ಸುದೀಪ್ ಬರ್ತಡೇಗೆ 'ಸೈರಾ' ತಂಡದಿಂದ ಸರ್ಪ್ರೈಸ್ ಉಡುಗೊರೆ
ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಸೈರಾ ನರಸಿಂಹ ರೆಡ್ಡಿ ಚಿತ್ರತಂಡ ಸರ್ಪ್ರೈಸ್ ಉಡುಗೊರೆ ನೀಡಿದೆ. ಮೆಗಾಸ್ಟಾರ್ ಚಿರಂಜೀವಿ ನಾಯಕನಟನಾಗಿ ಅಭಿನಯದ 151ನೇ ಚಿತ್ರ ಸೈರಾ ನರಸಿಂಹ ರೆಡ್ಡಿ.
ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಕಿಚ್ಚನ ಗೆಟಪ್ ಬಹಿರಂಗವಾಗಿದೆ. ಸುದೀಪ್ ಅವರ ಫಸ್ಟ್ ಲುಕ್ ಈ ಹಿಂದೆಯೇ ಬಿಡುಗಡೆಯಾಗಿತ್ತು.

ಇದೀಗ, ಸುದೀಪ್ ಬರ್ತಡೇ ಹಿನ್ನೆಲೆ ಸೈರಾ ತಂಡ ಮತ್ತೊಂದು ಪೋಸ್ಟರ್ ಅನಾವರಣ ಮಾಡಿದೆ. ಅವುಕು ರಾಜು ಪಾತ್ರದಲ್ಲಿ ಅಭಿನಯಿಸುತ್ತಿರುವ ಸುದೀಪ್ ಅವರ ಹೊಸ ಪೋಸ್ಟರ್ ರಿಲೀಸ್ ಮಾಡಿ ಜನುಮದಿನಕ್ಕೆ ಶುಭಕೋರಿದ್ದಾರೆ ನಿರ್ದೇಶಕ ಸುರೇಂದರ್ ರೆಡ್ಡಿ.
ಚಿರಂಜೀವಿ ಜೊತೆಯಲ್ಲಿ ಸುದೀಪ್, ವಿಜಯ್ ಸೇತುಪತಿ, ಜಗಪತಿ ಬಾಬು, ನಯನತಾರ, ತಮನ್ನಾ, ಅನುಷ್ಕಾ ಶೆಟ್ಟಿ, ರವಿ ಕಿಶನ್, ಅಮಿತಾಭ್ ಬಚ್ಚನ್ ಸೇರಿದಂತೆ ಬಹುದೊಡ್ಡ ತಾರಬಳಗ ಈ ಚಿತ್ರದಲ್ಲಿದೆ.
ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡದಲ್ಲಿ ಅಕ್ಟೋಬರ್ 2 ರಂದು ಸೈರಾ ನರಸಿಂಹ ರೆಡ್ಡಿ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.


Click it and Unblock the Notifications











