭಿನ್ನ ಶೈಲಿಯಲ್ಲಿ ಹಾಡುಗಳ ಕುರಿತು ಚರ್ಚೆ ಮಾಡುವುದರಿಂದ, "ಸುನಾದವಿನೋದಿನಿ"ಯು ಕನ್ನಡದ ಶ್ರೋತೃಗಳ ಮನಸ್ಸನ್ನು ಗೆಲ್ಲುವುದರಲ್ಲಿ ಅಚ್ಚರಿಯಿಲ್ಲ.

    New Podcast For Film Songs

    "ಸುನಾದವಿನೋದಿನಿ" ಪಾಡ್ ‍ಕಾಸ್ಟಿನಲ್ಲಿ ಸದ್ಯ ಎರಡು ಎಪಿಸೋಡುಗಳು ಬಂದಿದ್ದೂ, ಒಂದು ವಿಶೇಷ ಸಂಚಿಕೆಯೂ ಹೊರಹೊಮ್ಮಿದೆ. ಹಾಡುಗಳ ತುಣುಕುಗಳೊಂದಿಗೆ ಅವುಗಳನ್ನು ಸವಿಯುವ ರೀತಿಯನ್ನೂ, ಹಾಡುಗಳಲ್ಲಿ ಅಡಗಿರುವ ಸಣ್ಣ ಪುಟ್ಟ ರಹಸ್ಯಗಳನ್ನೂ ಕೇಳುಗರ ಮುಂದೆ ತೆರೆದಿಡುತ್ತಾರೆ. ವೆಂಕಟೇಶ್ ಅವರು ತಮ್ಮ ಗಿಟಾರ್ ವಾದನದೊಂದಿಗೆ ಇಂಪಾಗಿ ಹಾಡಿದರೆ ಅವರ ಜೊತೆಗೆ ಅರುಣ್ ಮೇಷ್ಟ್ರು ಅವರು ಹಾಡುಗಳ ವಿಶ್ಲೇಷಣೆಯನ್ನು ವಿವರವಾಗಿ ಮಾಡುತ್ತಾರೆ.

    ಹತ್ತು ಎಪಿಸೋಡುಗಳ ಒಂದು ಸೀಸನ್ ‍ಅನ್ನು ಯೋಜನೆ ಹಾಕಿಕೊಂಡಿರುವ ಟಾಕ್ ಆಫ್ ದ ಟೌನ್ ಈ ಪಾಡ್ ‍ಕಾಸ್ಟಿನ ಹತ್ತಾರು ಸೀಸನ್ ‍ಗಳನ್ನು ಬಿತ್ತರಿಸಲು ಸಿದ್ಧವಾಗಿದೆ.

    English summary
    Talk of the town introducied new podcast for only film songs
    Tuesday, July 30, 2019, 18:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X