ರಾಬರ್ಟ್-ಕೋಟಿಗೊಬ್ಬನ ಜೊತೆ ಕಿಚ್ಚು ಹಚ್ಚಿದ ಸಲಗ, ಶೋಕಿವಾಲ

ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕಿಚ್ಚ ಸುದೀಪ್ ನಟಿಸಿರುವ ಕೋಟಿಗೊಬ್ಬ 3 ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು. ಸ್ಟೈಲಿಶ್ ಲುಕ್ನನಲ್ಲಿ ಸುದೀಪ್ ಅವರನ್ನು ನೋಡಿ ಅಭಿಮಾನಿಗಳು ಸಂಭ್ರಮಿಸಿದರು.

ಅದಾದ ಮರುದಿನ ಆಂಜನೇಯನ ಗೆಟಪ್ ನಲ್ಲಿ 'ರಾಬರ್ಟ್' ದರ್ಶನ್ ಎಂಟ್ರಿಯಾದರು. ಡಿ ಬಾಸ್ ಹನುಮನ ಲುಕ್ ಗೆ ಸಿನಿಪ್ರೇಕ್ಷಕರು ಕುಣಿದು ಕುಪ್ಪಳಿಸಿದರು. ಶಿವಣ್ಣನ ಭಜರಂಗಿ 2 ಚಿತ್ರದ ಫಸ್ಟ್ ಲುಕ್ ವಾಹ್ ಎನ್ನುವಂತಿತ್ತು.

ಈ ಮೂರು ಪ್ರಮುಖ ಸ್ಟಾರ್ ನಟರ ಚಿತ್ರಗಳ ಜೊತೆ ಸಲಗ, ಶೋಕಿಲಾಲ ಸೇರಿದಂತೆ ಹಲವು ಚಿತ್ರಗಳು ಸರ್ಪ್ರೈಸ್ ನೀಡಿದ್ದಾರೆ. ಯಾವುದು? ಮುಂದೆ ಓದಿ....

ನಾಯಕಿ ಕೈಯಲ್ಲಿ ಲಾಂಗ್

ನಾಯಕಿ ಕೈಯಲ್ಲಿ ಲಾಂಗ್

ಹೀರೋ ಲಾಂಗ್ ಹಿಡಿಯೋದು ಸಾಮಾನ್ಯ. ವಿಲನ್ ಲಾಂಗ್ ಹಿಡಿಯೋದು ಸಹಜ. ಆದರೆ ಹೀರೋಯಿನ್ ಲಾಂಗ್ ಹಿಡಿಯೋದು ಅಪರೂಪ. ದುನಿಯಾ ವಿಜಯ್ ನಟಿಸುತ್ತಿರುವ ಸಲಗ ಚಿತ್ರದ ಸಂಕ್ರಾಂತಿ ಹಬ್ಬದ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಪೋಸ್ಟರ್ ನಲ್ಲಿ ನಾಯಕಿ ಸಂಜನಾ ಆನಂದ್ ತಮ್ಮ ಕೈಯಲ್ಲಿ ಲಾಂಗ್ ಹಿಡಿದು ಮಿಂಚಿದ್ದಾರೆ. ಈ ಪೋಸ್ಟರ್ ಚಿತ್ರರಸಿಕರ ಕುತೂಹಲ ಕೆರಳಿಸಿದೆ.

ಸಂಭ್ರಮ ಹೆಚ್ಚಿಸಿದ ಶೋಕಿವಾಲ

ಸಂಭ್ರಮ ಹೆಚ್ಚಿಸಿದ ಶೋಕಿವಾಲ

ಸಂಜನಾ ಆನಂದ್ ಅವರಿಗೆ ಸಂಕ್ರಾಂತಿ ಹಬ್ಬ ಬಹಳ ವಿಶೇಷವೆನಿಸಿಕೊಂಡಿದೆ. ಅಜಯ್ ರಾವ್ ಜೊತೆ ನಟಿಸುತ್ತಿರುವ ಶೋಕಿವಾಲ ಚಿತ್ರದ ಪೋಸ್ಟರ್ ಕೂಡ ಹಬ್ಬಕ್ಕೆ ತೆರೆಕಂಡಿದೆ. ಈ ಪೋಸ್ಟರ್ ಕನ್ನಡ ಚಿತ್ರರಂಗದಲ್ಲಿ ಸಂಕ್ರಾಂತಿ ಹಬ್ಬದ ಮೆರುಗು ತಂದಿದೆ.

ಶುಭಕೋರಿದ ಅವತಾರ ಪುರುಷ

ಶುಭಕೋರಿದ ಅವತಾರ ಪುರುಷ

ಸಂಕ್ರಾಂತಿ ಹಬ್ಬಕ್ಕೆ ಅವತಾರ ಪುರುಷ ಚಿತ್ರತಂಡವೂ ಶುಭಕೋರಿದೆ. ಸಂಕ್ರಾಂತಿ ಪೋಸ್ಟರ್ ಬಿಡುಗಡೆ ಮಾಡಿ, ನಟ ಶರಣ್ ಮತ್ತು ಆಶಿಕಾ ರಂಗನಾಥ್ ಸಂಪ್ರದಾಯ ಲುಕ್ ನಲ್ಲಿ ಮಿಂಚಿದ್ದಾರೆ.

ಬುದ್ದಿವಂತ ಪೋಸ್ಟರ್

ಬುದ್ದಿವಂತ ಪೋಸ್ಟರ್

ಸುಗ್ಗಿ ಹಬ್ಬಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರು ವಿಶೇಷವಾಗಿ ಶುಭಕೋರಿದ್ದಾರೆ. ಉಪ್ಪಿ ಅಭಿನಯದ ಬುದ್ದಿವಂತ 2 ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಆಕ್ಷನ್ ಮೂಡ್ನಲ್ಲಿ ಉಪ್ಪಿ ಅಬ್ಬರಿಸಿದ್ದಾರೆ.

ಧ್ರುವ ಸರ್ಜಾ ಪೊಗರು

ಧ್ರುವ ಸರ್ಜಾ ಪೊಗರು

ಭಾರಿ ನಿರೀಕ್ಷೆ ಮೂಡಿಸಿರುವ ಪೊಗರು ಚಿತ್ರತಂಡ ಸಂಕ್ರಾಂತಿ ಹಬ್ಬಕ್ಕೊಂದು ಪೋಸ್ಟರ್ ಬಿಟ್ಟಿದೆ. ಸದ್ಯದಲ್ಲೇ ಆಡಿಯೋ ಬಿಡುಗಡೆ ಎಂಬ ಮಾಹಿತಿ ನೀಡಿರುವ ಚಿತ್ರತಂಡ, ರಶ್ಮಿಕಾ ಮತ್ತು ಧ್ರುವ ಸರ್ಜಾ ಪೋಸ್ಟರ್ ರಿಲೀಸ್ ಮಾಡಿದೆ.

'ಮುಗಿಲ್ ಪೇಟೆ' ಜೊತೆ 'ಶಿವಾಜಿ '

'ಮುಗಿಲ್ ಪೇಟೆ' ಜೊತೆ 'ಶಿವಾಜಿ '

ಮನೋರಂಜನ್ ರವಿಚಂದ್ರನ್ ಅಭಿನಯಿಸುತ್ತಿರುವ ಮುಗಿಲ್ ಪೇಟೆ, ರಮೇಶ್ ಅರವಿಂದ್ ಅವರ ಶಿವಾಜಿ ಸೂರತ್ಕಲ್, ಯಜ್ಞಾ ಶೆಟ್ಟಿ ನಟನೆಯ ಆಕ್ಟ್ 1978 ಚಿತ್ರತಂಡಗಳು ಸಂಕ್ರಾಂತಿ ಪೋಸ್ಟರ್ ಬಿಡುಗಡೆ ಮಾಡಿದೆ.

More from Filmibeat

English summary
Darshan's Roberrt, sudeep kotigobba 3, duniya vijay's salaga, dhruva sarja pogaru movie poster released for Sankranthi festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X